ಕರತ್ಸೇವ್‌ ಕನಸಿನ ಓಟ; ಜೊಕೋ, ಒಸಾಕಾ, ಸೆರೆನಾ ಸೆಮಿಗೆ


Team Udayavani, Feb 16, 2021, 11:21 PM IST

ಕರತ್ಸೇವ್‌ ಕನಸಿನ ಓಟ; ಜೊಕೋ, ಒಸಾಕಾ, ಸೆರೆನಾ ಸೆಮಿಗೆ

ಮೆಲ್ಬರ್ನ್: ಇದೇ ಮೊದಲ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಆಡುತ್ತಿರುವ ರಶ್ಯದ ಅಸ್ಲಾನ್‌ ಕರತ್ಸೇವ್‌ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಕನಸಿನ ಓಟ ಮುಂದುವರಿಸಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.

ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌, ವನಿತಾ ವಿಭಾಗದ ನೆಚ್ಚಿನ ತಾರೆಯರಾದ ಸೆರೆನಾ ಮತ್ತು ನವೋಮಿ ಒಸಾಕಾ ಕೂಡ ಸೆಮಿ ಸೆಣಸಾಟಕ್ಕೆ ಅಣಿಯಾಗಿದ್ದಾರೆ.

ವಿಶ್ವದ 114ರಷ್ಟು ಕೆಳ ರ್‍ಯಾಂಕಿಂಗ್‌ ಆಟಗಾರನಾಗಿರುವ ಅಸ್ಲಾನ್‌ ಕರತ್ಸೇವ್‌ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಲ್ಗೇರಿಯಾದ 18ನೇ ಶ್ರೇಯಾಂಕದ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು 2-6, 6-4, 6-1, 6-2 ಅಂತರದಿಂದ ಹಿಮ್ಮೆಟ್ಟಿಸಿದರು.

ಕರತ್ಸೇವ್‌ “ಓಪನ್‌ ಎರಾ’ದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲೇ ಸೆಮಿಫೈನಲ್‌ ತಲುಪಿದ ಮೊದಲ ಟೆನಿಸಿಗನಾಗಿದ್ದಾರೆ. ಹಾಗೆಯೇ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ದ್ವಿತೀಯ ಅರ್ಹತಾ ಆಟಗಾರ. 1977ರ ಸಾಧಕ ಬಾಬ್‌ ಗಿಲ್ಟಿನನ್‌ ಮೊದಲಿಗ.

ಇದನ್ನೂ ಓದಿ:ರಾಜ್ಯಸಭೆಯ ಪ್ರತಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ

“ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲೇ ಸೆಮಿಫೈನಲ್‌! ನಿಜಕ್ಕೂ ನಂಬಲಾಗುತ್ತಿಲ್ಲ. ಆದರೆ ನನ್ನ ಗುರಿ ಏನಿದ್ದರೂ ವಿಶ್ವ ರ್‍ಯಾಂಕಿಂಗ್‌ನಲ್ಲಿ ನೂರರೊಳಗಿನ ಸ್ಥಾನ ಅಲಂಕರಿಸುವುದು’ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ ಅಸ್ಲಾನ್‌ ಕರತ್ಸೇವ್‌.

ಜೊಕೋವಿಕ್‌ ಎದುರಾಳಿ
ಕರೆತ್ಸೇವ್‌ ಅವರ ಸೆಮಿಫೈನಲ್‌ ಎದುರಾಳಿ ಬೇರೆ ಯಾರೂ ಅಲ್ಲ, ಹಾಲಿ ಚಾಂಪಿಯನ್‌ ಹಾಗೂ ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌. ರಶ್ಯದ ಅಪಾಯಕಾರಿ ಟೆನಿಸಿಗ ಗ್ರ್ಯಾನ್‌ಸ್ಲಾಮ್‌ ಇತಿಹಾಸದ ಬಹು ದೊಡ್ಡ ಏರುಪೇರಿಗೆ ಕಾರಣರಾಗಬಲ್ಲರೇ ಎಂಬುದೊಂದು ಕುತೂಹಲ!

ದಿನದ ದ್ವಿತೀಯ ಕ್ವಾರ್ಟರ್‌ ಫೈನಲ್‌ನಲ್ಲಿ ಜೊಕೋವಿಕ್‌ ತೀವ್ರ ಸ್ಪರ್ಧೆಯೊಡ್ಡಿದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು 6-7 (6-8), 6-2, 6-4, 7-6 (8-6)ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಜೊಕೋಗೆ ಇದು 9ನೇ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌.

ಸೆರೆನಾ-ಒಸಾಕಾ ಮುಖಾಮುಖೀ
ಮಂಗಳವಾರ ನಡೆದ ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದು ಬಂದ ಸೆರೆನಾ ವಿಲಿಯಮ್ಸ್‌ ಮತ್ತು ನವೋಮಿ ಒಸಾಕಾ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗಲಿದ್ದಾರೆ.

ಸೆರೆನಾ ವಿಲಿಯಮ್ಸ್‌ ವಿಶ್ವದ ನಂ.2 ಆಟಗಾರ್ತಿ ಸಿಮೋನಾ ಹಾಲೆಪ್‌ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿ 2017ರ ಬಳಿಕ ಮೊದಲ ಸಲ “ಮೆಲ್ಬರ್ನ್ ಪಾರ್ಕ್‌’ ಉಪಾಂತ್ಯ ತಲುಪಿದರು.

ನವೋಮಿ ಒಸಾಕಾ ಕೂಡ ಸುಲಭ ಜಯ ಸಾಧಿಸಿದರು. ತೈವಾನ್‌ನ ಸೀ ಸು ವೀ ಅವರನ್ನು 6-2, 6-2ರಿಂದ ಮಣಿಸಿದರು.

ಟಾಪ್ ನ್ಯೂಸ್

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.