ಉಗ್ರರ ದಾಳಿ ; ಬಾಬರ್, ಶಾಹಿದ್ ಅಫ್ರಿದಿ ಸೇರಿ ಪಾಕ್ ಆಟಗಾರರು ಸುರಕ್ಷಿತ ಸ್ಥಳಕ್ಕೆ
Team Udayavani, Feb 5, 2023, 4:58 PM IST

ಕ್ವೆಟ್ಟಾ: ಪಾಕಿಸ್ಥಾನದ ಅಗ್ರ ಕ್ರಿಕೆಟಿಗರಾದ ತಂಡದ ನಾಯಕ ಬಾಬರ್ ಅಜಮ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಇತರರು ಭಾನುವಾರ ಆಡುತ್ತಿದ್ದ ಸ್ಥಳದ ಕೆಲವು ದೂರದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಎಲ್ಲರನ್ನೂ ಡ್ರೆಸ್ಸಿಂಗ್ ರೂಮ್‌ನ ಸುರಕ್ಷತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ನವಾಬ್ ಅಕ್ಬರ್ ಬುಗ್ತಿ ಸ್ಟೇಡಿಯಂನಲ್ಲಿ ಪಾಕಿಸ್ಥಾನ ಸೂಪರ್ ಲೀಗ್ (ಪಿಎಸ್ಎಲ್) ನ ಪ್ರದರ್ಶನ ಪಂದ್ಯವನ್ನು ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಸ್ಫೋಟದ ನಂತರ ಸ್ವಲ್ಪ ಸಮಯ ಸ್ಥಗಿತಗೊಳಿಸಲಾಯಿತು, ಸ್ಪೋಟದಲ್ಲಿ ಐದು ಜನರು ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನ್ (ಟಿಟಿಪಿ) ಭಾನುವಾರ ಹೇಳಿಕೆಯಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಸ್ಫೋಟದಲ್ಲಿ ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು ಎಂದು ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಸಲಗರ ಶರಣು ಕ್ಷಮೆ

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್ ಮಾಲ್ ಜಿ.ಎಲ್.ಒನ್ ಲೋಕಾರ್ಪಣೆ