ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ


Team Udayavani, Feb 4, 2023, 7:56 PM IST

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಸವದತ್ತಿ: ಕೋವಿಡ್ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಕಳೆಗುಂದಿದ್ದ ಭರತ ಹುಣ್ಣಿಮೆ ಜಾತ್ರೆಗೆ ಈ ಬಾರಿ ವಿಶೇಷ ಮೇರಗು ಬಂದಿದೆ. ಭಾನುವಾರ ನಡೆಯಲಿರುವ ಜಾತ್ರೆಯ ಅಂಗವಾಗಿ ಯಲ್ಲಮ್ಮನಗುಡ್ಡ ಮಧುವನಗಿತ್ತಿಯಂತೆ ಸಿದ್ದಗೊಳ್ಳುತ್ತಿದೆ. ದೇವಸ್ಥಾನ, ಪವಳಿಗಳನ್ನು ಶುಚಿಗೊಳಸಿ ತಳಿರು ತೋರಣಗಳಿಂದ ಅಮ್ಮನ ದೇವಸ್ಥಾನವನ್ನು ಅಲಂಕರಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಒಂದೆಡೆ ಸೇರಿ ಜಾತ್ರೆ ಆಚರಿಸುವ ಅಮ್ಮನ ಸನ್ನಿಧಿಯಲ್ಲಿ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆದಿದೆ.

ಚಕ್ಕಡಿ, ಟ್ರ್ಯಾಕ್ಟರ್, ಖಾಸಗಿ ವಾಹನ, ದ್ವಿಚಕ್ರ ವಾಹನಗಳ ಮೂಲಕ ದೇವಸ್ಥಾನದತ್ತ ಆಗಮಿಸುವ ಭಕ್ತರು ಇಲ್ಲಿಯೇ ಕೆಲ ದಿನಗಳವರೆಗೆ ವಾಸ್ತವ್ಯ ಹೂಡಿ, ದೇವಿಗೆ ಪರಡಿ ತುಂಬುತ್ತಾರೆ. ಪರಂಪರೆಯಂತೆ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಶನಿವಾರದಿಂದಲೇ ತಂಡೋಪ ತಂಡವಾಗಿ ಭಕ್ತರು ಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಾನುವಾರ ಅದ್ದೂರಿಯಾಗಿ ಜಾತ್ರೆ ಜರುಗಲಿದ್ದು, 20 ಲಕ್ಷಕ್ಕೂ ಅಧಿಕ ಭಕ್ತರು ಸೇರಲಿದ್ದಾರೆ.

ದೂರದೂರುಗಳಿಂದ ವಿವಿಧ ವಾದ್ಯಮೇಳಗಳೊಂದಿಗೆ ಸಾಂಸ್ಕೃತಿಕ ಕುಣಿತ ಹಾಕುತ್ತಾ ಕಾಲ್ನಡಿಗೆ ಮೂಲಕ ಜೋಗುತಿಯರು ದೇವರ ಮೂರ್ತಿ ಹೊತ್ತು ದೇವಸ್ಥಾನದತ್ತ ಹೆಜ್ಜೆ ಹಾಕುತ್ತಿರುವ ದೃಷ್ಯಗಳು ಕಾಣ ಸಿಗುತ್ತಿವೆ. ವರ್ಷಕ್ಕೊಮ್ಮೆ ಅತೀದೊಡ್ಡ ಪ್ರಮಾಣದಲ್ಲಿ ಜರುಗಲಿರುವ ಈ ಜಾತ್ರೆಗೆ ಸೇರಿದ ಅಸಂಖ್ಯಾತ ಭಕ್ತರನ್ನು ಕಣ್ತುಂಬಿಸಿಕೊಳ್ಳುವುದೇ ಸಂಭ್ರಮದ ಸಂಗತಿ.

ಅತೀ ಹೆಚ್ಚು ಜನಸಂದಣಿಯಾಗುವ ಜಾತ್ರೆ ಇದಾಗಿದ್ದು, ಹುಣ್ಣಿಮೆಯ ಮೊದಲ ಹಾಗೂ ನಂತರದ ಮಂಗಳವಾರ, ಶುಕ್ರವಾರದಂದು ಜನ ಸಾಗರವೇ ಹರಿದು ಬರಲಿದೆ. ಈಗಾಗಲೇ ಗುಡ್ಡದ ಇಕ್ಕೆಲಗಳಲ್ಲಿ ಭಕ್ತರ ದಂಡು ಬೀಡು ಬಿಟ್ಟಿದೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಹಾಗೂ ಸಂಕಷ್ಟ ಪರಿಹರಿಸುವ ದೈವೀಶಕ್ತಿಯಾಗಿ ಭಕ್ತರ ಮನದಲ್ಲಿ ನೆಲೆಸಿರುವ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆಗೆ ಮುನ್ನಾದನವಾದ ಶನಿವಾರದಿಂದಲೇ ಕುಟಂಬ ಸಮೇತರಾಗಿ ಅಮ್ಮನ ಸನ್ನಿಧಿಯತ್ತ ಮುಖ ಮಾಡಿದ್ದಾರೆ.

ಉದ್ಘಾಟನೆಯಾಗದ ರಸ್ತೆ ಸೇತುವೆ: ಜೋಗುಳಬಾವಿ ಮಾರ್ಗದಿಂದ ಉಗರಗೋಳ ನಾಕಾದವರೆಗೆ ರಸ್ತೆ ಸೇತುವೆ ನಿರ್ಮಾಣ ಹಂತದಲ್ಲಿದೆ. ಕಾಮಗಾರಿ ಆರಂಭವಾಗಿ 5 ವರ್ಷವಾದರೂ ಅದನ್ನು ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದಿರುವದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಸಿಸಿ ಕ್ಯಾಮೆರಾಗಳ ನಿಗಾ: 300 ಪೊಲೀಸ್, 500 ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಿ ಬೀಗಿ ಭದ್ರತೆಗೆ ಒತ್ತು ಕೊಡಲಾಗಿದ್ದು, ಭಕ್ತರ ಚಲನವಲನ ಮೇಲೆ ನಿಗಾಯಿರಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಸಂಚಾರ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಜರುಗಿಸಿದೆ.

ವಿಶೇಷ ಬಸ್ ವ್ಯವಸ್ಥೆ: ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಾವಿ, ಚಿಕ್ಕೋಡಿ, ಧಾರವಾಡ, ನರಗುಂದ ಸವದತ್ತಿ ಮತ್ತಿತರ ಘಟಕಗಳಿಂದ ಬಸ್‍ಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಗದಗ, ರೋಣ, ಬಳ್ಳಾರಿ, ರಾಯಚೂರ, ಸಿಂಧನೂರುಗಳಿಂದ ಆಗಮಿಸುವ ಭಕ್ತರಿಗೆ ವಾಹನಳ ನಿಲುಗಡೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಗರಗೋಳದ ಕಿರಿದಾದ ರಸ್ತೆಯಲ್ಲಿ ದಟ್ಟನೆಯಿಂದಾಗಿ ಸಮಸ್ಯೆ ಎದುರಿಸುವದು ಸರ್ವೇ ಸಾಮಾನ್ಯದಂತಿದೆ.

– ಡಿ.ಎಸ್. ಕೊಪ್ಪದ, ಸವದತ್ತಿ

ಟಾಪ್ ನ್ಯೂಸ್

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌. ಒನ್‌ ಎ. 2ರಂದು ಲೋಕಾರ್ಪಣೆ

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌.ಒನ್‌ ಲೋಕಾರ್ಪಣೆ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

sss

ತಂದೆಯ ಸಾವಿನ ದುಃಖದಲ್ಲೂ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ಮಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

1-bneki

ಎಲೆಕ್ಟ್ರಿಕ್ ಸ್ಕೂಟರ್‌ ಏಕಾಏಕಿ ಸ್ಫೋಟ; ಅಕ್ಕಪಕ್ಕದಲ್ಲಿದ್ದ ನಾಲ್ಕು ಬೈಕ್‌ಗಳು ಭಸ್ಮ

1-sadsadad

ಕಲಬುರಗಿಯಲ್ಲಿ ಬಂಜಾರಾ ಸಮುದಾಯದ ಬೃಹತ್ ಪ್ರತಿಭಟನೆ

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?

ವಿಧಾನಸಭೆ ಚುನಾವಣೆ: ಟಿಕೆಟ್‌ ಆಕಾಂಕ್ಷಿಗಳಲ್ಲಿ  ತಳಮಳ

ವಿಧಾನಸಭೆ ಚುನಾವಣೆ: ಟಿಕೆಟ್‌ ಆಕಾಂಕ್ಷಿಗಳಲ್ಲಿ  ತಳಮಳ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsasadsa

ಗೋಡೆಯ ಬಿರುಕಿನಲ್ಲಿ ಅಡಗಿದ್ದವು ನಾಗರಹಾವು ಮತ್ತು 10 ಮರಿಗಳು!

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

1-sadsad-d

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ