Meta ದಿಂದ 6 ಸಾವಿರ ಮಂದಿ ವಜಾ?
Team Udayavani, May 20, 2023, 8:03 AM IST
ವಾಷಿಂಗ್ಟನ್: ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ನ ಮಾತೃಸಂಸ್ಥೆ ಮೆಟಾ ತನ್ನ ಉದ್ಯೋಗ ಕಡಿತ ಮುಂದುವರಿಸಿದ್ದು, ಮಾಸಾಂತ್ಯಕ್ಕೆ ಜಾಗತಿಕ ಉದ್ಯೋಗಿಗಳ ಪೈಕಿ 6 ಸಾವಿರ ಮಂದಿಯನ್ನು ವಜಾಗೊಳಿಸಲು ಯೋಜಿಸಿದೆ. ಸಂಸ್ಥೆಯ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ಕ್ಲೆಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ಮಾಸಾಂತ್ಯದ ಒಳಗಾಗಿ ಅದು ಜಾರಿಯಾಗುವ ಸಾಧ್ಯತೆ ಇದೆ. 2022ರ ನವೆಂಬರ್ನಲ್ಲಿ 11 ಸಾವಿರ ಉದ್ಯೋಗವನ್ನು ಮೆಟಾ ಕಡಿತಗೊಳಿಸಿತ್ತು. ಪ್ರಸಕ್ತ ವರ್ಷ 10 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಸಿಇಒ ಮಾರ್ಕ್ ಜುಕರ್ಬರ್ಗ್ ಇತ್ತೀಚೆಗೆ ಘೋಷಿಸಿದ್ದರು. ಅದರ ಫಲವಾಗಿ ಮಾರ್ಚ್ನಲ್ಲಿ ನಾಲ್ಕು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ