ಶೂಟಿಂಗ್: ಭಾರತದ ಭವಿಷ್ಯದ ಶೂಟರ್ ಸಿಫ್ಟ್ ಕೌರ್ ಸಮ್ರಾಗೆ ಕಂಚು
Team Udayavani, Mar 27, 2023, 6:06 AM IST
ಭೋಪಾಲ್: ಭಾರತದ ಭವಿಷ್ಯದ ಶೂಟರ್ ಸಿಫ್ಟ್ ಕೌರ್ ಸಮ್ರಾ ಐಎಸ್ಎಸ್ಎಫ್ ರೈಫಲ್-ಪಿಸ್ತೂಲ್ ವಿಶ್ವಕಪ್ನಲ್ಲಿ ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ. ಭಾನುವಾರದ 50 ಮೀ. ರೈಫಲ್ 3ಪಿ ವಿಭಾಗದಲ್ಲಿ ಅವರು ಈ ಸಾಧನೆಗೈದರು. ಅಂತಾರಾಷ್ಟ್ರೀಯ ಮಟ್ಟದ ಸೀನಿಯರ್ ಸ್ಪರ್ಧೆಯಲ್ಲಿ ಸಮ್ರಾ ಗೆದ್ದ ದ್ವಿತೀಯ ಪದಕ ಇದಾಗಿದೆ.
ಹಾಲಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿರುವ ಸಿಫ್ಟ್ ಕೌರ್ ಸಮ್ರಾ ರ್ಯಾಂಕಿಂಗ್ ರೌಂಡ್ನಲ್ಲಿ 403.9 ಅಂಕಗಳೊಂದಿಗೆ ತೃತೀಯ ಸ್ಥಾನಿಯಾದರು. ಚೀನಾದ ಝಾಂಗ್ ಕ್ವಿಯೊಂಗ್ಯು ಚಿನ್ನ(414.7) ಮತ್ತು ಜೆಕ್ ಗಣರಾಜ್ಯದ ಅನೆಟಾ ಬ್ರಬ್ಕೋವಾ(411.3) ಬೆಳ್ಳಿ ಗೆದ್ದರು. ಅಂಜುಮ್ ಮೌದ್ಗಿಲ್, ಮಾನಿನಿ ಕೌಶಿಕ್ ವಿಫಲರಾದರು.
ಚಾಂಪಿಯನ್ಶಿಪ್ನಲ್ಲಿ ಚೀನಾದ ಪ್ರಭುತ್ವ ಮುಂದುವರಿದಿದೆ. ಅದು 7 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದು ಅಗ್ರಸ್ಥಾನ ಅಲಂಕರಿಸಿದೆ. ಭಾರತ ದ್ವಿತೀಯ ಸ್ಥಾನದಲ್ಲಿದೆ. ಒಂದು ಚಿನ್ನ, ಒಂದು ಬೆಳ್ಳಿ ಹಾಗೂ 5 ಕಂಚು ಜಯಿಸಿದ್ದು ಭಾರತದ ಸಾಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ