America: ರಹಸ್ಯ ದಾಖಲೆಗಳೆಲ್ಲ ಡೊನಾಲ್ಡ್ ಟ್ರಂಪ್ ಮನೆಯಲ್ಲಿ!
Team Udayavani, Jun 11, 2023, 7:58 AM IST
ವಾಷಿಂಗ್ಟನ್ ಡಿಸಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೇಶದ ಮಹತ್ವದ ಭದ್ರತಾ, ಸೇನಾ ದಾಖಲೆಗಳನ್ನು ಅತ್ಯಂತ ಅಸುರಕ್ಷಿತ ಜಾಗದಲ್ಲಿರಿಸಿದ ಆರೋಪವೂ ಸೇರಿ ಒಟ್ಟು 37 ಆರೋಪಗಳನ್ನು ಅಮೆರಿಕ ಸರಕಾರ ಹೊರಿಸಿದೆ. ಇವೆಲ್ಲ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು ಸಾಬೀತಾದರೆ ಟ್ರಂಪ್ ಜೈಲು ಪಾಲಾಗಲೇಬೇಕಾಗುತ್ತದೆ.
ಟ್ರಂಪ್ ಅವರು ರಹಸ್ಯ ದಾಖಲೆಗಳನ್ನು ಫ್ಲೋರಿಡಾದಲ್ಲಿರುವ ತಮ್ಮ ಮಾರ್ ಎ ಲಾಗೊ ಎಸ್ಟೇಟ್ನಲ್ಲಿರಿಸಿಕೊಂಡಿದ್ದರು. ಸ್ನಾನದ ಮನೆ, ಶೌಚಾಲಯ, ಶವರ್, ನರ್ತನ ಕೊಠಡಿ, ಮಲಗುವ ಮನೆ ಸಹಿತ ಎಲ್ಲೆಂದರಲ್ಲಿ ಇಟ್ಟುಕೊಂಡಿದ್ದರು. ಒಟ್ಟಾರೆ 80 ದೊಡ್ಡದೊಡ್ಡ ಬಾಕ್ಸ್ಗಳು ಅವರ ಮನೆಯ ಅಲ್ಲಲ್ಲಿ ಹರಡಿಕೊಂಡಿತ್ತು. ಈ ಸಂಬಂಧ 6 ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಅಮೆರಿಕ ಸರಕಾರದ ಆರೋಪದ ಪ್ರಕಾರ, ಅಣ್ವಸ್ತ್ರ ಯೋಜನೆಗಳು, ಅಮೆರಿಕ ಮತ್ತು ಸ್ನೇಹಿತ ರಾಷ್ಟ್ರಗಳ ದೌರ್ಬಲ್ಯಗಳು, ಅಮೆರಿಕದ ಪ್ರತೀಕಾರಾತ್ಮಕ ಸೇನಾ ದಾಳಿಗಳ ಯೋಜನೆಗಳ ಮಾಹಿತಿಗಳೆಲ್ಲವೂ ಈ ದಾಖಲೆಗಳಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ