
ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?
Team Udayavani, Mar 31, 2023, 8:10 AM IST

ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆಯೇ? ಚುನಾವಣೆ ಘೋಷಣೆ ಬೆನ್ನಲ್ಲೇ ಈ ವಿಚಾರ ಮತ್ತೆ ಚರ್ಚೆಯಾಗತೊಡಗಿದೆ. ಈ ಪ್ರಸ್ತಾವ ನಿಜವೇ ಆದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಪ್ರಬಲ ಪೈಪೋಟಿ ಇರುವ ಕ್ಷೇತ್ರಗಳ ಸಾಲಿಗೆ ವರುಣಾ ಸೇರ್ಪಡೆಯಾಗಲಿದೆ.
ಇದುವರೆಗೆ ಶಿಕಾರಿಪುರಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಂದೆ ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಸ್ವತಃ ಯಡಿಯೂರಪ್ಪ ಘೋಷಿಸಿದ್ದರು ಕೂಡ.ಆದರೆ ಮೂರು ದಿನಗಳಿಂದ ವರುಣಾಕ್ಕೆ ವಿಜಯೇಂದ್ರ ಹೆಸರು ಕೇಳಿಬರುತ್ತಿದೆ. ಈ ಅಲ್ಪಾವಧಿಯಲ್ಲೇ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕೂಡ ಅದಕ್ಕೆ ಪೂರಕ ವಾಗಿಯೇ ಇವೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ ಈ ಸಂಬಂಧ ನೀಡಿರುವ ಸುಳಿವು ಪುಷ್ಟಿ ನೀಡಿದೆ.
ವರುಣಾದಲ್ಲಿ ಮೂರ್‍ನಾಲ್ಕು ದಿನಗಳಿಂದ ಸಕ್ರಿಯವಾಗಿರುವ ವಿಜಯೇಂದ್ರ, ಚುನಾವಣೆ ಪ್ರಚಾರ ಸೇರಿದಂತೆ ಹಲವು ಕಾರ್ಯ ಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಗುರುವಾರ ನಗರದ ಚಾಮರಾಜ ಪೇಟೆಯಲ್ಲಿನ ಆರ್‌ಎಸ್‌ಎಸ್ ಕಚೇರಿ “ಕೇಶವ ಕೃಪಾ’ಕ್ಕೆ ದಿಢೀರ್ ಭೇಟಿ ನೀಡಿ ಚರ್ಚೆ ನಡೆಸಿದರು. ರಾಮನವಮಿ ಪ್ರಯುಕ್ತದ ಈ ಭೇಟಿಯಲ್ಲಿ ವರುಣಾ ವಿಚಾರವೂ ಪ್ರಸ್ತಾವವಾಯಿತು ಎನ್ನಲಾಗಿದೆ. “ಸಿದ್ದರಾಮಯ್ಯ ಗೆಲುವು ಸುಲಭವಿದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಹೇಳುವ ಮೂಲಕ ಯಡಿಯೂರಪ್ಪ ಈ ಸ್ಪರ್ಧೆಯ ಸುಳಿವು ನೀಡಿದ್ದಾರೆ.
2018ರಲ್ಲೂ ವರುಣಾಕ್ಕೆ ವಿಜಯೇಂದ್ರ ಹೆಸರು ಇದೇ ಮೊದಲಲ್ಲ. 2018ರಲ್ಲಿ ಸಿದ್ದರಾಮಯ್ಯ ಪುತ್ರ ಶಾಸಕ ಡಾ| ಯತೀಂದ್ರ ವಿರುದ್ಧವೂ ಕೇಳಿಬಂದಿತ್ತು.
ಟಾಪ್ ನ್ಯೂಸ್
