ರಾಂಪುರ್: ಸಂಪೂರ್ಣವಾಗಿ ವಿವಸ್ತ್ರಗೊಂಡ ನಿಗೂಢ ಯುವತಿಯ ವಿಡಿಯೋ ವೈರಲ್, ಪೊಲೀಸರಿಗೆ ಸಿಗದ ಸುಳಿವು!
ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
Team Udayavani, Feb 3, 2023, 10:55 AM IST
ಲಕ್ನೋ:ಮೈಕೊರೆಯುವ ಚಳಿಯಲ್ಲಿ ಸಂಪೂರ್ಣವಾಗಿ ವಿವಸ್ತ್ರಗೊಂಡ ನಿಗೂಢ ಯುವತಿಯೊಬ್ಬಳು ಉತ್ತರಪ್ರದೇಶದ ರಾಂಪುರ್ ಬೀದಿಯಲ್ಲಿ ತಿರುಗಾಡುತ್ತಿರುವ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
ಮೈಮೇಲೆ ಒಂದೆಳೆ ಬಟ್ಟೆ ಇಲ್ಲದ ಯುವತಿಯ ಸಿಸಿಟಿವಿ ವಿಡಿಯೋ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಮಹಿಳೆಯನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ವರದಿ ವಿವರಿಸಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಸಂಪೂರ್ಣವಾಗಿ ವಿವಸ್ತ್ರಗೊಂಡಿದ್ದ ಯುವತಿ ಜನವರಿ 29ರ ಮಧ್ಯರಾತ್ರಿ ಯಾವುದೋ ಒಂದು ಮನೆಯ ಬಾಗಿಲನ್ನು ತಟ್ಟಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂತರ ಈ ಸುದ್ದಿ ಎಲ್ಲೆಡೆ ಹಬ್ಬಿದ್ದು, ಸಿಸಿಟಿವಿ ವಿಡಿಯೋ ಕೂಡಾ ವೈರಲ್ ಆಗಿರುವುದಾಗಿ ವರದಿಯಾಗಿದೆ.
ಜನವರಿ 31ರಂದು ರಾಂಪುರ್ ಪೊಲೀಸರಿಗೆ ಈ ಘಟನೆ ಬಗ್ಗೆ ದೂರು ನೀಡಲಾಗಿತ್ತು. ಆದರೆ ಈವರೆಗೂ ಪೊಲೀಸರು ಆ ಯುವತಿಯನ್ನು ಪತ್ತೆಹಚ್ಚುವುದಾಗಲಿ, ಆ ಸ್ಥಳ ಯಾವುದು ಎಂಬುದನ್ನು ಗುರುತಿಸಿಲ್ಲ. ಸ್ಥಳೀಯ ನಿವಾಸಿ ದೂರು ನೀಡಿದ್ದು, ಅವರ ಪ್ರಕಾರ, ಅಂದಾಜು 25 ವರ್ಷದ ಯುವತಿ, ನಮ್ಮ ಮನೆಯ ಬಾಗಿಲನ್ನು ತಟ್ಟಿದ್ದು, ನಾನು ಹೊರಬಂದು ನೋಡುವಾಗ ಆಕೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಳು. ಆಗ ಎರಡು ಬೈಕ್ ಗಳಲ್ಲಿ ಬಂದವರು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ರಾಂಪುರ್ ಪೊಲೀಸರು ತಿಳಿಸಿದ್ದು, ಸಿಸಿಟಿವಿ ಫೂಟೇಜ್ ಪರಿಶೀಲಿಸಿ, ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನಂತನಾಗ್ ನಲ್ಲಿ ಭೂಕಂಪನದ ವೇಳೆ ಧೃತಿಗೆಡದೆ ವೈದ್ಯರಿಂದ ಹೆರಿಗೆ ; ವಿಡಿಯೋ
ಹಸಿರು ಸೊಪ್ಪಿಗೆ ಕೆಮಿಕಲ್ ಸೆಲ್ಯೂಷನ್- ವಿಡಿಯೋ ವೈರಲ್
ಪರೀಕ್ಷೆ ಬರೆದು ಹೋಗುವಾಗ ಅಪಘಾತ: ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಉಳಿದ ಪರೀಕ್ಷೆ ಬರೆದಳು.!
ವೈರಲ್: ಜ್ಯೂಸ್ ಮಾರುವುದರ ಜೊತೆ ಯೂಟ್ಯೂಬರ್ ಆಗಿಯೂ ಫೇಮ್ ಆದ ಬೆಂಗಳೂರಿನ ವ್ಯಾಪಾರಿ
ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸರ್ಕಾರಿ ಅಧಿಕಾರಿ ಮೃತ್ಯು