
ಉಡುಪಿ ಧರ್ಮಪ್ರಾಂತಕ್ಕೆ ನೂತನ ವಿಕಾರ್ ಜನರಲ್
Team Udayavani, Apr 2, 2023, 6:10 AM IST

ಉಡುಪಿ: ಉಡುಪಿ ಧರ್ಮಪ್ರಾಂತದ ನೂತನ ವಿಕಾರ್ ಜನರಲ್ ಆಗಿ ರೆ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರನ್ನು ಧರ್ಮಾಧ್ಯಕ್ಷ ರೆ|ಫಾ| ಡಾ| ಜೆರಾಲ್ಡ್ ಐಸಾಕ್ ಲೋಬೊ ನೇಮಕ ಮಾಡಿದ್ದಾರೆ.
ಧರ್ಮಾಧ್ಯಕ್ಷರ ನಿವಾಸದಲ್ಲಿ ಶನಿವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷರು ಪ್ರಾರ್ಥನೆ ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಧರ್ಮಪ್ರಾಂತದ ಕುಲಪತಿ ರೆ|ಫಾ|ಡಾ| ರೋಶನ್ ಡಿ’ಸೋಜಾ, ಉಡುಪಿ ಶೋಕಮಾತಾ ಚರ್ಚ್‌ನ ಪ್ರಧಾನ ಧರ್ಮಗುರು ರೆ|ಫಾ| ಚಾರ್ಲ್ಸ್ ಮಿನೇಜಸ್, ರೆ|ಫಾ| ಸ್ಟೀಫನ್ ಡಿ’ಸೋಜಾ, ಉಜ್ವಾಡ್ ಪಾಕ್ಷಿಕದ ಸಂಪಾದಕ ರೆ|ಫಾ| ರೊಯ್ಸನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಪ್ರಸ್ತುತ ಪಾಂಗಾಳ-ಶಂಕರಪುರ ಸಂತ ಯೋಹಾನ್ನರ ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಫರ್ಡಿನಾಂಡ್ ಅವರು ಕೆಥೋಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾಗಿ, ಧರ್ಮಪ್ರಾಂತದ ಶ್ರೀಸಾಮಾನ್ಯ ಆಯೋಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಟಾಪ್ ನ್ಯೂಸ್
