ಗಾಯಗೊಂಡರೂ ತಂಡಕ್ಕೆ ಆಡಿದ್ದ ವ್ಯಾಟ್ಸನ್ ಗೆ ಈಗ ನಡೆಯಲೂ ಕಷ್ಟ

ಐಪಿಎಲ್ ಫೈನಲ್ ಪಂದ್ಯದ ವೇಳೆ ಗಾಯಗೊಂಡಿದ್ದ ಶೇನ್ ವ್ಯಾಟ್ಸನ್

Team Udayavani, May 16, 2019, 4:17 PM IST

ಮುಂಬೈ: ಕಳೆದ ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಶೇನ್ ವ್ಯಾಟ್ಸನ್ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಡೈವ್ ಹೊಡೆಯುವ ಸಮಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದರೂ ಯಾರಿಗೂ ಹೇಳದೇ ವ್ಯಾಟ್ಸನ್ ಆಟ ಮುಂದುವರಿಸಿದ್ದರು. ವ್ಯಾಟ್ಸನ್ ಕಾಲಿನಿಂದ ರಕ್ತ ಸೋರುವ ಫೋಟೋ ಭಾರಿ ವೈರಲ್ ಆಗಿತ್ತು. ಶೇನ್ ಸಾಹಸಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು.

ಆದರೆ ಸದ್ಯ ವ್ಯಾಟ್ಸನ್ ನಡೆಯಲೂ ಕಷ್ಟ ಪಡುತ್ತಿದ್ದಾರೆ. ಪಂದ್ಯದ ವೇಳೆಯಲ್ಲಿ ಗಾಯ ಮಾಡಿಕೊಂಡಿದ್ದ ಶೇನ್ ಕಾಲಿಗೆ ಪಂದ್ಯ ಮುಗಿದ ನಂತರ ಆರು ಹೊಲಿಗೆ ಹಾಕಲಾಗಿತ್ತು. ಈಗ ಶೇನ್ ವ್ಯಾಟ್ಸನ್ ಕುಂಟುತ್ತಾ ನಡೆಯುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳು ಆಸೀಸ್ ಮೂಲದ ಆಟಗಾರನ ಕಾಲು ನೋವು ಶೀಘ್ರ ಗುಣಮುಖವಾಗಲು ಹಾರೈಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ