Asian Wrestling Championship: ಅಮಾನ್ ಸೆಹ್ರಾವತ್ಗೆ ಚಿನ್ನ
Team Udayavani, Apr 14, 2023, 6:41 AM IST
ಆಸ್ತಾನಾ: ಭಾರತದ ಅಮಾನ್ ಸೆಹ್ರಾವತ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನ 57 ಕೆ.ಜಿ. ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅವರು ಫೈನಲ್ನಲ್ಲಿ ಕಿರ್ಗಿಸ್ಥಾನದ ಅಲ್ಮಾಜ್ ಸ್ಮಾಂಬೆಕೋವ್ ಅವರನ್ನು ಸೋಲಿಸುವ ಮೂಲಕ ಈ ಸಾಧನೆ ಮಾಡಿದರು.
ಸೀನಿಯರ್ ಹಂತದಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಸೆಹ್ರಾವತ್ ಅವರು ಸ್ಮಾಂಬೆಕೋವ್ ಅವರನ್ನು 9-4 ಅಂತರದಿಂದ ಸೋಲಿಸಿ ಚಿನ್ನ ಗೆದ್ದರು.
ದಿಲ್ಲಿಯ ಛತ್ರಶಾಲ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಸೆಹ್ರಾವತ್ ಈ ಹಿಂದಿನ ಹೋರಾಟದಲ್ಲಿ ಜಪಾನಿನ ರಿಕುಕೊ ಅರಾಯಿ ಅವರನ್ನು ಕ್ವಾರ್ಟರ್ಫೈನಲ್ನನಲ್ಲಿ 7-1 ಹಾಗೂ ಚೀನದ ವಾನ್ಹಾಹೊ ಝೊಯು ಅವರನ್ನು ಸೆಮಿಫೈನಲ್ನಲ್ಲಿ 7-4 ಅಂತರದಿಂದ ಉರುಳಿಸಿದ್ದರು.
ಸೆಹ್ರಾವತ್ ಅವರಿಗೆ 2023ರಲ್ಲಿ ಇದು ಎರಡನೇ ಪದಕವಾಗಿದೆ. ಈ ಮೊದಲು ಫೆಬ್ರವರಿಯಲ್ಲಿ ನಡೆದ ಝಗ್ರೆಬ್ ಓಪನ್ ಕೂಟದಲ್ಲಿ ಕಂಚು ಜಯಿಸಿದ್ದರು. ಕಳೆದ ವರ್ಷ ನಡೆದ ಅಂಡರ್ 23 ವಿಶ್ವ ಚಾಂಪಿಯನ್ಶಿಪ್ನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು