B.Ed ಕೋರ್ಸ್ಗೆ ಶೇ.75 ಮೀಸಲು ಪ್ರಶ್ನಾರ್ಹ: ಸುಪ್ರೀಂಕೋರ್ಟ್
Team Udayavani, Apr 30, 2023, 7:55 AM IST
ನವದೆಹಲಿ: ಬ್ಯಾಚುಲರ್ ಆಫ್ ಎಜುಕೇಶನ್ (ಬಿ.ಇಡಿ) ಕೋರ್ಸ್ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಮಧ್ಯಪ್ರದೇಶ ನಿವಾಸಿಗಳಿಗೆ ಶೇ.75 ಸೀಟುಗಳನ್ನು ಮೀಸಲಾಗಿ ಇರಿಸಿರುವುದರ ಬಗ್ಗೆ ಮತ್ತೂಮ್ಮೆ ಪರಿಶೀಲನೆ ಮಾಡಿ. ಹೀಗೆಂದು ಸುಪ್ರೀಂಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇಂಥ “ಪರಿಪೂರ್ಣ ಮೀಸಲು’ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ನ್ಯಾ.ದಿನೇಶ್ ಮಾಹೇಶ್ವರಿ ಮತ್ತು ನ್ಯಾ. ಸುಧಾಂಶು ಧುಲಿಯಾ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ಮಧ್ಯಪ್ರದೇಶ ಸರ್ಕಾರಕ್ಕೆ ಕೋರ್ಸ್ಗಳಿಗೆ ಸಂಬಂಧಿಸಿ ಸೀಟುಗಳನ್ನು ಮೀಸಲಾಗಿಡಲು ಅಧಿಕಾರ ಇದೆ. ಆದರೆ, ಶೇ.75ರ ಮಿತಿ ಎನ್ನುವುದು ಹೆಚ್ಚಾಯಿತು. 2 ವರ್ಷಗಳ ಅಂಶಗಳನ್ನು ಪರಿಶೀಲಿಸಿದಾಗ ಸರ್ಕಾರದ ಉದ್ದೇಶ ಈಡೇರಿಕೆ ಕಷ್ಟ ಎಂದು ತೋರುತ್ತದೆ. ಇದರ ಹೊರತಾಗಿಯೂ ಇಂಥ ವಿಚಾರಗಳಲ್ಲಿ ಕೆಲವೊಂದು ವಾಸ್ತವಿಕ ಅಂಶಗಳನ್ನು ಗಮನಿಸುವುದು ಅಗತ್ಯ” ಎಂದು ನ್ಯಾಯಪೀಠ ಹೇಳಿದೆ,
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ನಿವಾಸಿಗಳಿಗೆ, ರಾಜ್ಯ ನಿವಾಸಿಗಳಲ್ಲದವರಿಗೆ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ಮತ್ತೂಮ್ಮೆ ನಿರ್ಧಾರವನ್ನು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ