ಗೋವಾದಲ್ಲಿ ಅಖೀಲ ವಿಶ್ವ ಕೊಂಕಣಿ ಸಮ್ಮೇಳನ ಆಯೋಜನೆ: ಡಾ| ಪ್ರಮೋದ್ ಸಾವಂತ್
Team Udayavani, Feb 9, 2023, 7:00 AM IST
ಮಂಗಳೂರು: ಗೋವಾದಲ್ಲಿ ಈ ಬಾರಿ ಅಖೀಲ ವಿಶ್ವ ಕೊಂಕಣಿ ಸಮ್ಮೇಳನವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಇಲ್ಲಿನ ಕೊಂಕಣಿ ಭಾಷಿಕರು ಮುಂದಾಳತ್ವ ವಹಿಸಿಕೊಂಡರೆ ಸರಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಹೇಳಿದರು.
ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಬುಧವಾರ ವಿಶ್ವ ಕೊಂಕಣಿ ಸರದಾರ, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ ಶೆಣೈ ಅವರ ಹಿತ್ತಾಳೆಯ ಪ್ರತಿಮೆ ಅನಾವರಣ ಮತ್ತು ಇತರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಷ್ಟ್ರ ಮಟ್ಟದ ಕೊಂಕಣಿ ಸಮ್ಮೇಳನ ಈಗಾಗಲೇ ಕೇರಳದಲ್ಲಿ ನಡೆದಿದೆಯೇ ಹೊರತು ವಿಶ್ವ ಸಮ್ಮೇಳನ ನಡೆದಿಲ್ಲ. ಆದ್ದರಿಂದ ಕೊಂಕಣಿ ಭಾಷೆಯ ರಾಜಧಾನಿ ಯಾಗಿರುವ ಗೋವಾದಲ್ಲಿ ಸಮ್ಮೇಳನ ಆಯೋಜಿಸಲು ಚಿಂತಿಸಲಾಗಿದೆ. ಅ ಮೂಲಕ ಜಗತ್ತಿನಲ್ಲಿರುವ ಎಲ್ಲ ಕೊಂಕಣಿ ಸಮುದಾಯಗಳನ್ನು ಒಟ್ಟು ಸೇರಿಸಿ, ಸಂಸ್ಕೃತಿ, ಭಾಷೆ, ಕಲೆಯನ್ನು ಪರಿಚಯ ಮಾಡಿಕೊಂಡು ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು ಎಂದರು.
ಕರ್ನಾಟಕದಲ್ಲಿ ಕೊಂಕಣಿ ಭಾಷೆಯ ಬೆಳವಣಿಗೆಗೆ ನೀಡುತ್ತಿರುವ ಪ್ರೋತ್ಸಾಹ ಉಲ್ಲೇಖನೀಯ. ಕೇಂದ್ರ ಸರಕಾರವೂ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡುವ ಎನ್‌ಇಪಿ ಜಾರಿಗೊಳಿಸಿದೆ. ಗೋವಾದಲ್ಲಿ ಕೊಂಕಣಿ ಅಕಾಡೆಮಿ ಸರಕಾರದ ಮಟ್ಟದಲ್ಲಿ ಭಾಷೆಯ ಬೆಳವಣಿಗೆಗೆ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಶ್ವಕೊಂಕಣಿ ಕೇಂದ್ರವನ್ನೂ ಜೋಡಿಸಿ ಕೊಂಡು ಕೆಲಸ ಮಾಡಲಾಗುವುದು ಎಂದರು.
ಕೊಂಕಣಿ ಸಂಸ್ಕೃತಿ
ಕೊಂಕಣಿಯಲ್ಲಿ ಹಲವು ಸಾಹಿತ್ಯ ಕೃತಿಗಳು ರಚನೆಯಾಗುತ್ತಿದ್ದು, ನಾಟಕ- ಸಿನೆಮಾಗಳು ಭಾಷೆಯ ಮೌಲ್ಯವನ್ನು ಹೆಚ್ಚಿಸಿದೆ. ಕೊಂಕಣಿ ಒಂದು ಭಾಷೆ ಮಾತ್ರ ಅಲ್ಲ ಅದೊಂದು ಸಂಸ್ಕೃತಿ. ನಮ್ಮ ಮುಂದಿನ ಪೀಳಿಗೆಗೂ ಭಾಷೆ ಮಾತನಾ ಡಲು, ಓದಲು-ಬರೆಯಲು ಕಲಿಸುವ ಅಗತ್ಯವಿದ್ದು, ಇದರಿಂದ ಭಾಷೆಯ ಭವಿಷ್ಯ ಉಜ್ವಲವಾಗಲಿದೆ. ಕೊಂಕಣಿ ಕಲಿತವರಿಗೂ ಉತ್ತಮವಾದ ಬೇಡಿಕೆ ಸೃಷ್ಟಿಯಾಗಿದೆ. ಮೈಸೂರಿನ ರಾಷ್ಟ್ರೀಯ ಗ್ರಂಥಾಲಯದ ಮೂಲಕ ಗೆಜೆಟೆಡ್, ಕೃತಿಗಳ ಕೊಂಕಣಿ ತರ್ಜುಮೆಗೆ ಬಹಳಷ್ಟು ಮಂದಿಗೆ ಅವಕಾಶವಿದೆ ಎಂದರು.
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಚೇರ್ಮನ್ ಡಾ| ಪಿ. ದಯಾನಂದ ಪೈ ಮಾತನಾಡಿ, ವಿಶ್ವ ಕೊಂಕಣಿ ಕೇಂದ್ರ ಬಸ್ತಿ ವಾಮನ ಶೆಣೈ ಅವರ ಕನಸಾಗಿತ್ತು. ಅದನ್ನು ಅವರು ನನಸು ಮಾಡಿದ್ದಾರೆ. ಕೇಂದ್ರ ಪ್ರವೇಶಿಸುವಾಗ ದೇವಾಲಯಕ್ಕೆ ಬಂದ ಅನುಭವವಾಗುತ್ತದೆ. ಕೇವಲ 20 ಲಕ್ಷ ಜನಸಂಖ್ಯೆ ಹೊಂದಿರುವ ಕೊಂಕಣಿ ಭಾಷಿಕ ಸಮುದಾಯದವರು ಇಂದು ಎಲ್ಲ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ವಿಶ್ವದ ಯಾವುದೇ ಸಮಯದಾಯ ಮಾಡದಿರುವ ಸಾಧನೆ ಮಾಡಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ. ವೇದವ್ಯಾಸ ಕಾಮತ್, ಉದ್ಯಮಿ ಉಲ್ಲಾಸ್ ಕಾಮತ್, ಉದ್ಯಮಿ ಮೈಕಲ್ ಡಿ’ಸೋಜಾ ಉಪಸ್ಥಿತರಿದ್ದರು.
ಸಮ್ಮಾನ
ದಾನಿಗಳಾದ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮತ್ತು ಉಷಾ ನಂದಗೋಪಾಲ ಶೆಣೈ, ಡಿ. ರಮೇಶ್ ನಾಯಕ್ ಮೈರಾ ಮತ್ತು ಸುಚಿತ್ರಾ ಆರ್. ನಾಯಕ್ ಅವರನ್ನು ಸಮ್ಮಾನಿಸಲಾಯಿತು. ವಾಸ್ತು ವಿನ್ಯಾಸಕಾರ ದಿನೇಶ್ ಶೇಟ್, ಗುತ್ತಿಗೆದಾರ ಸುಧೀರ್ ಶೆಣೈ, ಮತ್ತು ಒಳಾಂಗಣ ವಿನ್ಯಾಸಕ ಬಸ್ತಿ ಮಿಲಿಂದ್ ಶೆಣೈ ಅವರನ್ನು ಗೌರವಿಸಲಾಯಿತು.
ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಅವರು ಸ್ವಾಗತಿಸಿ, ವಿಶ್ವ ಕೊಂಕಣಿ ಸ್ಕಾಲರ್‌ಶಿಪ್ ಫಂಡ್ ಕಾರ್ಯದರ್ಶಿ ಪ್ರದೀಪ್ ಜಿ. ಪೈ ವಂದಿಸಿದರು. ಶಕುಂತಳಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?
ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು
ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ
ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ
ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR