
ಇಬ್ಬರು ಬೈಕ್ ಕಳ್ಳರ ಬಂಧನ
Team Udayavani, Mar 30, 2023, 5:08 AM IST

ಮಂಗಳೂರು: ನಗರದ ಎರಡು ಕಡೆ ಬೈಕ್ ಕಳವು ಮಾಡಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜೋಗಿಮಟ್ಟಿ ಸ್ಟೇಡಿಯಮ್ ಸರ್ಕಲ್ ಸಮೀಪದ ಫಾರಿಶ್ ಶರ್ಮಾ ಆಲಿಯಾಸ್ ಗಿಲ್ಲು (19) ಮತ್ತು ಚಿತ್ರದುರ್ಗ ಚಳ್ಳಕೆರೆ ರಸ್ತೆಯ ಧನುಷ್(20) ಬಂಧಿತ ಆರೋಪಿಗಳು. ಇವರು ಸೋಮವಾರ ನಗರದ ಕಪಿತಾನಿಯೋ ಮತ್ತು ವೆಲೆನ್ಸಿಯಾ ಬಳಿ ಕಳವು ಮಾಡಿದ್ದ ಅಂದಾಜು ಒಟ್ಟು 85,000 ರೂ. ಮೌಲ್ಯದ ಎರಡು ಬೈಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಮಂಗಳವಾರದಂದು ನಗರದ ಮಲ್ಲಿಕಟ್ಟೆಯ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಂಶಯದ ಬಂದ ಹಿನ್ನೆಲೆಯಲ್ಲಿ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಆಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿ ಫಾರಿಶ್ ಶರ್ಮಾ 2022ರಲ್ಲಿ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಬೈಕ್ ಕಳವು ಮಾಡಿದ್ದ.
ಟಾಪ್ ನ್ಯೂಸ್
