ಎಚ್1ಬಿ ವೀಸಾ: 2022ರಲ್ಲಿ ಅಮೆಜಾನ್, ಇನ್ಫಿ, ಟಿಸಿಎಸ್‌ಗಳಿಗೆ ಸಿಂಹಪಾಲು
Team Udayavani, Feb 5, 2023, 7:00 AM IST
ವಾಷಿಂಗ್ಟನ್: ಅಮೆರಿಕ ಸರ್ಕಾರದ ಎಚ್1ಬಿ ವೀಸಾ ನೀತಿಯಿಂದ ಅಮೆಜಾನ್, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಗಳಿಗೆ ಹೆಚ್ಚಿನ ಲಾಭವಾಗಿದೆ. ಪ್ರತಿ ವರ್ಷ ಲಭ್ಯವಾಗುವ 85 ಸಾವಿರ ವೀಸಾಗಳ ಪೈಕಿ ಹೆಚ್ಚಿನ ಸಂಖ್ಯೆಯ ವೀಸಾಗಳು ಈ ಮೂರು ಕಂಪನಿಗಳಿಗೆ ಸೇರುತ್ತದೆ ಎಂದು “ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.
ಅಮೆಜಾನ್‌ಗೆ 2022ರಲ್ಲಿ 6,396 ಎಚ್1ಬಿ ವೀಸಾ ಪ್ರಾಪ್ತವಾಗಿತ್ತು. 2020 ಮತ್ತು 2021ರಲ್ಲಿಯೂ ಕೂಡ ಅದಕ್ಕೆ ಸಿಂಹಪಾಲು ಸಿಕ್ಕಿತ್ತು. ಇನ್ಫೋಸಿಸ್‌ಗೆ ಕಳೆದ ವರ್ಷ 3,151, 2021ರಲ್ಲಿ ಸುಮಾರು 2 ಸಾವಿರ ವೀಸಾಗಳು ದೊರಕಿದ್ದವು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಟಿಸಿಎಸ್‌ಗೆ 2,725 ಲಭ್ಯವಾಗಿತ್ತು. ಕಾಗ್ನಿಜೆಂಟ್‌ಗೆ 2,251, ಗೂಗಲ್‌ಗೆ 1,562, ಮೆಟಾ/ಫೇಸ್‌ಬುಕ್‌ಗೆ 1,546, ಎಚ್‌ಸಿಎಲ್ ಅಮೆರಿಕಕ್ಕೆ 1,260, ಐಬಿಎಂಗೆ 1,239 ವೀಸಾಗಳು ಸಿಕ್ಕಿದ್ದವು. ಇದೇ ವೇಳೆ, ವೀಸಾ ನಿರಾಕರಿಸುವ ಪ್ರಕರಣಗಳ ಪ್ರಮಾ ಣ 2021ರಲ್ಲಿ ಶೇ.4 ಇದ್ದದ್ದು 2022ರಲ್ಲಿ ಶೇ.2ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ: ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ