
ನೇಣು ಬಿಗಿದು ಯುವ ವೈದ್ಯೆ ಆತ್ಮಹತ್ಯೆ
Team Udayavani, Jun 7, 2023, 6:08 AM IST

ನೀರ್ಚಾಲು: ಕನ್ಯಪ್ಪಾಡಿ ನಿವಾಸಿ ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಗೋಪಾಲಕೃಷ್ಣ ಭಟ್ ಅವರ ಪುತ್ರಿ ಯುವ ವೈದ್ಯೆ ಡಾ| ಪಲ್ಲವಿ ಜಿ.ಕೆ. (25) ಮನೆಯ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜೂ. 5ರಂದು ರಾತ್ರಿ ಊಟ ಮಾಡಿ ನಿದ್ದೆ ಮಾಡಿದ್ದ ಪಲ್ಲವಿ ಮಂಗಳವಾರ ಬೆಳಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ಕಿಟಕಿ ಸರಳಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಪೂರ್ತಿಗೊಳಿಸಿದ ಬಳಿಕ ಪಲ್ಲವಿ ರೂರಲ್ ಸರ್ವೀಸ್‌ನ ಅಂಗವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದರು. ಬಳಿಕ ಎಂ.ಡಿ. ಕೋರ್ಸ್‌ನ ಪರೀಕ್ಷೆ ಬರೆಯಲು ಅಲ್ಲಿಂದ ರಜೆಯಲ್ಲಿ ತೆರಳಿದ್ದರು. ಪರೀಕ್ಷೆಯ ಬಳಿಕ ಮನೆಗೆ ಬಂದಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಬದಿಯಡ್ಕ ಪೊಲೀಸರು ಮೃತದೇಹದ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kerala: ಮಹಿಳೆಗೆ ದೈಹಿಕ ಕಿರುಕುಳ; ʼಮಲ್ಲು ಟ್ರಾವೆಲರ್ʼ ಯೂಟ್ಯೂಬರ್‌ಗೆ ಲುಕ್ ಔಟ್ ನೋಟಿಸ್

Supreme Court: ಕಪಾಳ ಮೋಕ್ಷ ಪ್ರಕರಣ: ಮಗುವಿನ ಶಿಕ್ಷಣದ ಹೊಣೆ ರಾಜ್ಯವೇ ಹೊರಬೇಕು: ಸುಪ್ರೀಂ

Thothapuri 2; ಇದು ಎಲ್ಲರಿಗೂ ರುಚಿಸುವ ತೋತಾಪುರಿ: ನಟ ಜಗ್ಗೇಶ್ ಮಾತು

Kerala: ಯೋಧನನ್ನು ಅಪಹರಿಸಿ ಹಲ್ಲೆ ನಡೆಸಿದ ಪಿಎಫ್ ಐ ಕಾರ್ಯಕರ್ತರು…ವಿಡಿಯೋ ವೈರಲ್

Channapatna: ಕಳೆದ ವರ್ಷ ಅತಿವೃಷ್ಟಿ; ಈ ಬಾರಿ ಅನಾವೃಷ್ಟಿ!