ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು
Team Udayavani, Jan 28, 2022, 9:34 PM IST
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 31,198 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 50 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿನ ಸಂಖ್ಯೆ ಶೇ.20.91 ಇದೆ.
ಬೆಂಗಳೂರು ನಗರ 15199, ಮೈಸೂರು 1877, ಧಾರವಾಡ 1500, ತುಮಕೂರು 1315, ಹಾಸನ 1037,ಮಂಡ್ಯ 963, ಉಡುಪಿ 818, ಉತ್ತರ ಕನ್ನಡ 760 , ಬೆಳಗಾವಿ 725, ಬಳ್ಳಾರಿ 709, ಚಾಮರಾಜನಗರ 618, ಬೆಂಗಳೂರು ಗ್ರಾಮಾಂತರ 558, ದಕ್ಷಿಣ ಕನ್ನಡ 516,ಶಿವಮೊಗ್ಗ 509,ಕೋಲಾರ 452 , ಚಿಕ್ಕಬಳ್ಳಾಪುರ 427, ಕಲಬುರಗಿ 406, ಕೊಡಗು 371, ಚಿಕ್ಕಮಗಳೂರು 283, ರಾಮನಗರ 262, ರಾಯಚೂರು 225, ಯಾದಗಿರಿ 207, ಬೀದರ್ 194, ಚಿತ್ರದುರ್ಗ 192, ಬಾಗಲಕೋಟೆ 187,ದಾವಣಗೆರೆ 186, ಹಾವೇರಿ 179, ಗದಗ 171, ವಿಜಯಪುರ ಜಿಲ್ಲೆಯಲ್ಲಿ 125 ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ.
ಮರಣ ಪ್ರಕರಣ ಹೆಚ್ಚಳ
ಬೆಂಗಳೂರು ಮತ್ತು ಮೈಸೂರಿನಲ್ಲಿ ತಲಾ 8, ಹಾಸನ 5, ತುಮಕೂರು ಹಾಗೂ ದ.ಕ. ಜಿಲ್ಲೆಯಲ್ಲಿ ತಲಾ 4, ಬೆಳಗಾವಿ ಹಾಗೂ ಶಿವಮೊಗ್ಗ ತಲಾ 3, ಹಾವೇರಿ ಹಾಗೂ ರಾಮನಗರದಲ್ಲಿ ತಲಾ 2, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಡಗು,ಕೋಲಾರ, ಕಲಬುರಗಿ, ಉ.ಕ. ಜಿಲ್ಲೆಯಲ್ಲಿ ತಲಾ ಒಂದರಂತೆ ಒಟ್ಟು 50 ಮರಣ ಪ್ರಕರಣ ದಾಖಲಾಗಿದೆ. ಮರಣ ಪ್ರಮಾಣ ಶೇ. 0.17ಕ್ಕೆ ಏರಿಕೆಯಾಗಿದೆ.
ವೈಜ್ಞಾನಿಕ ವಿಲೇವಾರಿ
ಈಮಧ್ಯೆ, ಮನೆಯಲ್ಲಿ ಕೋವಿಡ್ ಪರೀಕ್ಷೆಗೆ ಬಳಸಲಾಗುವ ಹೋಮ್‌ಕಿಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಮನೆ ಹಸಿ ಹಾಗೂ ಒಣ ತ್ಯಾಜ್ಯದೊಂದಿಗೆ ಸೇರ್ಪಡೆಗೊಳಿಸದೆ ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವಂತೆ ಮಾರ್ಗಸೂಚಿಯನ್ನು ಪರಿಷ್ಕೃತಗೊಳಿಸಿದೆ.