ಬೆಳ್ಳಂಬೆಳಗ್ಗೆ ಟ್ರಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ; ಒಂದೇ ಕುಟುಂಬದ ಐವರ ಸಾವು
Team Udayavani, Aug 12, 2021, 11:41 AM IST
ಲಕ್ನೋ : ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿ ಕಾರು ಚಾಲಕ ಮತ್ತು ಬಾಲಕಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಸಂಭವಿಸಿದೆ.
ಪೊಲೀಸ್ ಅಧಿಕಾರಿ ಹೇಳಿಕೆಯಂತೆ ಏಳು ಜನರಿದ್ದ ಕಾರು ಜಾರ್ಖಂಡ್ ನಿಂದ ಲಕ್ನೋ ಕಡೆಗೆ ಅತೀ ವೇಗದಿಂದ ಹೋಗುತ್ತಿದ್ದು ಬಸ್ತಿ ಪ್ರದೇಶ ತಲುಪುತ್ತಿದ್ದಂತೆ ಟ್ರಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ ಪರಿಣಾಮ ಕಾರು ಟ್ರಕ್ ನ ಅಡಿಯಲ್ಲಿ ಸಿಲುಕಿಕೊಂಡಿದ್ದು ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟ್ರಕ್ ನ ಅಡಿಯಲ್ಲಿ ಸಿಲುಕಿದ್ದ ಕಾರನ್ನು ಕ್ರೇನ್ ಮೂಲಕ ದೇಹಗಳನ್ನು ಹೊರತೆಗೆಯಲಾಯಿತು ಎಂದಿದ್ದಾರೆ.
ಘಟನೆಯಲ್ಲಿ ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಾಲಕಿಯ ಅರೋಗ್ಯ ಸುಧಾರಿಸಿದ್ದು ಚೇತರಿಕೆ ಕಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ದೇಶದಲ್ಲಿ ಕೋವಿಡ್ ಸೋಂಕು ಏರಿಕೆ : ಕಳೆದ 24 ಗಂಟೆಗಳಲ್ಲಿ 41,195 ಹೊಸ ಪ್ರಕರಣಗಳು ಪತ್ತೆ
ಘಟನೆ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.