
28 ವರ್ಷದ ಸೊಸೆಯನ್ನೇ ಪ್ರೀತಿಸಿ ಮದುವೆಯಾದ 70 ವರ್ಷದ ಮಾವ.! ರಹಸ್ಯ ಮದುವೆಯ ಫೋಟೋ ವೈರಲ್
Team Udayavani, Jan 27, 2023, 3:46 PM IST

ಲಕ್ನೋ: 70 ವರ್ಷದ ವೃದ್ಧನೊಬ್ಬ ತನ್ನ ಸೊಸೆಯನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ಗೋರಖಪುರದ ಛಾಪಿಯಾ ಉಮಾರೋ ಗ್ರಾಮದಲ್ಲಿ ನಡೆದಿದೆ.
70 ವರ್ಷದ ವೃದ್ಧನೊಬ್ಬ ಕೈಲಾಶ್ ಯಾದವ್ ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಚೌಕಿದಾರನಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 12 ವರ್ಷದ ಹಿಂದೆ ಕೈಲಾಶ್ ಯಾದವ್ ಅವರ ಪತ್ನಿ ಮೃತಪಟ್ಟಿದ್ದು, ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದರು.
ತನ್ನ ಮೂರನೇ ಮಗ ಪೂಜಾ(28) ಎನ್ನುವ ಯುವತಿಯನ್ನು ಮದುವೆಯಾಗಿದ್ದ. ವಿಧಿಯಾಟಕ್ಕೆ ಕೈಲಾಶ್ ಅವರ ಮೂರನೇ ಮಗ ಮೃತಪಟ್ಟಿದ್ದಾರೆ. ಇದಾದ ಬಳಿಕ ತನ್ನ ಸೊಸೆಯನ್ನು ಬೇರೆ ಮದುವೆ ಮಾಡಿಕೊಟ್ಟು ಕೈಲಾಶ್ ತಾವು ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು.
ಆದರೆ ಬೇರೆ ಮದುವೆಯಾದ ಕೆಲ ಸಮಯದ ಬಳಕ ಸೊಸೆ ಪೂಜಾಳಿಗೆ ಆ ಕುಟುಂಬ ಇಷ್ಟವಾಗದ ಕಾರಣಕ್ಕೆ, ಗಂಡನನ್ನು ಬಿಟ್ಟು ಮತ್ತೆ ಹಳೆ ಗಂಡನ ಮನೆಗೆ ಬಂದು ವಾಸಿಸಲು ಶುರು ಮಾಡುತ್ತಾರೆ. ಹೀಗೆ ದಿನಗಳು ಹೋಗುತ್ತಿದ್ದಂತೆ 70 ವರ್ಷದ ಕೈಲಾಶ್ ರಿಗೆ ತನ್ನ 28 ವರ್ಷದ ಸೊಸೆಯ ಮೇಲೆ ಪ್ರೀತಿ ಹುಟ್ಟುತ್ತದೆ.
ರಹಸ್ಯವಾಗಿಯೇ ಇದನ್ನು ಇಟ್ಟಿದ್ದ ಇಬ್ಬರು ಇತ್ತೀಚೆಗೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯ ಫೋಟೋಗಳು ವೈರಲ್ ಆಗಿದೆ.
ಸದ್ಯ ಇಬ್ಬರು ಒಪ್ಪಿಕೊಂಡು ಮದುವೆಯಾಗಿರುವ ಕಾರಣ ಈ ಬಗ್ಗೆ ಯಾವ ದೂರು ದಾಖಲಾಗಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!

ಇಬ್ಬರು ಯುವತಿಯರನ್ನು ಕೂರಿಸಿಕೊಂಡು ವೀಲಿಂಗ್: ವಿಡಿಯೋ ವೈರಲ್ ಬೆನ್ನಲ್ಲೇ ಕೇಸ್ ದಾಖಲು

ಸ್ಪಾರ್ಕ್ ಗನ್ ಹಿಡಿದು ಪೋಸ್ ಕೊಡುವಾಗ ವಧುವಿನ ಮುಖಕ್ಕೆ ತಾಗಿದ ಬೆಂಕಿ ಕಿಡಿ: ವಿಡಿಯೋ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!