
ದಲಿತ ಮುಖಂಡ ಪಿ.ಡೀಕಯ್ಯ ಅಸಹಜ ಸಾವಿನ ತನಿಖೆ
Team Udayavani, Apr 2, 2023, 5:58 AM IST

ಬೆಳ್ತಂಗಡಿ: ಅಸಹಜವಾಗಿ ಸಾವನ್ನಪ್ಪಿದ ದಲಿತ ಮುಖಂಡ ಪಿ.ಡೀಕಯ್ಯ ಅವರ ಸಾವಿನ ಬಗ್ಗೆ ಸಿಐಡಿ ತನಿಖೆ ಮುಂದುವರಿದಿದ್ದು ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿ ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.
ದಲಿತ ಮುಖಂಡ ಪಿ.ಡೀಕಯ್ಯ ಅವರು 2022ರ ಜುಲೈ 6ರಂದು ಗರ್ಡಾಡಿಯ ಅವರ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದರು. ಈ ಬಗ್ಗೆ ಸಿಐಡಿ ತನಿಖೆಗೆ ಒತ್ತಾಯಿಸಿ ಮನೆಯವರು ಸಲ್ಲಿಸಿದ ಮನವಿಯಂತೆ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಸಿಐಡಿ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿ ತನಿಖೆ ಆರಂಭಿಸಿದ್ದರು.
ಇದೀಗ ಬೆಂಗಳೂರಿನಿಂದ ಸಿಐಡಿಯ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದ ನಾಲ್ಕು ಮಂದಿಯ ತಂಡ ಬೆಳ್ತಂಗಡಿಗೆ ಆಗಮಿಸಿದ್ದು ತನಿಖೆಯನ್ನು ಆರಂಭಿಸಿದ್ದಾರೆ. ಮೃತ ಡೀಕಯ್ಯ ಅವರ ಕುಟುಂಬದ ಸದಸ್ಯರಿಂದ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ತನಿಖೆ ಇನ್ನಷ್ಟು ದಿನ ಮುಂದುವರಿಯುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
