ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ


Team Udayavani, Mar 29, 2023, 6:37 PM IST

swim

ಪಣಜಿ: ಸರ್ಕಾರಿ ಪ್ರಾಥಮಿಕ ಶಾಲೆ ಕುಂಬಾರ್ಜುವೆಯಲ್ಲಿ ನಾಲ್ಕನೇ ತರಗತಿಯ 10 ವರ್ಷದ ವಿದ್ಯಾರ್ಥಿ ಅಂಕುರ್ ಕುಮಾರ್ ಸಂಜಯ್ ಪ್ರಸಾದ್ ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ಘಟನೆ ನಡದಿದೆ.

ಶ್ರೀ ಶಾಂತಾದುರ್ಗಾ ಕುಂಬಾರ್ಜುವೇಕರಿಣಿ ದೇವಿ  ಗ್ರಾಮದ ಪ್ರತಿ ಮನೆಗೆ ಭೇಟಿ ನೀಡುತ್ತಾರೆ.ಜನರು ಗುಲಾಲನ್ನು ಅರ್ಪಿಸಿ ಅರ್ಚಕರಿಂದ ಗುಲಾಲನ್ನು ದೇವಿಯ ಆಶೀರ್ವಾದವಾಗಿ ತೆಗೆದುಕೊಳ್ಳುತ್ತಾರೆ. ಮಾರ್ಚ್ 25ರ ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಸುರುಚೇಭಟ್ ಕುಂಬಾರ್ಜುವೆಯಲ್ಲಿ ದೇವಿಯ ಮೆರವಣಿಗೆ ನಡೆಯಿತು.ಜನರೆಲ್ಲ ಹಬ್ಬ ಹರಿದಿನಗಳಲ್ಲಿ ದೇವಿಯ ಆಗಮನದ ಸಿದ್ಧತೆಯಲ್ಲಿ ನಿರತರಾಗಿದ್ದರು. ಇದ್ದಕ್ಕಿದ್ದಂತೆ, ಒಬ್ಬ ಹುಡುಗ ಅವನ ಕಣ್ಣಿನಲ್ಲಿ ಗುಲಾಲ್ ಬಿದ್ದ ಪರಿಣಾಮ ಕಣ್ಣು ತೊಳೆದುಕೊಳ್ಳಲು ಗೆಳೆಯರೊಂದಿಗೆ ಹತ್ತಿರದ ನದಿಯಲ್ಲಿ ಇಳಿದಿದ್ದ. ಕಣ್ಣು  ತೊಳೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದು, ಈತನನ್ನು ರಕ್ಷಿಸಲು ಈಜು ಬಾರದ ವಿಜಯಕುಮಾರ್, ಆರ್ಯನ್, ಮುಖೇಶ್ ನದಿಗೆ ಇಳಿದರು. ಆದರೆ ಈಜು ಬಾರದ ಕಾರಣ ಇವರು ನೀರಲ್ಲಿ ಮುಳುಗಲು ಪ್ರಾರಂಭಿಸಿದರು ಎನ್ನಲಾಗಿದೆ. ತನ್ನ ಸ್ನೇಹಿತರು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಅಂಕುರಕುಮಾರ್ ತಾನೇ ನೀರಿಗೆ ಧುಮುಕಿ ಸ್ನೇಹಿತರನ್ನು ನೀರಿನಿಂದ ರಕ್ಷಿಸಿದ್ದಾನೆ.

ಧೈರ್ಯಶಾಲಿ: ವಿದ್ಯಾರ್ಥಿಗಳು, ಶಿಕ್ಷಕರಿಂದ ಪ್ರಶಂಸೆ
ನೀರಲ್ಲಿ ಮುಳುಗಿದ್ದ ವಿಜಯಕುಮಾರ್ ಮತ್ತು ಅಂಕುರ್ ಕುಮಾರ್ ಅವರ ಎದೆ ಮತ್ತು ಹೊಟ್ಟೆಯನ್ನು ಹಿಸುಕಿ ವಿಜಯ ಕುಮಾರ್ ಅವರ ಹೊಟ್ಟೆಯಿಂದ ಸಾಧ್ಯವಾದಷ್ಟು ನೀರು ಹೊರತೆಗೆಯಲಾಗಿದೆ ಎನ್ನಲಾಗಿದೆ. ಅವರನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ಐಸಿಯುಗೆ ದಾಖಲಿಸಲಾಗಿದೆ.

ಮೂವರು ಸ್ನೇಹಿತರ್ನು ರಕ್ಷಿಸಿದ ಅಂಕುರ್ ಕುಮಾರ್ ಸಂಜಯ್ ಪ್ರಸಾದ್ (10) ಬಿಹಾರದವನು. ಅವನು ತಮ್ಮ ತಾಯಿ, ತಂದೆ ಮತ್ತು ಸಹೋದರಿಯೊಂದಿಗೆ ಕುಂಬಾರ್ಜುವೆಯಲ್ಲಿ ವಾಸಿಸುತ್ತಿದ್ದಾರೆ. ಅಂಕುರ್ ಕುಮಾರ್ ಅವರ ಧೈರ್ಯವನ್ನು ಸರ್ಕಾರ ಗಮನಿಸಬೇಕಾಗಿದೆ. ಅವರ ಧೈರ್ಯವನ್ನು ಸ್ಥಳೀಯ ಪಂಚಾಯಿತಿಗಳು ಮತ್ತು ಕ್ಲಬ್‍ಗಳು ಸಹ ಮೆಚ್ಚಲೇಬೇಕು ಎಂದು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೇಳಿದರು.

ಟಾಪ್ ನ್ಯೂಸ್

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

new parliament with sengol

Parliament: ವಾಕ್ಸಮರಗಳ ನಡುವೆ ಇಂದು ಭವ್ಯ ಸಂಸತ್‌ ಉದ್ಘಾಟನೆ

arrest 3

Arrest: ಆಹಾರಕ್ಕೆ ಉಗುಳಿ ಮಾರಾಟ- ವ್ಯಕ್ತಿಬಂಧನ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು