
ನ್ಯಾಯವಾದಿ,ಅವರ ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ
Team Udayavani, Apr 2, 2023, 5:50 AM IST

ಸುರತ್ಕಲ್: ಕಾಟಿಪಳ್ಳ ಮೂಡೆ„ಕೋಡಿ ನಿವಾಸಿ, ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಇಸ್ಮಾಯಿಲ್ (38) ಹಾಗೂ ಅವರ ಗರ್ಭಿಣಿ ಪತ್ನಿ ಮುಬೀನಾ ಎಂಬ ವರಿಗೆ ನೆರೆ ಮನೆ ನಿವಾಸಿಗಳಾದ ಹಕೀಮ್ ಎಂಬಾತ , ನೌಶೀನ್, ಅಶ್ರಫ್ ಎಂಬವರ ಜತೆ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಸುರತ್ಕಲ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಮಾ.31ರಂದು ರಾತ್ರಿ ಇವರು ವಾಸಿಸುವ ಮನೆ ಸಮೀಪ ಸಂಬಂಧಿ ಬಾಲಕನೊಬ್ಬನಿಗೆ ಹೊಡೆಯುತ್ತಿರುವ ಬಗ್ಗೆ ಪ್ರಶ್ನಿಸಿದ್ದನ್ನೇ ನೆಪವಾಗಿರಿಸಿ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ನ್ಯಾಯವಾದಿ ಹಾಗೂ ಇವರ ಪತ್ನಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟಾಪ್ ನ್ಯೂಸ್
