
ವಜ್ರದ ನೆಕ್ಲೇಸ್ ಕದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಇಲಿಯ ಕೈಚಳಕ
Team Udayavani, Feb 5, 2023, 8:29 PM IST

ಒಡವೆಗಳನ್ನು ದೋಚಿದ ಸುದ್ದಿಗಳನ್ನ ಕೇಳುತ್ತಿದ್ದಂತೆ ನಮ್ಮೆಲ್ಲರ ಕಣ್ಣ ಮುಂದೆ ಬರುವ ಚಿತ್ರಣ ಸರಗಳ್ಳನದ್ದು ! ಸರಗಳ್ಳರ ಬಗ್ಗೆ ಹಲವು ರೀತಿಯ ಕತೆಗಳಿವೆ. ಇಲ್ಲೊಂದೆಡೆಯೂ ಅದೇ ರೀತಿ ಕಳ್ಳತನವಾಗಿದೆ. ಆದರೆ, ಕದ್ದಿರೋದು ಮನುಷ್ಯನಲ್ಲ! ಕಳ್ಳ ಇಲಿ..!
ಒಡವೆ ಅಂಗಡಿಯಲ್ಲಿ ಶೋ ಪೀಸ್‌ನಲ್ಲಿದ್ದ ವಜ್ರದ ಸರವೊಂದನ್ನು ಇಲಿಯೊಂದು ನಾಜೂಕಾಗಿ ಬಿಡಿಸಿ, ಎತ್ತಿಕೊಂಡು, ಬಂದದಾರಿಯಲ್ಲೇ ಹಿಂದಿರುಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗಾನ್ಕರ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಇಲಿ ಯಾರಿಗಾಗಿ ನೆಕ್‌ಲೇಸ್ ತೆಗೆದುಕೊಂಡು ಹೋಗುತ್ತಿದೆ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಕ್ಯಾಮರಾದಲ್ಲಿ ಸೆರೆಯಾಗಿರುವ ಕಳ್ಳ ಇಲಿಯ ಕೈಚಳಕ ಕಂಡು ನೆಟ್ಟಿಗರು ಹೌಹಾರಿದ್ದು, ಇಲಿಯೂ ಕಳ್ಳನಾಗಬಹುದೆಂದು ಯಾರು ತಾನೆ ಊಹಿಸಲು ಸಾಧ್ಯ ಎಂದು ಆಶ್ಚರ್ಯ ಪಟ್ಟಿದ್ದಾರೆ. ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 30 ಸಾವಿರಕ್ಕಿಂತ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಇದನ್ನೂ ಓದಿ: ಚೀನ ಸೇರಿದಂತೆ ವಿದೇಶಗಳ 232 ಆ್ಯಪ್ ಗಳು ಬ್ಲಾಕ್
#अब ये चूहा डायमंड का नेकलेस किसके लिए ले गया होगा…. 🤣🤣 pic.twitter.com/dkqOAG0erB
— Rajesh Hingankar IPS (@RajeshHinganka2) January 28, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಜಮೀನು,ಚಿನ್ನ,ಟ್ರ್ಯಾಕ್ಟರ್, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪೋಪ್ ಫ್ರಾನ್ಸಿಸ್ ನೋಡಿ ಬೆರಗಾದ ಜನ! ಫೋಟೋ ವೈರಲ್
MUST WATCH
ಹೊಸ ಸೇರ್ಪಡೆ

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ರಚನೆಯಾಗಿ ಎಂಟು ವರ್ಷಕ್ಕೇ ಸೋಂದಾ ಗ್ರಾಪಂಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ

ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್