ವಿದ್ಯುತ್‌ ಬಲ್ಬ್ ಸಂಶೋಧಕ ಥಾಮಸ್ ಅಲ್ವಾ ಎಡಿಸನ್ ಮತ್ತು ವಿವಾದಗಳು !


ದಿನೇಶ ಎಂ, Dec 4, 2022, 5:35 PM IST

thumbnail thomas edison alva

ಜಗತ್ತಿನ ಹಲವು ಅವಿಷ್ಕಾರಗಳು – ಅನ್ವೇಷಣೆಗಳು ಯಾವುದೋ ಘಟನೆ ಅಥವಾ ವಿಷಯ, ವಿಚಾರಗಳಿಂದ ಪ್ರೇರಿತವಾಗಿರುತ್ತವೆ, ಒಂದು ಕಾಲದಲ್ಲಿ ಎಲ್ಲವೂ ಸರಿ ಅನಿಸಿದ್ದು, ನೂರು, ಇನ್ನೂರು ವರ್ಷಗಳ ನಂತರ ಅವುಗಳ ಮೇಲೆ ನಡೆಯುವ ಅಧ್ಯಯನ, ಸಂಶೋಧನೆಗಳ ಫಲವಾಗಿ ಅವುಗಳ ಮೂಲ ಅನ್ವೇಷಕರು ಅಥವಾ ಅನ್ವೇಷಣೆಯ ಬಗ್ಗೆ ಅನುಮಾನಗಳು, ಅಭಿಪ್ರಾಯಗಳ ಆಧಾರಿತ ಅಸಮಧಾನಗಳು ಉಂಟಾಗುವುದು ಸಹಜ. ಆದರೆ, ಯಾವುದೇ ಅನ್ವೇಷಣೆಗಳು ಜಗತ್ತಿಗೆ ಬೆಳಕಾಗುತ್ತವೆ ಎಂದಾದರೆ ಅವುಗಳ ಕುರಿತ ವಿವಾದಗಳನ್ನು ಮರೆತು ಗೌರವಿಸುವ ಅಗತ್ಯವಿದೆ. ಹೀಗೆಯೇ ಥಾಮಸ್ ಅಲ್ವಾ ಎಡಿಸನ್ ಅವರ ಸಂಶೋಧನೆ ಮತ್ತು ಅನ್ವೇಷಣೆಗಳ ಬಗ್ಗೆ ಹಲವು ಬಗೆಯ ಅಭಿಪ್ರಾಯಗಳಿವೆ.

ಥಾಮಸ್ ಅಲ್ವಾ ಎಡಿಸನ್ ಅವರ ಕೆಲವು ಪ್ರಮುಖ ಸಾಧನೆಗಳು:

  • ದೂರಸಂಪರ್ಕ ಅಭಿವೃದ್ಧಿ: ಟೆಲಿಗ್ರಾಫ್ ಅಥವಾ, ದೂರವಾಣಿ ಮತ್ತು ಇತರ ಆವಿಷ್ಕಾರಗಳ ಸುಧಾರಣೆಯು ನಂತರದ ವಿಜ್ಞಾನಿಗಳಿಗೆ ವಹಿಸಿಕೊಳ್ಳಲು ದಾರಿಮಾಡಿಕೊಟ್ಟಿತು ಎನ್ನುತ್ತಾರೆ.
  • ಬ್ಯಾಟರಿ ಸುಧಾರಣೆಗಳು: ಬ್ಯಾಟರಿಗಳನ್ನು ಆವಿಷ್ಕರಿಸದಿದ್ದರೂ, ಅವುಗಳನ್ನು ಪರಿಪರ‍್ಣಗೊಳಿಸಿದ್ದಾರೆ. ಬ್ಯಾಟರಿಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಅವುಗಳ ಜೀವಿತಾವಧಿಯನ್ನು ವಿಸ್ತರಿಸಲು ಇವರ ಸಂಶೋಧನೆಗಳಿಂದ ಸಾಧ್ಯವಾಯಿತು. ಎನ್ನುತ್ತಾರೆ.
  • ಬಲ್ಬ್‌ಗಳು: ಬಲ್ಬ್‌ಗಳನ್ನು ಆವಿಷ್ಕರಿಸದಿದ್ದರೂ, ಬ್ಯಾಟರಿ ಬಳಸಿ ದೀರ್ಘ ಕಾಲ ಉರಿಯಬಲ್ಲ ಬಲ್ಬಗಳ ಅವಿಷ್ಕಾರ ಮತ್ತು ಅಭಿವೃದ್ಧಿ ಮಾಡಿ ಆರ್ಥಿಕವಾಗಿ ಎಲ್ಲಾ ಸ್ತರದ ಜನರೂ ವಿದ್ಯುತ್‌ ಬಲ್ಬ್‌ ಬಳಸುವಂತೆ ಮಾಡಿದರು.
  • ವಿದ್ಯುತ್ ಸ್ಥಾವರ: ವಿದ್ಯುತ್ ಸ್ಥಾವರಗಳನ್ನು ರಚಿಸುವುದು ಮತ್ತು ಅದನ್ನು ಇಡೀ ಜಗತ್ತಿಗೆ ತಲುಪುವಂತೆ ಮಾಡುವುದು ಅವರ ಕನಸಾಗಿತ್ತು. ಅದು ಅದರ ಕಾಲದಲ್ಲಿ ಒಂದು ಕ್ರಾಂತಿಕಾರಿ ಕಲ್ಪನೆಯಾಗಿತ್ತು.

ಎಡಿಸನ್‌ ಏಂಡ್‌ ಸ್ವಾನ್‌ ಯುನೈಟೆಡ್‌ ಎಲೆಕ್ಟ್ರಿಕ್‌ ಕಂಪೆನಿ’ ಹುಟ್ಟಿಕೊಂಡು ಅದರ ಪಾಲುದಾರನಾಗಿ ಸೇರಿಕೊಂಡ ಎಡಿಸನ್‌ ಅವರು ಮುಂದೆ ಕ್ರಮೇಣ ಆ ಕಂಪೆನಿಯ ಸಂಪರ‍್ಣ ಮಾಲಿಕತ್ವವನ್ನು ತಾನೇ ವಹಿಸಿಕೊಳ್ಳುವಷ್ಟು ಬೆಳೆದರು. ಇವತ್ತು ‘ಜನರಲ್‌ ಎಲೆಕ್ಟ್ರಿಕ್‌’ ಎಂಬ ಬಹುರಾಷ್ಟ್ರೀಯ ದೈತ್ಯಕಂಪೆನಿ ಮೂಲತಃ ಸ್ವಾನ್‌-ಎಡಿಸನ್‌ ಪಾಲುದಾರಿಕೆಯ ಕಂಪೆನಿಯಾಗಿತ್ತು.

ಅಮೆರಿಕದಲ್ಲಿ ಎಡಿಸನ್‌ಗೆ ಎಲ್ಲಾ ಸೌರ‍್ಯಗಳು ಸಿಕ್ಕಿದ್ದವು ಆದರೆ, ಎಲೆಕ್ಟ್ರಿಕ್‌ ಬಲ್ಬ್‌ನ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದಾಗ ತೊಂದರೆ ಎದುರಿಸಬೇಕಾಯಿತು. ಥೊಮಸ್‌ ಅಲ್ವಾ ಎಡಿಸನ್‌ನ ಪ್ರಯೋಗಗಳು ಇನ್ನೊಬ್ಬ ಅಮೆರಿಕದವನೇ ಆದ ವಿಲಿಯಂ ಸಾಯರ್‌ ಎಂಬುವವನ ಕಲ್ಪನೆಗಳಿಂದ ಪ್ರೇರಿತವಾದದ್ದು ಎಂದು ಪೇಟೆಂಟಿಂಗ್‌ ಪ್ರಾಧಿಕಾರವು ಎಡಿಸನ್‌ನ ಅರ್ಜಿಯನ್ನು ಮೊದಲು ತಿರಸ್ಕರಿಸಿತ್ತು.

ಇವತ್ತಿಗೂ ಥಾಮಸ್ ಅಲ್ವಾ ಎಡಿಸನ್ ವಿದ್ಯತ್‌ ಬಲ್ಬ ಕಂಡುಹಿಡಿದವರೆಂದು ಹೇಳಲಾಗುತ್ತದೆ, ಜೊತೆಗೆ ವಿದ್ಯುತ್‌ ಬಲ್ಬ್‌ ಒಂದೇ ಅಲ್ಲದೇ ಫೊನೊಗ್ರಾಫ್‌ ಮೊದಲಾದ ವಿವಿಧ ಉಪಕರಣಗಳನ್ನು ಆವಿಷ್ಕರಿಸಿ ಒಟ್ಟು 1093 ಪೇಟೆಂಟ್‌ಗಳನ್ನು ತನ್ನದಾಗಿಸಿಕೊಂಡ ಮಹಾಮೇಧಾವಿ ಥಾಮಸ್ ಅಲ್ವಾ ಎಡಿಸನ್ ಎಂಬ ವ್ಯಂಗ್ಯಯುತ ಆರೋಪಗಳೂ ಎಡಿಸನ್‌ ಮೇಲಿದೆ.

ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷ ಅಭ್ರ‍್ಥಿಯಾಗಿದ್ದಾಗ ಜೋ ಬೈಡನ್‌ ಈ ಸಂಶೋಧನೆಯ ಕುರಿತು ಒಂದು ಹೇಳಿಕೆ ನೀಡಿದ್ದರು. “ವಿದ್ಯುತ್‌ ಬಲ್ಬ್‌ ಸಂಶೋಧನೆ ಮಾಡಿದ್ದು ಥಾಮಸ್ ಅಲ್ವಾ ಎಡಿಸನ್ ಎಂದು ನಾವೆಲ್ಲ ಓದುತ್ತಾ ಬೆಳೆದಿದ್ದೇವೆ. ಆದರೆ, ನಿಜ ಸಂಗತಿ ಅದಲ್ಲ, ಎಡಿಸನ್‌ ವಿದ್ಯುತ್‌ ಬಲ್ಬ್‌ ಕಂಡುಹಿಡಿದಿಲ್ಲ..!” ಎಂದಿದ್ದರು. ಅಂದು ಜೋ ಬೈಡನ್ ವಿಸ್ಕೋನ್‌ಸಿನ್ ರಾಜ್ಯದ ಕೆನೊಶಾದಲ್ಲಿ ಪೊಲೀಸರಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಕಪ್ಪು ರ‍್ಣೀಯ ಜಾಕೋಬ್‌ ಬ್ಲೇಕ್‌ ಹಾಗು ಆತನ ಕುಟುಂಬಕ್ಕೆ ಸಾತ್ವಾನ ಹೇಳಿದ ನಂತರ ಈ ಹೇಳಿಕೆ ನೀಡಿದ್ದ ಕಾರಣ ಬೈಡನ್‌ ಆಫ್ರಿಕನ್‌ ಅಮೆರಿಕನ್‌ ಮತ ಸೆಳೆಯಲು ವಿವಾದ ಹುಟ್ಟುಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

ಭೂಮಿ ಮತ್ತು ಸೂರ್ಯನ ಮಧ್ಯದ ದೂರವನ್ನು ಮೊದಲು ನಿಖರವಾಗಿ ಕಂಡುಹಿಡಿದು ಹೇಳಿದ್ದು ಯಾರು? ಜಗತ್ತಿಗೆ ಮೊಟ್ಟ ಮೊದಲ ಪ್ಲಾಸ್ಟಿಕ್ ಸರ್ಜರಿ ಕಲಿಸಿಕೊಟ್ಟದ್ದು ಯಾರು? ಸೂರ್ಯ ಭೂಮಿಯ ಸುತ್ತ ತಿರುಗುತ್ತಿಲ್ಲ, ಭೂಮಿ ಸೇರಿದಂತೆ ಎಲ್ಲಾ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಂಡವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೂ ಪಠ್ಯ ಪುಸ್ತಕಗಳು ಯುರೋಪಿಯನ್ ವಿಜ್ಞಾನಿಗಳ ಹೆಸರು ಹೇಳುತ್ತವೆ. ಆದರೆ, ಇವರಿಗಿಂತ ಸಹಸ್ರಾರು ವರ್ಷಗಳ ಹಿಂದೆ ಭಾರತೀಯರು ಇದನ್ನು ಕಂಡುಹಿಡಿದಿದ್ದರು. ವರಹಾವತಾರ ತನ್ನ ಕೋರೆ ಹಲ್ಲುಗಳಲ್ಲಿ ದುಂಡಗಿನ ಭೂಮಿಯನ್ನು ಎತ್ತಿ ಹಿಡಿದಿರುವ ಬಗ್ಗೆ ಉಲ್ಲೇಖಗಳಿವೆ. ಬೆಳಕಿನ ವೇಗದ ಬಗ್ಗೆ ಹೇಳಿದ್ದು ಡಚ್ಚ್ ವಿಜ್ಞಾನಿ ಕ್ರಿಸ್ಟಿಯಾನ್ ಹುಗೆನ್ಸ್ ಅಂತ ಪಠ್ಯಗಳು ಹೇಳುತ್ತವೆಯಾದ್ರೂ, ಅದಕ್ಕೂ ಮೊದಲು ಇದನ್ನು ಹೇಳಿದವರು ನಮ್ಮ ಕರ್ಣಾಟಕದ ವಿಜಯ ನಗರ ಸಾಮ್ರಾಜ್ಯದ ಪಂಡಿತ ಶಯನ ಅನ್ನೋ ಮೇಧಾವಿ.

ಗುರುತ್ವಾಕರ್ಷಣೆ ಅನ್ನುವ ಶಕ್ತಿ ಭೂಮಿಗಿರುವ ಬಗ್ಗೆ ತಿಳಿಸಿದ್ದು ಮತ್ತು ಅದನ್ನು ಕಂಡುಹಿಡಿದದ್ದು ನ್ಯೂಟನ್ ಎಂದು ನಾವು ಓದಿದ್ದೇವೆ. ಆದರೆ ನ್ಯೂಟನ್ ಹೇಳಿದ್ದು 16ನೇ ಶತಮಾನದಲ್ಲಿ, ಇದಕ್ಕಿಂತ 4 ಶತಮಾನಗಳ ಮೊದಲೇ ಭಾರತೀಯ ಗಣಿತಶಾಸ್ತçಜ್ಞ ಭಾಸ್ಕರಾಚಾರ್ಯರು ಇದನ್ನು ಹೇಳಿದ್ದರು. ಸೂರ್ಯ ಸಿದ್ಧಾಂತ ಮತ್ತು ಸಿದ್ಧಾಂತ ಶಿರೋಮಣಿ ಎಂಬ ಇವರ ಗ್ರಂಥಗಳಲ್ಲಿ ಇದರ ಉಲ್ಲೇಖಗಳಿವೆ ಎಂದು ನಾವು ವಾದಿಸುವಂತೆ ಅಮೆರಿಕಾದಲ್ಲಿ ಮಾತ್ರವಲ್ಲ ಅನೇಕ ಕಡೆ ಥಾಮಸ್‌ ಆಲ್ವ ಎಡಿಸನ್‌ ಸಂಶೋಧನೆಗಳ ಕುರಿತು ಬಿನ್ನಾಭಿಪ್ರಾಯಗಳಿವೆ.

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

13

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.