

Team Udayavani, Jul 18, 2024, 7:35 AM IST
ಹೊಸದಿಲ್ಲಿ: ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಾಷ್ಟ್ರೀಯ ಆಯ್ಕೆ ಸಮಿತಿ ಜತೆ ಚರ್ಚೆ ನಡೆಸಿದ್ದಾರೆ. ಆನ್‌ಲೈನ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಇವರ ನಡುವೆ ಮಾತುಕತೆ ನಡೆದಿತ್ತು ಎಂಬುದಾಗಿ ಕ್ರಿಕೆಟ್ ವೆಬ್‌ಸೈಟ್ ಒಂದು ವರದಿ ಮಾಡಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸದಸ್ಯರೆಲ್ಲ ಇದರಲ್ಲಿ ಪಾಲ್ಗೊಂಡಿದ್ದರು. ಗಂಭೀರ್ ತಮ್ಮ ಹೊಸದಿಲ್ಲಿ ನಿವಾಸದಿಂದಲೇ ಈ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದರು. ಭವಿಷ್ಯದ ಟೀಮ್ ಇಂಡಿಯಾ, ತನ್ನ ಅಪೇಕ್ಷೆಯ ತಂಡ ಹಾಗೂ ನಾಯಕತ್ವದ ಕುರಿತು ಮಾತುಕತೆ ನಡೆಯಿತು. ಆಯ್ಕೆ ವಿಷಯದಲ್ಲಿ ತಾನು ಕೈಯಾಡಿಸುವುದಿಲ್ಲ, ಆದರೆ ತನ್ನ ಬಯಕೆಯ ತಂಡ ಹೇಗಿರಬೇಕು ಎಂಬ ಕುರಿತು ಗಂಭೀರ್ ಹೇಳಿಕೊಂಡರು ಎಂದು ವರದಿಯಾಗಿದೆ. ಮೂರೂ ಮಾದರಿಗಳಲ್ಲಿ ಆಡಬಲ್ಲ ಕ್ರಿಕೆಟಿಗರನ್ನು ತಾನು ಬಯಸುವುದಾಗಿ ಕೋಚ್ ಆದ ಬಳಿಕ ಗಂಭೀರ್ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.
ನಾಯಕರಾರು ಲಂಕಾ ಸರಣಿಗೆ?
ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ನಾಯಕತ್ವದ ಕುರಿತು ಏನೇನು ಮಾತುಕತೆ ನಡೆಯಿತು ಎಂದು ತಿಳಿದು ಬಂದಿಲ್ಲ. ಟಿ20 ಹಾಗೂ ಏಕದಿನ ತಂಡಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿವೆ. ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅಥವಾ ಸೂರ್ಯಕುಮಾರ್ ಯಾದವ್, ಏಕದಿನ ಸರಣಿಗೆ ರೋಹಿತ್ ಶರ್ಮ ನಾಯಕರಾಗುವ ಸಾಧ್ಯತೆ ಇದೆ.
ಏಕದಿನ ಆಡಲಿರುವ ರೋಹಿತ್
ರೋಹಿತ್ ಶರ್ಮ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ಆಡು ವು ದಾಗಿ ಹೇಳಿರುವ ಬಗ್ಗೆ ಈ ಸಭೆ ಯಲ್ಲಿ ಸುಳಿವು ಲಭಿಸಿದೆ. ಐಸಿಸಿ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾ ವಳಿಗೂ ಮುನ್ನ ಹೆಚ್ಚಿನ ಏಕದಿನ ಪಂದ್ಯ ಗಳಿಲ್ಲದ ಕಾರಣ ರೋಹಿತ್ ಈ ಸರಣಿ ಯಲ್ಲಿ ಆಡುವುದು ಬಹುತೇಕ ಖಚಿತ.
ಅಯ್ಯರ್ ಪುನರಾಗಮನ?
ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ಲಭಿಸುವ ಕಾರಣ ಶ್ರೇಯಸ್ ಅಯ್ಯರ್ ಏಕದಿನ ತಂಡವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹಾಗೆಯೇ ಕೆ.ಎಲ್. ರಾಹುಲ್ ಕೂಡ.
ಅಭ್ಯಾಸ ಆರಂಭಿಸಿದ ಶಮಿ
ಹೊಸದಿಲ್ಲಿ: ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ಬೌಲಿಂಗ್ ವೀಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಏಕದಿನ ವಿಶ್ವಕಪ್ ವೇಳೆ ಹಿಮ್ಮಡಿ ಗಾಯಕ್ಕೀಡಾಗಿದ್ದ ಶಮಿ, 9 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಟಿ20 ವಿಶ್ವಕಪ್‌ನಲ್ಲೂ ಅವರಿಗೆ ಆಡಲಾಗಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದರು.
Ad
INDvsENG: ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಪಿನ್ನರ್ ಶೋಯೆಬ್ ಬಶೀರ್
AUS vs WI : ಕೇವಲ 27 ರನ್‌ಗೆ ಆಲೌಟ್ ಆದ ವೆಸ್ಟ್ ಇಂಡೀಸ್ – ತವರಿನಲ್ಲೇ ವೈಟ್ ವಾಶ್
Karnataka: 173 ಕಿ.ಮೀ. ಓಡಿ ಜಪಾನ್ ರೇಸ್ ಗೆದ್ದ ಕನ್ನಡತಿ ಅಶ್ವಿನಿ ಗಣಪತಿ!
FIDE ಮಹಿಳಾ ವಿಶ್ವಕಪ್ ಚೆಸ್: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ
Tokyo ಜಪಾನ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ
You seem to have an Ad Blocker on.
To continue reading, please turn it off or whitelist Udayavani.