ಟಿಕ್ ಟಾಕ್ ಗೀಳಿಗೆ ಮತ್ತೊಂದು ಬಲಿ:ಕೃಷಿ ಹೊಂಡಕ್ಕೆ ಬಿದ್ದ ವಿದ್ಯಾರ್ಥಿನಿ
Team Udayavani, Jul 13, 2019, 10:26 AM IST
ಕೋಲಾರ: ಟಿಕ್ ಟಾಕ್ ಗೀಳಿಗೆ ರಾಜ್ಯದಲ್ಲಿ ಇನ್ನೊಂದು ಬಲಿಯಾಗಿದ್ದು, ಕೋಲಾರದವಡಗೇರಿ ಎಂಬಲ್ಲಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಟಿಕ್ ಟಾಕ್ ವಿಡಿಯೋ ಗೀಳು ಹೊಂದಿದ್ದ ಮಾಲಾ ಎಂಬ ವಿದ್ಯಾರ್ಥಿನಿ ಕೃಷಿ ಹೊಂಡಕ್ಕೆ ಆಯ ತಪ್ಪಿಬಿದ್ದು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಕೆಲ ದಿನಗಳ ಹಿಂದೆ ಟಿಕ್ ಟಾಕ್ ಗೀಳಿಗೆ ಹೋಗಿ ಸ್ಪೈನಲ್ ಕಾರ್ಡ್ ಮುರಿದು ಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಎಂಬ ಯುವಕ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.