
ಶಿವಮೊಗ್ಗದಲ್ಲಿ 1.40 ಕೋಟಿ ರೂ.ವಶ; ತರೀಕೆರೆಯಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನ ವಶ
Team Udayavani, Mar 31, 2023, 10:09 PM IST

ಶಿವಮೊಗ್ಗ/ ಚಿಕ್ಕಮಗಳೂರು: ಶಿವಮೊಗ್ಗ ನಗರದ ಹೊರವಲಯದ ಅರಕೆರೆ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ವೇಳೇ 1.40 ಕೋಟಿ ನಗದು ಪತ್ತೆಯಾಗಿದ್ದು, ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ನಗರಕ್ಕೆ ಬ್ಯಾಂಕ್ ಗಳಿಗೆ ಹಣ ಸಾಗಿಸುವ ಮಾದರಿಯ ವಾಹನದಲ್ಲಿ ಭಾರಿ ಪ್ರಮಾಣದ ಹಣ ಪತ್ತೆಯಾಗಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪತ್ತೆಯಾದ ಹಣಕ್ಕೆ ಯಾವುದೇ ದಾಖಲಾತಿ ಇಲ್ಲದ ಕಾರಣಕ್ಕೆ ಹಣವನ್ನು ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಹೊರವಲಯದಲ್ಲಿ ಒಟ್ಟು 36 ಚೆಕ್ ಪೋಸ್ಟ್ ರಚಿಸಿದ್ದು, ನಿರಂತರ ವಾಹನಗಳ ಪರಿಶೀಲನೆ ಮಾಡಲಾಗುತ್ತಿದೆ.
ತರೀಕೆರೆ ಚಿನ್ನ ವಶ
ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ದಾಖಲೆ ಇಲ್ಲದ 17 ಕೆ.ಜಿ. ಚಿನ್ನ ಹಾಗೂ ಬೆಳ್ಳಿ ಸೀಜ್ ಮಾಡಲಾಗಿದೆ. ಚಿನ್ನದ ಮೌಲ್ಯ 6 ಕೋಟಿ 44 ಲಕ್ಷ ರೂ. ಆಗಿದೆ. ಶಿವಮೊಗ್ಗ-ಚಿಕ್ಕಮಗಳೂರು ಗಡಿ ಗ್ರಾಮವಾದ ಎಂ.ಸಿ.ಹಳ್ಳಿಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಕಿರುವ ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಲಾಗಿದೆ. ಟಾಟಾ ಏಸ್ ನಲ್ಲಿ ಚಿನ್ನ-ಬೆಳ್ಳಿ ಸಾಗಿಸಲಾಗುತ್ತಿದ್ದು, ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಂದ ನಂತರ ಹೆಚ್ಚಿನ ತನಿಖೆ ನಡೆಸಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
