Udayavni Special

ಅಧಿಕ ಬೆಲೆಗೆ ರೆಮ್‌ಡಿಸಿವಿಯರ್‌ ಮಾರಾಟ: ಸಿಸಿಬಿಯಿಂದ ಮೂವರ ಬಂಧನ


Team Udayavani, Apr 18, 2021, 10:50 PM IST

ಅಧಿಕ ಬೆಲೆಗೆ ರೆಮ್‌ಡಿಸಿವಿಯರ್‌ ಮಾರಾಟ: ಸಿಸಿಬಿಯಿಂದ ಮೂವರ ಬಂಧನ

ಬೆಂಗಳೂರು: ಕೊರೊನಾ ನಿಯಂತ್ರಿಸಲು ಸರ್ಕಾರಗಳು ಕಸರತ್ತು ನಡೆಸುತ್ತಿರುವಂತೆಯೇ, ಕೊರೊನಾಗೆ ಪರಿಣಾಮಕಾರಿ ಔಷಧಿಯಾದ “ರೆಮ್‌ ಡೆಸಿವಿಯರ್‌’ ಚುಚ್ಚು ಮದ್ದಿನ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕಳೆದೆರಡು ದಿನಗಳಿಂದ ಚುಚ್ಚುಮದ್ದಿನ ಅಭಾವ ಸೃಷ್ಟಿಸಲು ಮುಂದಾಗಿರುವವರಿಗೆ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಜತೆಗೆ, ಚುಚ್ಚಮದ್ದನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು, ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಔಷಧಿ ಅಂಗಡಿ ಮಾಲೀಕರ ವಿರುದ್ಧ ರಾಜ್ಯ ಪೊಲೀಸ್‌ ಇಲಾಖೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.

ಸುದ್ದಗುಂಟೆಪಾಳ್ಯದ ಗುರುಶ್ರೀ ಮೆಡಿಕಲ್‌ ಸ್ಟೋರ್‌ ಮಾಲೀಕ ರಾಜೇಶ್‌ ಮತ್ತು ಸಾಕೀಬ್‌ ಹಾಗೂ ಸೊಹೈಲ್‌ ಬಂಧಿತರು. ಆರೋಪಿಗಳಿಂದ 11 ರೆಮಿಡಿಸಿವಿಯರ್‌ ಚುಚ್ಚುಮದ್ದು ವಶಕ್ಕೆ ಪಡೆಯಲಾಗಿದೆ. ಇವರಿಗೆ ಯಾವ ಸಗಟು ವ್ಯಾಪಾರಿ ಚುಚ್ಚು ಮದ್ದು ಪೂರೈಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು.

ಇದನ್ನೂ ಓದಿ :ಅಸ್ಸಾಂ ಮಾಜಿ ಮುಖ್ಯಮಂತ್ರಿ ಭೂಮಿಧರ್ ಬರ್ಮನ್ ನಿಧನ

ಡಿಜಿಪಿ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು, ಗುರುಶ್ರೀ ಮೆಡಿಕಲ್‌ ಶಾಪ್‌ನಲ್ಲಿ ಹೆಚ್ಚಿನ ಬೆಲೆಗೆ ಚುಚ್ಚು ಮದ್ದು ಮಾರಾಟ ಮಾಡುತ್ತಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಗ್ರಾಹಕರ ಸೋಗಿನಲ್ಲಿ ತೆರಳಿ ರೆಮಿಡಿಸಿವಿಯರ್‌ ಇಂಜೆಕ್ಷನ್‌ ಖರೀದಿಗೆ ಹೋದಾಗ ಮುಖ ಬೆಲೆಗಿಂತ ಹೆಚ್ಚಿನ ಹಣ ಕೇಳಿದಾಗ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ. ಸದ್ಯ 11 ಚುಚ್ಚು ಮದ್ದು ವಶಕ್ಕೆ ಪಡೆಯಲಾಗಿದೆ. ಈವರೆಗೆ ಎಷ್ಟು ಇಂಜೆಕ್ಷನ್‌ಗಳನ್ನು ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ನೋಡಲ್ ಅಧಿಕಾರಿಗಳ ನಿರ್ಲಕ್ಷಕ್ಕೆ ಕಠಿಣ ಕ್ರಮ – ಅರವಿಂದ ಲಿಂಬಾವಳಿ

ನೋಡಲ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ – ಅರವಿಂದ ಲಿಂಬಾವಳಿ

ಕೋವಿಡ್ ನಿಯಂತ್ರಿಸಲು ಅಣ್ಣಮ್ಮದೇವಿ ಮೊರೆ ಹೋದ ಸಿಎಂ

ಕೋವಿಡ್ ನಿಯಂತ್ರಿಸಲು ಅಣ್ಣಮ್ಮದೇವಿ ಮೊರೆ ಹೋದ ಸಿಎಂ ಬಿಎಸ್ ವೈ

yadiyurappa

ಮೇ 10ರಿಂದ 14 ದಿನಗಳ ಕಾಲ ಕರುನಾಡು ಸ್ತಬ್ಧ: ಲಾಕ್ ಡೌನ್ ಆದೇಶ ಹೊರಡಿಸಿದ ಸಿಎಂ ಬಿಎಸ್ ವೈ

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.