ಮರಣಮೃದಂಗ: ದೆಹಲಿಯಲ್ಲಿ ಆಕ್ಸಿಜನ್ ಕೊರತೆಯಿಂದ ಮತ್ತೆ 25ರೋಗಿಗಳ ಸಾವು
ಇತರ ರಾಜ್ಯಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಿಸುವಂತಾಗಿದೆ ಎಂದು ವರದಿ ಹೇಳಿದೆ.
Team Udayavani, Apr 24, 2021, 12:23 PM IST
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮರಣಮೃದಂಗ ಮುಂದುವರಿದಿದ್ದು, ಇಲ್ಲಿನ ಜೈಪುರ್ ಗೋಲ್ಡನ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ(ಏ.23) ರಾತ್ರಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಚಿನ್ ಸ್ಪೆಷಲ್: ಇವು ತೆಂಡೂಲ್ಕರ್ ರ ಐದು ಮಾಸ್ಟರ್ ಕ್ಲಾಸ್ ಏಕದಿನ ಇನ್ನಿಂಗ್ಸ್ ಗಳು
ಜೈಪುರ್ ಗೋಲ್ಡನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ.ಕೆ.ಬಾಲುಜಾ ಅವರು ಇಂಡಿಯಾ ಟುಡೇ ಜತೆ ಮಾತನಾಡುತ್ತ, ನಮ್ಮ ಆಸ್ಪತ್ರೆಯಲ್ಲಿ ಈಗ ಕೇವಲ ಅರ್ಧ ಗಂಟೆಯಷ್ಟು ಆಕ್ಸಿಜನ್ ಮಾತ್ರ ಇದೆ. ನಿನ್ನೆ ನಮಗೆ 3,600 ಟನ್ ಗಳಷ್ಟು ಆಕ್ಸಿಜನ್ ಬೇಕಾಗಿತ್ತು. ಆದರೆ ನಮಗೆ ಸಿಕ್ಕಿದ್ದು ಕೇವಲ 1,500 ಲೀಟರ್ಸ್ ಆಕ್ಸಿಜನ್ ಮಾತ್ರ. ಕಳೆದ ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ 25 ಮಂದಿ ಸಾವಿಗೀಡಾಗುವಂತಾಗಿದೆ ಎಂದು ವಿವರಿಸಿದ್ದಾರೆ.
ಶನಿವಾರ(ಏ.24) ಬೆಳಗ್ಗೆ ಶೀಘ್ರವಾಗಿ ಆಕ್ಸಿಜನ್ ಸರಬರಾಜು ಮಾಡುವಂತೆ ದೆಹಲಿ ಸರ್ಕಾರಕ್ಕೆ ಮನವಿ ಕಳುಹಿಸಲಾಗಿದೆ ಎಂದು ಬಾಲುಜಾ ತಿಳಿಸಿದ್ದಾರೆ. ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಿಸುವಂತಾಗಿದೆ ಎಂದು ವರದಿ ಹೇಳಿದೆ.
ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 25 ಮಂದಿ ಕೋವಿಡ್ 19 ರೋಗಿಗಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಶ್ಚಿಮಬಂಗಾಳ; ಮಹಿಳೆಯರು, ಮಕ್ಕಳು ಸೇರಿ ನಾಲ್ವರ ಬರ್ಬರ ಹತ್ಯೆ: ಆರೋಪಿ ಸೆರೆ
ಜಮ್ಮು ಕಾಶ್ಮೀರದ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ: ಮೂವರು ಯೋಧರು ಹುತಾತ್ಮ
ಪೋಸ್ಟ್ ಇಂಡಿಯಾ ಧ್ವಜಕ್ಕೆ ಜಿಎಸ್ಟಿ, ವಿತರಣಾ ಶುಲ್ಕವಿಲ್ಲ
ದೇಶ ತೊರೆಯುವರ ವಿವರ 24 ಗಂಟೆ ಮುಂಚೆ ಕಸ್ಟಮ್ಸ್ ಇಲಾಖೆಗೆ
ರಾಬಿನ್ ಹುಡ್ ಆರ್ಮಿಯಿಂದ 75 ಲಕ್ಷ ಊಟ! ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶಿಷ್ಟ ಆಚರಣೆ
MUST WATCH
3 ವರ್ಷಗಳ ಬಳಿಕ ಕೆಆರ್ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ಪ್ರವೀಣ್ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ
ಹೊಸ ಸೇರ್ಪಡೆ
ಜಂಬೂ ಸವಾರಿ ಆನೆಗಳ ತೂಕ ಪರೀಕ್ಷೆ: ಮಾಜಿ ಕ್ಯಾಪ್ಟನ್ ಅರ್ಜುನನೇ ಫಿಟ್
ಚುನಾವಣೆಗೂ ಮುನ್ನವೇ ರಂಗೇರಿದ ಕಂಪ್ಲಿ – ಕುರುಗೋಡು ರಾಜಕೀಯ ನಾಯಕರ ಕದನ
ಸತ್ಯ ಏನೆಂದು ನನಗೆ ಗೊತ್ತು, ನನ್ನ ನಿರ್ಣಯಗಳು ಗಟ್ಟಿಯಾಗಿದೆ: ಬದಲಾವಣೆ ವದಂತಿ ಬಗ್ಗೆ ಸಿಎಂ
ಧರ್ಮಸ್ಥಳದಲ್ಲಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯ ಉದ್ಘಾಟನೆ
ಮಾರಾಟದಲ್ಲಿ ಕುಸಿತ: ಬೃಹತ್ ಇ-ವಾಣಿಜ್ಯ ಕಂಪನಿ ಅಲಿಬಾಬಾದಿಂದ 10 ಸಾವಿರ ಉದ್ಯೋಗಿಗಳ ವಜಾ