
ಬ್ರಿಟಿಷರಿಗೆ ಗುಲಾಮರಾದವರಿಂದ ಕಲಿಯಬೇಕಾದ್ದಿಲ್ಲ: ಬಿ.ಕೆ. ಹರಿಪ್ರಸಾದ್
ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆಂದರೆ ಅದಕ್ಕೆ ವಿರುದ್ಧವಾಗಿ ನೂರು ಪಟ್ಟು ಹೆಚ್ಚಾಗಿ ಮಾಡುವ ಶಕ್ತಿ ನಮಗಿದೆ
Team Udayavani, Jan 25, 2022, 10:05 AM IST

ಮಂಗಳೂರು, ಜ.24: ಬಿಜೆಪಿ ಯವರು ಕಾಂಗ್ರೆಸ್‌ಗೆ ಸವಾಲು ಹಾಕುವ ಧೈರ್ಯ ತೋರಿಸು ವುದು ಬೇಡ. ಬ್ರಿಟಿಷರಿಗೆ ಗುಲಾಮರಾದವರಿಂದ ನಾವು ಕಲಿಯ ಬೇಕಾದ್ದೇನಿಲ್ಲ. ನಾವು ಬ್ರಿಟಿಷರ ಸವಾಲಿಗೇ ಭಯ ಪಡದವರು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಕೈ ಕಾಲಿಗೆ ಕೋಳ ಬಿಗಿದು ಈಜಿ ದಾಖಲೆ; 3.55 ಕಿ.ಮೀ.ಕಡಲಲ್ಲಿಈಜಿದ ಗಂಗಾಧರ್
ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಬಿಜೆಪಿ ನಾಯಕರ ಹೇಳಿಕೆಯೊಂದರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆಂದರೆ ಅದಕ್ಕೆ ವಿರುದ್ಧವಾಗಿ ನೂರು ಪಟ್ಟು ಹೆಚ್ಚಾಗಿ ಮಾಡುವ ಶಕ್ತಿ ನಮಗಿದೆ ಎಂದರು.
ನಾರಾಯಣ ಗುರುಗಳ ಸ್ತಬ್ಧ ಚಿತ್ರ ಯಾಕೆ ತಿರಸ್ಕರಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ಮುಖ್ಯಮಂತ್ರಿ ವಿವರಣೆ ನೀಡಲಿ ಎಂದು ಹೇಳಿದರು.
ಶಾಸಕ ಯು.ಟಿ.ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಮೊಯ್ದಿನ್ ಬಾವಾ, ಐವನ್ ಡಿಸೋಜಾ, ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಬಿ. ಇಬ್ರಾಹೀಂ, ಪುರುಷೋತ್ತ ಚಿತ್ರಾಪುರ, ಗಣೇಶ್ ಪೂಜಾರಿ, ಚಿತ್ತರಂಜನ್, ಲುಕ್ಮಾನ್ ಬಂಟ್ವಾಳ, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
