
ಸ್ಮೃತಿ ಇರಾನಿ ಮಗಳು ಶಾನೆಲ್ಲೆ ಇರಾನಿಯ ವಿವಾಹ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
Team Udayavani, Feb 8, 2023, 4:17 PM IST

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಶಾನೆಲ್ಲೆ ಇರಾನಿಯ ವಿವಾಹ ಫೆ.9ರಂದು ರಾಜಸ್ಥಾನದ ನಾಗೌರ್‌ನಲ್ಲಿ ನಡೆಯಲಿದೆ. ಗುರುವಾರ ಭಾರತೀಯ ಮೂಲದ ಕೆನಡಾ ನಿವಾಸಿ ಅರ್ಜುನ್ ಭಲ್ಲರನ್ನು ಶಾನೆಲ್ಲೆ ಇರಾನಿ ವರಿಸಲಿದ್ದಾರೆ. 2021 ರ ಡಿಸೆಂಬರ್‌ನಲ್ಲಿಯೇ ಶಾನೆಲ್ಲೆ ಮತ್ತು ಅರ್ಜುನ್ ಭಲ್ಲ ನಿಶ್ಚಿತಾರ್ಥ ನೆರವೇರಿತ್ತು.
ಸ್ಮೃತಿ ಇರಾನಿಯ ಪತಿ ಝುಬಿನ್ ಇರಾನಿ ಅವರ ಮೊದಲ ಪತ್ನಿ ಮೋನಾ ಅವರ ಪುತ್ರಿಯಾಗಿರುವ ಶಾನೆಲ್ಲೆ ಇರಾನಿ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಅಲ್ಲದೆ ವಾಷಿಂಗ್ಟನ್ ಡಿ.ಸಿಯಲ್ಲಿರುವ ಜಾರ್ಜ್‌ಟೌನ್ ವಿ.ವಿಯಿಂದ ಎಲ್‌ಎಲ್‌ಎಂ ಪದವಿಯನ್ನೂ ಪಡೆದಿದ್ದಾರೆ.
2021 ರ ಡಿಸೆಂಬರ್‌ನಲ್ಲಿಯೇ ಶಾನೆಲ್ಲೆ ಮತ್ತು ಅರ್ಜುನ್ ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅರ್ಜುನ್ ಭಲ್ಲ ಎಂಬಿಎ ಪದವೀಧರರಾಗಿದ್ದು ಕುಟುಂಬದ ಜೊತೆಯಲ್ಲಿ ಕೆನಡದಲ್ಲಿ ವಾಸಿಸುತ್ತಿದ್ದಾರೆ.
ಶಾನೆಲ್ಲೆ ಇರಾನಿ ಮತ್ತು ಅರ್ಜುನ್ ಭಲ್ಲರ ವಿವಾಹ ಸಂಮಾರಂಭ ರಾಜಸ್ಥಾನದ ನಾಗೌರ್ ಜಿಲ್ಲೆಯ ಖಿಮ್ಸರ್ ಫೋರ್ಟ್‌ನಲ್ಲಿ ನಡೆಯಲಿದೆ. 500 ವರ್ಷ ಹಳೆಯದಾದ ಖಿಮ್ಸರ್ ಫೋರ್ಟ್ ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಒಡೆತನದಲ್ಲಿದ್ದು ಅದನ್ನು ಪಾರಂಪರಿಕ ಹೋಟೆಲನ್ನಾಗಿ ಪರಿವರ್ತಿಸಲಾಗಿದೆ.
ಕೇಂದ್ರ ಸಚಿವೆಯಾದ ಬಳಿಕ, ಎಷ್ಟೇ ಬ್ಯುಸಿಯಾಗಿದ್ರೂ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯ ನೀಡುವ ಸ್ಮೃತಿ ಇರಾನಿ ತಮ್ಮ ಕುಟುಂಬದ ಜೊತೆಗೆ ಕ್ಲಿಕ್ಕಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ನ್ಯಾಯಾಲಯದಿಂದ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ

ಮುಳುಗುತ್ತಿದ್ದವರನ್ನು ರಕ್ಷಿಸಿದ ಬಾಲಕನಿಗೆ ಗೋವಾ ಮುಖ್ಯಮಂತ್ರಿಯಿಂದ 1 ಲಕ್ಷ ರೂ. ಬಹುಮಾನ

ಪ್ರಧಾನಿ ಮೋದಿ ಪದವಿಯ ವಿವರ ಪ್ರಶ್ನೆ;ಕೇಜ್ರಿವಾಲ್‌ಗೆ ದಂಡ ಹಾಕಿದ ಕೋರ್ಟ್

ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು

ʻಮೋದಿ ಹಟಾವೋ, ದೇಶ್ ಬಚಾವೋʼ ಪೋಸ್ಟರ್: ಗುಜರಾತ್‌ನಲ್ಲಿ 8 ಜನ ಪೋಲಿಸ್ ವಶಕ್ಕೆ