ಅಗರ್ತಲಾ ರೈಲು ನಿಲ್ದಾಣದಲ್ಲಿ 8 ರೋಹಿಂಗ್ಯಾ, 4 ಬಾಂಗ್ಲಾದೇಶಿಗಳ ಬಂಧನ
ನುಸುಳುಕೋರರಿಗೆ ಹೈದರಾಬಾದ್ ಸುರಕ್ಷಿತ ಧಾಮವಾಗಿದೆ...
Team Udayavani, Feb 5, 2023, 9:08 PM IST
ಅಗರ್ತಲಾ: ನಗರದ ರೈಲು ನಿಲ್ದಾಣದಲ್ಲಿ 12 ಮಂದಿ ವಿದೇಶಿ ನುಸುಳುಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ 12 ಮಂದಿಯಲ್ಲಿ ಒಟ್ಟು 8 ಮಂದಿ ರೋಹಿಂಗ್ಯಾಗಳಾಗಿದ್ದು, ಮಕ್ಕಳು ಸೇರಿದಂತೆ ಆರು ಮಂದಿ ಪುರುಷರು ಮತ್ತು ಆರು ಮಂದಿ ಮಹಿಳೆಯರು.
ಬಂಧಿತ 12 ವಿದೇಶಿ ಪ್ರಜೆಗಳನ್ನು ಕರೆತರಲು ಮತ್ತು ಅವರಿಗೆ ಭಾರತದಾದ್ಯಂತ ಉದ್ಯೋಗಗಳನ್ನು ಒದಗಿಸಲು ನೆರವಾದ ಹೈದರಾಬಾದ್‌ನಿಂದ ರೋಹಿಂಗ್ಯಾ ಎಂದು ವರದಿ ಮಾಡಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಹಲವಾರು ದೇಶಗಳಿಂದ ಎಲ್ಲಾ ಮುಸ್ಲಿಂ ನುಸುಳುಕೋರರಿಗೆ ಹೈದರಾಬಾದ್ ಸುರಕ್ಷಿತ ಧಾಮವಾಗಿದೆ ಎಂದು ಕಳ್ಳಸಾಗಣೆದಾರನೊಬ್ಬ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅಗರ್ತಲಾದಿಂದ ರೋಹಿಂಗ್ಯಾಗಳು ಸೇರಿದಂತೆ ಬಾಂಗ್ಲಾದೇಶಿ ನುಸುಳುಕೋರರನ್ನು ಕರೆದೊಯ್ಯಲು ತ್ರಿಪುರಾಕ್ಕೆ ಬಂದಿದ್ದ ಹೈದರಾಬಾದಿ ದಲ್ಲಾಳಿಯನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು 12 ಜನರ ವಿರುದ್ಧ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.