
ಅಯ್ಯೋ!… ಎಂದ ಪ್ರಧಾನಿ ಮೋದಿ ; ಸಂತಸ ಹಂಚಿಕೊಂಡ ಶ್ರದ್ಧಾ ಜೈನ್
Team Udayavani, Feb 13, 2023, 2:27 PM IST

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ನಟಿ ಶ್ರದ್ಧಾ ಜೈನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ (ಫೆ 12) ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದ ವೇಳೆ ದಿಗ್ಗಜ ನಟರು, ನಿರ್ಮಾಪಕರು ಕ್ರಿಕೆಟ್ ರಂಗದ ತಾರೆಗಳನ್ನು ಭೇಟಿಯಾಗಿದ್ದರು.
”ನಮಸ್ಕಾರ, ಹೌದು, ನಾನು ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರನ್ನು ಭೇಟಿಯಾದೆ. ನನಗೆ ಅವರ ಮೊದಲ ಮಾತು ‘ಅಯ್ಯೋ!’. ನಾನು ಕಣ್ಣು ಮಿಟುಕಿಸುತ್ತಿಲ್ಲ, ಅದು ನನ್ನ ‘ಓ ಮೈ ಜೋಡ್, ಅವರು ನಿಜವಾಗಿಯೂ ಹೇಳಿದ್ದಾರೆ, ಇದು ನಿಜವಾಗಿಯೂ ನಡೆದಿದೆ!!!!’ ನೋಡಿ. ಭಾರತದ ಪ್ರಧಾನ ಮಂತ್ರಿಗಳಿಗೆ ಧನ್ಯವಾದ! ಎಂದು ಸಂಭ್ರಮವನ್ನು ಶ್ರದ್ಧಾ ಜೈನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
Namashkar, yes, I met the Honorable Prime Minister of our Country. His first word to me was ‘Aiyyo!’.
I am not blinking, that’s my ‘O My Jod, he really said that, this is really happening!!!!’ look. Thank you @PMOIndia! pic.twitter.com/zBYexcy1I2— Aiyyo Shraddha (@AiyyoShraddha) February 13, 2023
ಅರಳು ಹುರಿದಂತೆ ಮಾತನಾಡುವ ಶ್ರದ್ಧಾ ಜೈನ್ ಅವರು ರೇಡಿಯೋ ಜಾಕಿಯಾಗಿ ಒಂಬತ್ತು ವರ್ಷ ಖ್ಯಾತಿ ಪಡೆದಿದ್ದರು. ಸ್ವಲ್ಪ ಸಮಯ ಟಿವಿ ಉದ್ಯಮದಲ್ಲೂ ಕೆಲಸ ಮಾಡಿದರು. ಇಂಟರ್ನೆಟ್‌ನಲ್ಲಿ ”ಅಯ್ಯೋ ಶ್ರದ್ಧಾ” ಎಂದು ನೂರಾರು ಭಿನ್ನ, ವಿಭಿನ್ನ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದಾರೆ. ಆಯುಷ್ಮಾನ್ ಖುರಾನಾ ನಟನೆಯ ಬಾಲಿವುಡ್ ಚಿತ್ರ ‘ಡಾಕ್ಟರ್ ಜಿ’ನಲ್ಲೂ ಶ್ರದ್ಧಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರಧಾನಿ ಮೋದಿ ಅವರು ಚಿತ್ರನಟರಾದ ಯಶ್, ರಿಷಬ್ ಶೆಟ್ಟಿ, ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ, ನಿರ್ಮಾಪಕ ವಿಜಯ್ ಕಿರಗಂದೂರು, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸಿನಿಮಾ, ಯುವಜನ, ಕ್ರೀಡಾ ಮೂಲಸೌಕರ್ಯ, ಒಲಿಂಪಿಕ್ಸ್ ಮತ್ತು ಕ್ರೀಡಾ ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಮುಂದಿನ ವರ್ಷ SEP ಜಾರಿ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

3000 cusec ನೀರು ಹರಿಸಲು ಆದೇಶ; ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಸಿದ್ದರಾಮಯ್ಯ

JD(S) ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳಬಾರದು ಅಷ್ಟೇ : ಸಿಎಂ ಸಿದ್ದರಾಮಯ್ಯ

Cauvery Water; ಕಾಂಗ್ರೆಸ್ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ