
ಉಪ್ಪುಂದ: ತೆಂಗಿನ ಮರದಿಂದ ಬಿದ್ದು ಸಾವು
Team Udayavani, Feb 9, 2023, 12:36 AM IST

ಉಪ್ಪುಂದ: ಗೋಳಿಹೋಳೆ ಗ್ರಾಮದಲ್ಲಿ ತೆಂಗಿನ ಮರದಿಂದ ಕೆಳಗೆ ಬಿದ್ದು ಕೋಡಿಯಾಲ್ ಕೇರಿ ಮೇಲ್ ನಿವಾಸಿ ಚಂದ್ರ ಮರಾಠಿ (38) ಮೃತಪಟ್ಟಿದ್ದಾರೆ.
ಅವರು ಮನೆಯಲ್ಲಿ ಕೃಷಿ ತೋಟದ ಕೆಲಸವನ್ನು ಮಾಡಿಕೊಡಿದ್ದು ಫೆ. 7ರಂದು ಸಂಜೆ ಮನೆಯ ತೋಟದಲ್ಲಿರುವ ತೆಂಗಿನ ಮರದಲ್ಲಿರುವ ತೆಂಗಿನ ಕಾಯಿಯನ್ನು ಕೀಳಲು ಮರವನ್ನು ಹತ್ತಿದ್ದು, ಕಾಯಿಯನ್ನು ಕೀಳುವ ಸಮಯ ಆಕಸ್ಮಿಕವಾಗಿ ಕಾಲಿನ ಆಯತಪ್ಪಿ ಜಾರಿ ಮರದ ಮೇಲಿನಿಂದ ಕೆಳಗೆ ಬಿದ್ದಿದಾರೆ. ಚಿಕಿತ್ಸೆಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
