ವರ್ಕ್‌ ಫ್ರಮ್‌ ಹೋಂ ಐಟಿ-ಬಿಟಿಗೆ ಮಾತ್ರ ಯಾಕೆ?


Team Udayavani, Apr 26, 2021, 12:10 PM IST

Work from home

ಬೆಂಗಳೂರು: “ಕೊರೊನಾ ಮೊದಲನೆ ಅಲೆಯಲ್ಲಿ ರಾಜಧಾನಿಯ ಸೋಂಕು ಹತೋಟಿಗೆ ವರವಾಗಿದ್ದ”ವರ್ಕ್‌ ಫ್ರಮ್‌ ಹೋಂ’ಗೆ ಈ ಬಾರಿ ಬಹುತೇಕ ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಇದರಿಂದ ಉದ್ಯೋಗಿಗಳು, ನಿತ್ಯ ಜೀವ ಭಯದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ.”ವರ್ಕ್‌ ಫ್ರಮ್‌ ಹೋಂ’ಗೆ ಉದ್ಯಾನ ನಗರಿಯ ಅನೇಕ ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತಿವೆ.ಇದರಿಂದ ಉದ್ಯೋಗಿಗಳ ಸೋಂಕು ಹರಡುವಿಕೆ ಹೆಚ್ಚಳವಾಗಿದೆ.

“ಸರ್‌.. ಕಳೆದ ವರ್ಷ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಕಂಪನಿ “ವರ್ಕ್‌ ಫ್ರಮ್‌ ಹೋಂ’ಗೆ ಅವಕಾಶನೀಡಿತ್ತು. ಇದರಿಂದ ನಮ್ಮ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಎರಡನೇ ಅಲೆವ್ಯಾಪಕವಾಗಿ ಹಬ್ಬುತ್ತಿದೆ. ಸರಕಾರ ಇನ್ನೂ ಕಡ್ಡಾಯ ನಿಯಮಗಳನ್ನು ಜಾರಿ ಮಾಡುತ್ತಿಲ್ಲ. ನಿತ್ಯ ಮಾಧ್ಯಮಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಸಂಬಂಧಿಕರ ನೋವು ಕಣ್ಣಾರೆ ನೋಡುತ್ತಿದ್ದೇವೆ.

ಕೋಟಿರೂ. ಇದ್ದರೂ ಆಕ್ಸಿಜನ್‌, ಬೆಡ್‌ ಸಿಗದೆ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ… ಈ ಬಾರಿ ಮನೆಯಿಂದಲೇ ಕೆಲಸ ಜಾರಿಯಾದರೆ ಒಳಿತು.. ‘”ನಾನು ಒಬ್ಬಂಟಿ(ಅವಿವಾಹಿತ) ಸರ್‌.. ನಿತ್ಯಮನೆಯವರಿಗೆ ಕರೆಮಾಡಿದಾಗಲೆಲ್ಲ ಪೋಷಕರು, “ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಾಗಿದೆ. ಆರೋಗ್ಯ ಹುಷಾರು. ಜೀವಮುಖ್ಯ ಕಣೋ, ಸಾಧ್ಯವಾದರೆ ಕೆಲಸ ಮಾಡು. ಇಲ್ಲವಾದರೆ ಊರಿಗೆ ವಾಪಸ್‌ ಬಂದು ಬಿಡು. ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡುಜೀವನ ನಡೆಸಬಹುದು’ ಎಂದು ಕಣ್ಣೀರಿಡುತ್ತಿದ್ದಾರೆ. ಕೆಲಸ ಮುಖ್ಯನಾ? ಜೀವಮುಖ್ಯನಾ? ಎಂಬ ಗೊಂದಲ ಮೂಡಿದೆ. ಕಂಪನಿಯವರು “ವರ್ಕ್‌ ಫ್ರಮ್‌ ಹೋಂ’ಗೆ ಅವಕಾಶ ಕೊಟ್ಟರೆ ಮನೆಯವರೂ ನಿಟ್ಟುಸಿರು ಬಿಡುತ್ತಾರೆ ಸರ್‌..’ಹೀಗೆ.. ನಗರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಬೆಳಗಾವಿ ಜಿಲ್ಲೆ ಮೂಲದ ಉದ್ಯೋಗಿಯೊಬ್ಬರು, ಕಂಪನಿ ಕೆಲಸ ಹಾಗೂ ಕೊರೊನಾ ಎರಡನೇ ಅಲೆಯಿಂದ ಕುಟುಂಬದವರಲ್ಲಿ ಉಂಟಾಗಿರುವ ಭಯದವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.

ಕೆಲವು ಕ್ಷೇತ್ರಗಳಿಗಿಲ್ಲ “ವರ್ಕ್‌ ಫ್ರಮ್‌ ಹೋಂ’:”ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ಬಗೆಯಕೆಲಸದ ವಾತಾವರಣ ಸೃಷ್ಟಿಯಾಗಿದೆ. ಸಾಫ್ಟ್ವೇರ್‌ ಉದ್ಯೋಗಿಗಳಿಗೆ ಮಾತ್ರವೇ ಸೀಮಿತವಾಗಿದ್ದ “ವರ್ಕ್‌ ಫ್ರಮ್‌ ಹೋಂ’ ಸೌಲಭ್ಯ, ಇದೀಗ ಇತರೆ ಕಾರ್ಯಕ್ಷೇತ್ರಕ್ಕೂ ಹರಡಿದೆ. ಇಷ್ಟು ದಿನ “ವರ್ಕ್‌ ಫ್ರಮ್‌ ಹೋಂ’ ಎನ್ನುವುದು ಕೆಲವೇ ಕಾರ್ಯಕ್ಷೇತ್ರಗಳ ಉದ್ಯೋಗಿಗಳಿಗೆ ಮಾತ್ರವೇ ಲಭ್ಯವಿತ್ತು. ಇತರೆ ಕಾರ್ಯಕ್ಷೇತ್ರಗಳಲ್ಲಿ ಆ ಸೌಲಭ್ಯವನ್ನು ಒದಗಿಸುವುದು ಅಷ್ಟೇನೂ ಪರಿಣಾಮಕಾರಿ ತಂತ್ರವಲ್ಲ ಎಂದು ಭಾವಿಸಲಾಗಿತ್ತು. ಫೀಲ್ಡ್‌ನಲ್ಲಿ ಕೆಲಸ ಮಾಡುವ ಅನಿವಾರ್ಯತೆಯುಳ್ಳ ಕೆಲವೊಂದು ಉದ್ಯೋಗ ಕ್ಷೇತ್ರಗಳಲ್ಲಿ “ವರ್ಕ್‌ ಫ್ರಮ್‌ ಹೋಂ’ಸೌಲಭ್ಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ,ಕೆಲವು ಸೆಕ್ಟರ್‌ಗಳ ಉದ್ಯೋಗಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ನಗರದ ಖಾಸಗಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.

ಕಂಪನಿ-ನೌಕರರ ಮಧ್ಯೆ ವಿಶ್ವಾಸ ಅಗತ್ಯ: ಕಚೇರಿಯಲ್ಲೇ ಕೆಲಸ ನಿರ್ವಹಿಸುವುದರಿಂದ ಸಾಕಷ್ಟು ಪ್ರಯೋಜನ‌ಗಳಿವೆ. ಕಚೇರಿ ವಾತಾವರಣ ಉತ್ಪಾದನೆಯ ಪರಿಸರ ಕಲ್ಪಿಸಿಕೊಡುತ್ತದೆ. ಸಹೋದ್ಯೋಗಿಗಳೊಡನೆ ಒಡನಾಟವಿರುತ್ತದೆ. ಅವರ ಸಹಾಯದಿಂದ ಆಫೀಸಿಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ,ಮನೆಯಲ್ಲಿ ಕುಳಿತವರು ಕಚೇರಿ ಕೆಲಸ ಬಿಟ್ಟು ಕಾಲಹರಣ ಮಾಡಬಹುದು ಎನ್ನುವ ಆತಂಕವೂ ಕಂಪನಿಗಳಿಗಿರುತ್ತದೆ. ಪ್ರಸ್ತುತ ಕೊರೊನಾ ವ್ಯಾಪಕತೆ ಬಿಗಡಾಯಿಸಿದೆ. ಇದರಿಂದ ಉದ್ಯೋಗಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಕಂಪನಿ ಹಾಗೂ ನೌಕರರು ಪರಸ್ಪರ ವಿಶ್ವಾಸ, ಜವಾಬ್ದಾರಿ ಅರಿತು ತಮ್ಮ ಕೆಲಸಗಳನ್ನು ನಡೆಸಿಕೊಂಡು ಜೊತೆಯಾಗಿ ಸಾಗಬೇಕಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಪರಿಸರ ಸ್ನೇಹಿ ವಾತಾವರಣ ಸೃಷ್ಟಿ

“ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದರೆ, ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಕಳೆದ ಬಾರಿಯಂತೆ “ವರ್ಕ್‌ ಫ್ರಮ್‌ ಹೋಂ’ ಸೌಲಭ್ಯ ಕಲ್ಪಿಸುವುದು ಸೂಕ್ತ. ಇದರಿಂದ ಸಿಬ್ಬಂದಿಗೆ ನಿರಾಳತೆ ಇರುತ್ತದೆ. ಮನೆಯಿಂದಕೆಲಸ ಮಾಡುವಾಗ, ಕಚೇರಿಯಲ್ಲಿ ದುಡಿಯುತ್ತಿದ್ದ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಯಬೇಕಾಗಿ ಬಂದರೂ ಅಷ್ಟಾಗಿ ಒತ್ತಡ ಇರುವುದಿಲ್ಲ. ಇನ್ನು ಮಹಿಳಾ ಉದ್ಯೋಗಿಗಳಿಗೆ “ವರ್ಕ್‌ ಫ್ರಮ್‌ ಹೋಂ’ನಿಂದ ಸಾಕಷ್ಟು ಅನುಕೂಲಗಳಿವೆ. ಕುಟುಂಬಸ್ಥರ ಜತೆಗೆ ಹೆಚ್ಚು ಸಮಯ ಕಳೆಯುವ ಅವಕಾಶ ಲಭಿಸುತ್ತದೆ. ಅಲ್ಲದೆ ಮುಖ್ಯವಾಗಿ, ಐಟಿ, ಬಿಟಿ ಕಂಪನಿಗಳೇ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಇಳಿಮುಖವಾಗಿ,ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ವಿಕಾಸ್‌ ಆರ್‌ ಪಿಟ್ಲಾಲಿ

ಟಾಪ್ ನ್ಯೂಸ್

ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಿ, ಇಲ್ಲದಿದ್ರೆ ಆಕ್ರೋಶ ಎದುರಿಸಿ: ಜಯಮೃತ್ಯುಂಜಯಶ್ರೀ

ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಿ, ಇಲ್ಲದಿದ್ರೆ ಆಕ್ರೋಶ ಎದುರಿಸಿ: ಜಯಮೃತ್ಯುಂಜಯಶ್ರೀ

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

tdy-15

ಹಳೆ ಚಿನ್ನವನ್ನು ಬದಲಾಯಿಸುವ ನೆಪದಲ್ಲಿ ನಕಲಿ ಚಿನ್ನಾಭರಣ ಕೊಟ್ಟು ವಂಚನೆ: ಇಬ್ಬರ ಬಂಧನ

ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ

ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ

ಮೋದಿ ಸರಕಾರದ ಅವಧಿಯಲ್ಲಿ ಕೇಂದ್ರ ಮಟ್ಟದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ

ಮೋದಿ ಸರಕಾರದ ಅವಧಿಯಲ್ಲಿ ಕೇಂದ್ರ ಮಟ್ಟದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ

ಆಮಿರ್‌,ಹೃತಿಕ್‌ ಆಯಿತು ಈಗ ಶಾರುಖ್‌ ʼಪಠಾಣ್‌ʼಗೂ ತಟ್ಟಿತು ಬಾಯ್‌ ಕಾಟ್ ಬಿಸಿ

ಆಮಿರ್‌, ಹೃತಿಕ್‌ ಆಯ್ತು ಈಗ ಶಾರುಖ್‌ ಖಾನ್ ʼಪಠಾಣ್‌ʼಗೂ ತಟ್ಟಿತು boycott ಬಿಸಿ

ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ರಾಮುಲು

ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ರಾಮುಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದ್ಯಕ್ಕಾಗಿ ಬೈಕ್‌ ಕಳ್ಳತನ: ಇಬ್ಬರ ಬಂಧನ, ಓರ್ವ ಪರಾರಿ

ಮದ್ಯಕ್ಕಾಗಿ ಬೈಕ್‌ ಕಳ್ಳತನ: ಇಬ್ಬರ ಬಂಧನ, ಓರ್ವ ಪರಾರಿ

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಇದ್ದಾರೆ: ಕಾಂಗ್ರೆಸ್‌ ನಾಯಕರಿಗೆ ಸಿಎಂ ತಿರುಗೇಟು

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಇದ್ದಾರೆ: ಕಾಂಗ್ರೆಸ್‌ ನಾಯಕರಿಗೆ ಸಿಎಂ ತಿರುಗೇಟು

ಉಕ್ಕಿನ ಮೇಲ್ಸೇತುವೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಉಕ್ಕಿನ ಮೇಲ್ಸೇತುವೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

tdy-3

ವೃದ್ಧೆ ಕೊಂದು ಚಿನ್ನಾಭರಣ ದೋಚಿದ ಹಂತಕರು

MUST WATCH

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಿ, ಇಲ್ಲದಿದ್ರೆ ಆಕ್ರೋಶ ಎದುರಿಸಿ: ಜಯಮೃತ್ಯುಂಜಯಶ್ರೀ

ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಿ, ಇಲ್ಲದಿದ್ರೆ ಆಕ್ರೋಶ ಎದುರಿಸಿ: ಜಯಮೃತ್ಯುಂಜಯಶ್ರೀ

ಗಾಂಧೀಜಿ ಸಮಾಜವಾದಿ ತತ್ವ ಎಲ್ಲರಿಗೂ ಸ್ಫೂರ್ತಿ

ಗಾಂಧೀಜಿ ಸಮಾಜವಾದಿ ತತ್ವ ಎಲ್ಲರಿಗೂ ಸ್ಫೂರ್ತಿ

14water

30ರೊಳಗೆ ಕಾಲುವೆಗಳಿಗೆ ನೀರು: ಸಚಿವ ಕತ್ತಿ

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

ಸಂವಿಧಾನದ ಮೌಲ್ಯದಡಿ ಪ್ರಜಾಪ್ರಭುತ್ವ ಮುನ್ನಡೆ

ಸಂವಿಧಾನದ ಮೌಲ್ಯದಡಿ ಪ್ರಜಾಪ್ರಭುತ್ವ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.