ಸ್ಕಾಲರ್‌ಶಿಪ್‌ಗಾಗಿ ಕ್ರಿಕೆಟ್‌ ತ್ಯಜಿಸಿ ಜಾವೆಲಿನ್‌ ತ್ರೋವರ್‌ ಆದ ಒಲಿಂಪಿಕ್‌ ಮೆಡಲಿಸ್ಟ್ ಕಥೆ…

ಆ್ಯಥ್ಲೆಟಿಕ್ಸ್ ನಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಸುನೆಟ್‌ ಅವರ ಉತ್ಸಾಹ ಇನ್ನೂ ಬತ್ತಿಲ್ಲ.

Team Udayavani, Jan 26, 2023, 5:30 PM IST

ವಾರಾಹಿ ಯೋಜನೆ; ಇಂದ್ರಾಳಿ ನೀರಿನ ಟ್ಯಾಂಕ್‌ ಪೂರ್ಣ-9.9 ಲಕ್ಷ ಲೀಟರ್‌, 1,500 ಮನೆಗಳಿಗೆ ನೀರು

ಅವರು ಕ್ರಿಕೆಟರ್‌ ಆಗಿ ಬೆಳೆಯಬೇಕೆಂದು ಕನಸು ಕಂಡವರು. ಅದರಂತೆ ತನ್ನ ಪ್ರತಿಭೆಯ ಮೂಲಕ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಾನವನ್ನು ಕೂಡ ಪಡೆಯುತ್ತಾರೆ. ಆದರೆ ಬಡತನದ ಕಾರಣವಾಗಿ ತಾನು ಓದುವ ಕಾಲೇಜಿನಲ್ಲಿ ಆ್ಯಥ್ಲೆಟಿಕ್ಸ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್‌ಶಿಪ್‌ ಸಿಗುತ್ತದೆ ಎನ್ನುವ ಕಾರಣಕ್ಕೆ ತನ್ನಿಷ್ಟದ ಕ್ರಿಕೆಟ್‌ ಅನ್ನು ತ್ಯಜಿಸಿ ಜಾವೆಲಿನ್‌ ತ್ರೋವರ್‌ ಆಗುತ್ತಾರೆ. ಜತೆಗೆ ದೇಶಕ್ಕಾಗಿ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಾರೆ. ಅವರೇ ಸುನೆಟ್‌ ಸ್ಟೆಲ್ಲಾ ವಿಲ್ಜೊಯೆನ್‌!

1983 ಅಕ್ಟೋಬರ್‌ 6ರಂದು ದಕ್ಷಿಣ ಆಫ್ರಿಕಾದ ರಸ್ಟನ್‌ಬರ್ಗ್‌ನ  ಟ್ರಾನ್ಸ್ ವಾಲ್‌ನಲ್ಲಿ ಜನಿಸಿದ ಸುನೆಟ್‌ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಎಂದರೆ ಅತೀವ ಆಸಕ್ತಿ. ತನ್ನ ಸಹೋದರ ಹಾಗೂ ಇತರ ಗೆಳೆಯರ ಜತೆ ಯಾವಾಗಲೂ ಕ್ರಿಕೆಟ್‌ ಆಡುತ್ತಿದ್ದರು. ಕ್ರಿಕೆಟ್‌ನಲ್ಲಿ ತರಬೇತಿಯನ್ನು ಪಡೆಯುವ ಇವರು 2000ರಲ್ಲಿ ತಮ್ಮ 17ನೇ ವಯಸ್ಸಿಗೆ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗುತ್ತಾರೆ. ಆ ಸಮಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಮಹಿಳಾ ಆಟಗಾರ್ತಿ ಎನ್ನುವ ದಾಖಲೆಯನ್ನು ಸುನೆಟ್‌ ಬರೆಯುತ್ತಾರೆ.

ಹೀಗೆ ಅಂತಾರಾಷ್ಟ್ರೀಯ ತಂಡದಲ್ಲಿ ಆಡಲು ಪ್ರಾರಂಭಿಸಿದ ಸುನೆಟ್‌ ತಮ್ಮ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಅದೇ ವರ್ಷ ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್‌ ತಂಡದಲ್ಲಿಯೂ ಸ್ಥಾನ ಪಡೆಯುತ್ತಾರೆ. 2002ರಲ್ಲಿ ಅವರು ಭಾರತದ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಾರೆ. ವಿಪರ್ಯಾಸವೆಂದರೆ ಇದೇ ಅವರ ಬದುಕಿನ ಕೊನೆಯ ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯವಾದದ್ದು!
2000ದ ಆಸುಪಾಸಿನಲ್ಲಿ ಮಹಿಳಾ ಕ್ರಿಕೆಟ್‌ ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಅದರ ಭವಿಷ್ಯದ ಬಗ್ಗೆಯೂ ಭರವಸೆಯಿರಲಿಲ್ಲ. ಸುನೆಟ್‌ ಅವರಿಗೆ ಒಂದು ಉತ್ತಮ ಯೂನಿವರ್ಸಿಟಿಯಲ್ಲಿ ಓದುವ ಹಂಬಲವಿತ್ತು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಅವರ ಪರವಾಗಿರಲಿಲ್ಲ. ಅವರು ಓದಲು ಬಯಸಿದ ಯೂನಿವರ್ಸಿಟಿ ಆ್ಯಥ್ಲೆಟಿಕ್ಸ್ ನಲ್ಲಿ ಸ್ವರ್ಧಿಸುವುದಾದರೆ ಸ್ಕಾಲರ್‌ಶಿಪ್‌ ಕೊಡುವುದಾಗಿ ತಿಳಿಸುತ್ತದೆ. ಬೇರೆ ಆಯ್ಕೆ ಇಲ್ಲದ ಸುನೆಟ್‌ ನೆಚ್ಚಿನ ಕ್ರಿಕೆಟ್‌ ತೊರೆಯುವ ನಿರ್ಧಾರಕ್ಕೆ ಬರುತ್ತಾರೆ.

2000ದಿಂದ 2002ರ ವರೆಗೆ ದಕ್ಷಿಣ ಆಫ್ರಿಕಾದ ಪರ ಸುನೆಟ್‌ 17 ಏಕದಿನ ಪಂದ್ಯಗಳನ್ನಾಡಿದ್ದು, 1 ಅರ್ಧ ಶತಕ ಸಹಿತ 198 ರನ್‌ ಸಿಡಿಸಿರುವುದಲ್ಲದೇ, 5 ವಿಕೆಟ್‌ ಕಬಳಿಸಿದ್ದಾರೆ. ಆಡಿದ ಒಂದು ಟೆಸ್ಟ್ ಪಂದ್ಯದಿಂದ 88 ರನ್‌ ಕಲೆಹಾಕಿದ್ದಾರೆ.

ಜಾವೆಲಿನ್‌ ತ್ರೋವರ್‌ ಆಗಿ ಸುನೆಟ್‌
ಸಾಧಿಸುವ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುನೆಟ್‌ ಜೀವಂತ ಸಾಕ್ಷಿ. ಬಾಲ್ಯದಿಂದಲೂ ಕ್ರಿಕೆಟರ್‌ ಆಗಬೇಕೆಂದು ಕನಸು ಕಂಡು ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದವರ ಕೈಯಿಂದ ಪರಿಸ್ಥಿತಿ ಬ್ಯಾಟನ್ನು ಕಸಿದು ಜಾವೆಲಿನ್‌ ನೀಡಿತ್ತು. ಪರಿಸ್ಥಿತಿಯ ಜತೆ ತನ್ನ ಮನಸ್ಥತಿಯನ್ನು ಹೊಂದಿಸಿಕೊಂಡ ಸುನೆಟ್‌ ತಪಸ್ಸಿನಂತೆ ಜಾವೆಲಿನ್‌ ಅಭ್ಯಾಸಿಸುತ್ತಾರೆ. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ 16ನೇ ಸ್ಥಾನ ಪಡೆಯುತ್ತಾರೆ. ಅದೇ ವರ್ಷ ನಡೆದ ಆಲ್‌ ಆಫ್ರಿಕನ್‌ ಗೇಮ್ಸ್ ಮತ್ತು ಆಫ್ರೋ ಏಷ್ಯನ್‌ ಗೇಮ್ಸ್ ನಲ್ಲಿ ಕ್ರಮವಾಗಿ ಕಂಚು ಮತ್ತು ಚಿನ್ನವನ್ನು ಗೆಲ್ಲುತ್ತಾರೆ. ಹೀಗೆ ಶುರುವಾಗುತ್ತದೆ ಇವರ ಪದಕಗಳ ಬೇಟೆ. ಹಲವಾರು ಚಾಂಪಿಯನ್‌ಶಿಪ್‌, ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಅನೇಕ ಪದಕಗಳನ್ನು ಗೆದ್ದಿರುವ ಸುನೆಟ್‌ ಒಲಿಂಪಿಕ್‌ನಲ್ಲಿಯೂ ಪದಕ ಗೆಲ್ಲುವ ಮೂಲಕ ಶ್ರೇಷ್ಠ ಜಾವೆಲಿನ್‌ ಪ್ಲೇಯರ್‌ ಎನಿಸಿಕೊಂಡಿದ್ದಾರೆ.

ಒಲಿಂಪಿಕ್‌ನಲ್ಲಿ ಸುನೆಟ್‌ ಸಾಧನೆ
ಸುನೆಟ್‌ ಮೊದಲ ಬಾರಿ ಒಲಿಂಪಿಕ್‌ನಲ್ಲಿ ಕಾಣಿಸಿಕೊಂಡಿದ್ದು 2004ರಲ್ಲಿ. ಅಲ್ಲಿ ಅವರ ಪ್ರದರ್ಶನ ಅಷ್ಟೇನೂ ವಿಶೇಷವಾಗಿರಲ್ಲಿಲ್ಲ. 35ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತ್ತು. 2008ರ ಒಲಿಂಪಿಕ್‌ನಲ್ಲಿ ಇವರದ್ದು 33ನೇ ಸ್ಥಾನ. ಈ ನಡುವೆ ಅವರು ಕಾಮನ್ವೆಲ್ತ್‌ ಗೇಮ್ಸೌನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರೂ ಒಲಿಂಪಿಕ್‌ನಲ್ಲಿ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿರಲಿಲ್ಲ. ಇದರಿಂದ ಸುನೆಟ್‌ ಎದೆಗುಂದಲಿಲ್ಲ. ಇನ್ನಷ್ಟು ಶ್ರಮ ವಹಿಸಿ ಕಠಿನ ಅಭ್ಯಾಸ ನಡೆಸಿದರು. ಸಾಧಿಸುವ ಛಲವಿದ್ದವರಿಗೆ ಯಾವುದು ಕಷ್ಟವಲ್ಲ ಎನ್ನುವಂತೆ 2012ರ ಒಲಿಂಪಿಕ್‌ನಲ್ಲಿ  ಸುನೆಟ್‌ ಜಾವೆಲಿನ್‌ ಅನ್ನು 64.53ಮೀ. ದೂರಕ್ಕೆ ಎಸೆಯುವ ಮೂಲಕ 4ನೇ ಸ್ಥಾನ ಪಡೆಯುತ್ತಾರೆ. ಇಲ್ಲಿ ಅವರು ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾಗುತ್ತಾರೆ. ಇಷ್ಟಕ್ಕೇ ಸುನೆಟ್‌ ತೃಪ್ತರಾಗಲಿಲ್ಲ. ಅವರಿನ್ನೂ ತಮ್ಮ ಗಮ್ಯ ತಲುಪಿರಲಿಲ್ಲ. ಆ ನಿಟ್ಟಿನಲ್ಲಿ ಅವರು ಮತ್ತಷ್ಟು ಕಠಿನ ಅಭ್ಯಾಸ ನಡೆಸಿ ಪ್ರದರ್ಶನದಲ್ಲಿ ಇನ್ನಷ್ಟು ಸುಧಾರಣೆಯನ್ನು ತಂದುಕೊಂಡರು. ಪ್ರತಿಫಲವೆಂಬಂತೆ 2016ರ ರಿಯೋ ಒಲಿಂಪಿಕ್‌ನಲ್ಲಿ  ಜಾವೆಲಿನ್‌ ಅನ್ನು 64.92 ಮೀ. ದೂರಕ್ಕೆ ಎಸೆಯುವ ಸುನೆಟ್‌ ಬೆಳ್ಳಿಗೆ ಕೊರಳೊಡ್ಡುತ್ತಾರೆ.

ಜಾವೆಲಿನ್‌ ತ್ರೋನಲ್ಲಿ ಸುನೆಟ್‌ ಸಾಧನೆ
ಒಲಿಂಪಿಕ್‌ನಲ್ಲಿ 1 ಬೆಳ್ಳಿ ಪದಕ, ಕಾಮನ್ವೆಲ್ತ್ ಗೇಮ್ಸ್ ನಲ್ಲಿ 2 ಚಿನ್ನ, 1 ಬೆಳ್ಳಿ, 1 ಕಂಚು, ವರ್ಲ್ಡ್ ಚಾಂಪಿಯನ್‌ ಶಿಪ್‌ನಲ್ಲಿ 1 ಬೆಳ್ಳಿ, 1 ಕಂಚು, ಆಫ್ರಿಕನ್‌ ಚಾಂಪಿಯನ್‌ಶಿಪ್‌, ಆಲ್‌ ಆಫ್ರಿಕನ್‌ ಗೇಮ್ಸ್, ಆಫ್ರಿಕನ್‌ ಗೇಮ್ಸ್ ಇತ್ಯಾದಿ ಪ್ರಮುಖ ಪಂದ್ಯಕೂಟದಲ್ಲಿ ಒಟ್ಟಾರೆಯಾಗಿ 9 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಆ್ಯಥ್ಲೆಟಿಕ್ಸ್ ನಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಸುನೆಟ್‌ ಅವರ ಉತ್ಸಾಹ ಇನ್ನೂ ಬತ್ತಿಲ್ಲ. ತಮ್ಮ ಬಾಲ್ಯದ ಪ್ರೀತಿಯಾದ ಕ್ರಿಕೆಟ್‌ ಅನ್ನು ಅವರಿನ್ನು ಮರೆತಿಲ್ಲ. ಈಗ ತಮ್ಮ 39ನೇ ವಯಸ್ಸಿನಲ್ಲಿ ಅವರು ಜಾವೆಲಿನ್‌ ಪಕ್ಕಕ್ಕಿಟ್ಟು ಮತ್ತೆ ಬ್ಯಾಟ್‌ ಹಿಡಿದಿದ್ದಾರೆ. ದಕ್ಷಿಣ ಆಫ್ರಿಕಾದ ದೇಶಿ ಕ್ರಿಕೆಟ್‌ನಲ್ಲಿ ಆಡುತ್ತಾ ಉತ್ತಮ ಪ್ರದರ್ಶನದ ಮೂಲಕ ತಮ್ಮೊಳಗಿನ ಕ್ರಿಕೆಟರ್‌ ಇನ್ನೂ ಜೀವಂತ ಇದೆ ಎನ್ನುವುದನ್ನು ನಿರೂಪಿಸುತ್ತಿದ್ದಾರೆ. ಇತ್ತಿಚೀನ ತಮ್ಮ ಒಂದು ಸಂದರ್ಶನದಲ್ಲಿ ಸುನೆಟ್‌ ಮತ್ತೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ವಾಪಸ್ಸಾಗುವುದು ತನ್ನ ಮುಂದಿನ ಗುರಿ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಸಾಧಿಸಿ ಸಾಧನೆಯ ಶಿಖರ ಏರಿದ ನಂತರವೂ ಬತ್ತದ ಅವರ ಉತ್ಸಾಹ ನಿಜಕ್ಕೂ ಯುವ ಜನಾಂಗಕ್ಕೆ ಸ್ಫೂರ್ತಿ.

ದಕ್ಷಿಣ ಆಪ್ರಿಕಾ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಮೂಲಕ ಸುನೆಟ್‌ ಇನ್ನಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳಲಿ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ.

-ಸುಶ್ಮಿತಾ ನೇರಳಕಟ್ಟೆ

ಟಾಪ್ ನ್ಯೂಸ್

6-desiswara

ನೆರಳಿನಾಸರೆಯಲ್ಲಿ….

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

rani ram

ರಾಣಿ ರಾಂಪಾಲ್‌ರಿಂದ ಹಾಕಿ ಕ್ರೀಡಾಂಗಣ: ‘ರಾಣಿ ಗರ್ಲ್ಸ್‌ ಹಾಕಿ ಟರ್ಫ್‌ʼ ಎಂದು ಮರುನಾಮಕರಣ

ugadi

ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುಗಾದಿ ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

ಯುಗಾದಿ 2023- ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

web-suhan

ಪ್ರೀತಿಯ ಅಜ್ಜನ ಸಾವಿನ ನೋವು…22 ರ ಹರೆಯದಲ್ಲೇ ಸಮಾಜ ಸೇವೆಗಿಳಿದ ಯುವತಿ

ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ಪನ್ನೀರ್‌ ಚೀಸ್‌ ಟೋಸ್ಟ್‌….

anjum chopra

ಭಾರತದ ವನಿತಾ ಕ್ರಿಕೆಟ್‌ಗೆ ಸ್ಟಾರ್‌ ವ್ಯಾಲ್ಯೂ ಕೊಡಿಸಿದ್ದ ಅಂಜುಂ ಚೋಪ್ರಾ

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

Success Story:ಅಂದು ಸಾ ಮಿಲ್ ಕಾರ್ಮಿಕ, ರೈಲ್ವೆ ನಿಲ್ದಾಣದಲ್ಲಿ ಓದು..ಇಂದು ಐಎಎಸ್ ಅಧಿಕಾರಿ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-sadsd-asd

ಬೆಂಗಳೂರು: ಮೊದಲ ಪತ್ನಿ ಕೊಂದು 2ನೇ ಪತಿಯ ಮಗು ಹತ್ಯೆಗೂ ಯತ್ನ!

6-desiswara

ನೆರಳಿನಾಸರೆಯಲ್ಲಿ….

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.