
ದರೋಡೆಕೋರರಿಗೆ ಶಸ್ತ್ರಾಸ್ತ್ರ ; ದೆಹಲಿಯಲ್ಲಿ 15 ಪಿಸ್ತೂಲ್‌ಗಳ ಸಹಿತ ವ್ಯಕ್ತಿ ಬಂಧನ
Team Udayavani, Mar 10, 2023, 6:10 PM IST

ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ದರೋಡೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ 15 ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿ ಮಧ್ಯಪ್ರದೇಶದ ದೇವಾಸ್ ನಿವಾಸಿ ದೌದ್ ಎನ್ನುವವನಾಗಿದ್ದು, ಆತನ ವಶದಿಂದ ಎಂಟು ಉತ್ತಮ ಗುಣಮಟ್ಟದ ಅರೆ-ಸ್ವಯಂಚಾಲಿತ ಪಿಸ್ತೂಲ್‌ಗಳು, ಏಳು ಸಿಂಗಲ್-ಶಾಟ್ ಪಿಸ್ತೂಲ್‌ಗಳು ಮತ್ತು ಎಂಟು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಂಗ್‌ಪಿನ್ ಶಸ್ತ್ರಾಸ್ತ್ರ ಪೂರೈಕೆದಾರ ಮಲ್ಖಾನ್ ಸಿಂಗ್ ಆಗಿದ್ದು, ಆತ ಪ್ಯಾನ್-ಇಂಡಿಯಾ ನೆಟ್‌ವರ್ಕ್ ಅನ್ನು ನಡೆಸುತ್ತಿದ್ದಾನೆ ಮತ್ತು ದೇಶಾದ್ಯಂತದ ದರೋಡೆಕೋರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೌದ್ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿದ್ದನು.
ಟಾಪ್ ನ್ಯೂಸ್
