ಟೋಕಿಯೊ ಒಲಿಂಪಿಕ್ಸ್ ಗೆ ಪ್ರೇಕ್ಷಕರು ಅನುಮಾನ : ಆಯೋಜನಾ ಸಮಿತಿ ನಿರ್ಧಾರ
Team Udayavani, May 29, 2021, 10:27 PM IST
ಟೋಕಿಯೊ : ಕೋವಿಡ್-19 ನಿಯಂತ್ರಿಸಲು ಶುಕ್ರವಾರ ಪ್ರಧಾನಿ ಯೊಶಿಹಿಡೆ ಸುಗ ಅವರು ರಾಜಧಾನಿ ಟೋಕಿಯೊ ಸೇರಿದಂತೆ ಇತರ 8 ನಗರಗಳಲ್ಲಿ ತುರ್ತುಸ್ಥಿತಿ ವಿಸ್ತರಿಸಿದ್ದರು. ಇದರ ಬೆನ್ನಲ್ಲೇ ಒಲಿಂಪಿಕ್ಸ್ ಕೂಟವನ್ನು ಪ್ರೇಕ್ಷಕರಿಲ್ಲದೆ ನಡೆಸುವ ಸುಳಿವು ಲಭಿಸಿದೆ. ಆಯೋಜನಾ ಸಮಿತಿ ಇಂಥದೊಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
“ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಪಶ್ಚಿಮ ಜಪಾನ್‌ನ ಒಸಾಕ ಪ್ರಾಂತ್ಯದಲ್ಲಿ ಸೋಂಕಿನ ಬಾಧೆ ಹೆಚ್ಚಿದೆ. ಇಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಇದೆ’ ಎಂದು ಪ್ರಧಾನಿ ಹೇಳಿದ್ದರು.
ಶೀಘ್ರವೇ ನಿರ್ಧಾರ
ಇದಕ್ಕೆ ಪ್ರತಿಕ್ರಿಕೆ ನೀಡಿದ ಸಮಿತಿ ಆಯೋಜನಾ ಸಮಿತಿಯ ಅಧ್ಯಕ್ಷೆ ಶೀಕೊ ಹಸಿಮೋಟೊ, “ನಮಗೆ ಸ್ಥಳೀಯರ ಆರೋಗ್ಯ ಮುಖ್ಯ. ಇಲ್ಲಿನ ಜನರಿಗೆ ಯಾವುದೇ ರೀತಿಯಲ್ಲೂ ವೈದ್ಯಕೀಯ ಸೌಲಭ್ಯಕ್ಕೆ ಅಡ್ಡಿಯಾಗಬಾರದು. ವಿದೇಶಿ ಪ್ರೇಕ್ಷಕರಿಗೆ ನಿರ್ಬಂಧ ನಿರ್ಧಾರವನ್ನು ಒಂದು ತಿಂಗಳ ಹಿಂದೆಯೇ ತೆಗದುಕೊಳ್ಳಲಾಗಿದೆ. ಅದೇ ರೀತಿ ಸ್ಥಳೀಯ ಪ್ರೇಕ್ಷಕರನ್ನೂ ಕೂಟದಿಂದ ದೂರವಿರಿಸುವ ಕುರಿತು ಶೀಘ್ರ ನಿರ್ಧಾರ ಪ್ರಕಟಿಸುತ್ತೇವೆ’ ಎಂದಿದ್ದಾರೆ. ಖಾಲಿ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟವನ್ನು ನಡೆಸುವ ಸುಳಿವನ್ನು ನೀಡಿದ್ದಾರೆ.
ಇದನ್ನೂ ಓದಿ :ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್ : ಹಳೆಯ ಜೆರ್ಸಿಯಲ್ಲಿ ಮಿಂಚಿದ ಜಡೇಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇನ್ನು ಫ್ರಾಂಚೈಸಿಯವರೆಗೆ ಬಿಟ್ಟಿದ್ದು…; ಆಟಗಾರರ ಪಂದ್ಯದ ಒತ್ತಡದ ಕುರಿತು ರೋಹಿತ್ ಮಾತು
ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್
ಇದು ಸಾಮೂಹಿಕ ವೈಫಲ್ಯ: ಸರಣಿ ಸೋಲಿನ ಬಳಿಕ ರೋಹಿತ್ ಶರ್ಮಾ
ವೈಫಲ್ಯದ ಮೇಲೆ ವೈಫಲ್ಯ ; ಮತ್ತೆ ಗೋಲ್ಡನ್ ಡಕ್ ದಾಖಲಿಸಿದ ಸೂರ್ಯಕುಮಾರ್ !
ಸೋಲಿಗೆ ಶರಣಾದ ಟೀಮ್ ಇಂಡಿಯಾ: ಏಕದಿನ ಸರಣಿ ಗೆದ್ದ ಆಸೀಸ್
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ