
ಕಾರು ಅಪಘಾತ: ಜನಪ್ರಿಯ ನಟಿ ಊರ್ವಶಿ ಧೋಲಾಕಿಯಾ ಪಾರು
ಬಸ್ ಚಾಲಕನ ವಿರುದ್ಧ ಯಾವುದೇ ದೂರು ದಾಖಲಿಸದ ನಟಿ
Team Udayavani, Feb 5, 2023, 2:51 PM IST

ಮುಂಬಯಿ: ನಗರಕ್ಕೆ ಹೊಂದಿಕೊಂಡಿರುವ ಥಾಣೆ ಜಿಲ್ಲೆಯಲ್ಲಿ ಜನಪ್ರಿಯ ಕಿರುತೆರೆ ನಟಿ ಊರ್ವಶಿ ಧೋಲಾಕಿಯಾ ಅವರ ಕಾರು ಅಪಘಾತಕ್ಕೀಡಾಗಿದೆ, ಆದರೆ ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕಾಶಿಮಿರಾ ಪ್ರದೇಶದಲ್ಲಿ ಶನಿವಾರ ಈ ಅಪಘಾತ ಸಂಭವಿಸಿದ್ದು, ಶೂಟಿಂಗ್‌ಗಾಗಿ ಮೀರಾ ರೋಡ್ ಪ್ರದೇಶದ ಸ್ಟುಡಿಯೊಗೆ ತೆರಳುತ್ತಿದ್ದಾಗ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಹಿಂದಿನಿಂದ ನಟಿಯ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಸ್ ಚಾಲಕನ ವಿರುದ್ಧ ಧೋಲಾಕಿಯಾ ಯಾವುದೇ ದೂರು ದಾಖಲಿಸಿಲ್ಲ. ಆದಾಗ್ಯೂ, ಸ್ಥಳೀಯ ಪೊಲೀಸರು ಬಸ್ ಚಾಲಕನ ಎಲ್ಲಾ ವಿವರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ರಿಯಾಲಿಟಿ ಶೋ “ಬಿಗ್ ಬಾಸ್” ನ ಆರನೇ ಸೀಸನ್ ಅನ್ನು ನಟಿ ಗೆದ್ದಿದ್ದರು. ದೂರದರ್ಶನದ ಧಾರಾವಾಹಿ ‘ಕಸೌತಿ ಜಿಂದಗಿ ಕೇ’ನಲ್ಲಿನ ಪಾತ್ರಕ್ಕಾಗಿಯೂ ಅವರು ಖ್ಯಾತಿಯಾಗಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಫಿ ವಿತ್ ಕರಣ್ ಸೀಸನ್ 8ರ ಶೋನಲ್ಲಿ ನಟ ಯಶ್, ರಿಷಬ್ ಶೆಟ್ಟಿ ಭಾಗಿ? ಕನ್ನಡಿಗರ ಹವಾ…

“ಹೂ ಅಂಟಾವಾ..’ ಹಾಡಿನಲ್ಲಿ ನಟಿಸದಂತೆ ಸಲಹೆ ಬಂದಿತ್ತಂತೆ ನಟಿ ಸಮಂತಾಗೆ

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್ ವಿರುದ್ದ ನೆಟ್ಟಿಗರು ಗರಂ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್

ಐಟಂ ಡ್ಯಾನ್ಸ್ ಮಾಡ್ಬೇಡ… ʼಊ ಅಂಟವಾʼ ಹಾಡಿಗೆ ಸಮಂತಾ ಆಪ್ತರಿಂದಲೇ ವ್ಯಕ್ತವಾಗಿತ್ತು ವಿರೋಧ
MUST WATCH
ಹೊಸ ಸೇರ್ಪಡೆ

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

ಶಿವಮೊಗ್ಗದಲ್ಲಿ 1.40 ಕೋಟಿ ರೂ.ವಶ; ತರೀಕೆರೆಯಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನ ವಶ

ಪತ್ನಿ, ಮಕ್ಕಳನ್ನು ಟೂರ್ ಗೆಂದು ಮಂಗಳೂರಿಗೆ ಕರೆತಂದು ಕೊಂದು ಬಿಟ್ಟನಾ ಉದ್ಯಮಿ?

ಚುನಾವಣೆ ಕರ್ತವ್ಯ ಲೋಪ : ಇಬ್ಬರು ಶಿಕ್ಷಕರ ಸಸ್ಪೆಂಡ್

ಬುಮ್ರಾ ಬದಲಿಗೆ ಬಲಗೈ ವೇಗಿಯನ್ನು ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್