ಬೆಳಗಾವಿ ಮಹಾನಗರಪಾಲಿಕೆ : ಮೇಯರ್ ಆಗಿ ಶೋಭಾ, ಉಪಮೇಯರ್ ಆಗಿ ರೇಷ್ಮಾ ಆಯ್ಕೆ
Team Udayavani, Feb 6, 2023, 4:21 PM IST
ಬೆಳಗಾವಿ: ಬೆಳಗಾವಿ ಮಹಾನಗರಪಾಲಿಕೆ ನೂತನ ಮಹಾಪೌರರಾಗಿ ಬಿಜೆಪಿಯ ಶೋಭಾ ಸೋಮನಾಚೆ ಮತ್ತು ಉಪಮಹಾಪೌರರಾಗಿ ರೇಷ್ಮಾ ಪಾಟೀಲ ಆಯ್ಕೆಯಾಗಿದ್ದಾರೆ.
ಸೋಮವಾರ ಚುನಾವಣೆ ನಡೆದು ಶೋಭಾ ಪಾಯಪ್ಪ ಸೋಮನಾಚೆ ಅವರು ಮಹಾಪೌರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.
ಉಪಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ರೇಷ್ಮಾ ಪಾಟೀಲ ಅವರು ಪಕ್ಷೇತರ ಅಭ್ಯರ್ಥಿ ವೈಶಾಲಿ ಬಾತಖಂಡೆ ವಿರುದ್ಧ 38 ಮತಗಳಿಂದ ಜಯಗಳಿಸಿದರು. ರೇಷ್ಮಾ ಪಾಟೀಲ ಅವರು 42 ಮತಗಳನ್ನು ಪಡೆದರೆ ವೈಶಾಲಿ ಅವರಿಗೆ ನಾಲ್ಕು ಮತಗಳು ಮಾತ್ರ ಬಿದ್ದಿದ್ದವು. ಆರು ಜನ ಚುನಾವಣೆಗೆ ಗೈರಾಗಿದ್ದರು ಎಂದು ಚುನಾವಣಾಧಿಕಾರಿ ಎಂ ಜಿ ಹಿರೇಮಠ ಹೇಳಿದರು.
ಪಾಲಿಕೆಯ ಒಟ್ಟು 58 ಸದಸ್ಯರ ಬಲಾಬಲದಲ್ಲಿ ಬಿಜೆಪಿ 35 ಸದಸ್ಯರನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತ ಹೊಂದಿತ್ತು. ಕಾಂಗ್ರೆಸ್ ಪಕ್ಷ ಹತ್ತು ಸ್ಥಾನಗಳನ್ನು ಗೆದ್ದಿದೆ. 12 ಜನ ಪಕ್ಷೇತರರು ಹಾಗೂ ಎಐಎಂಐಎಂ ನ ಒಬ್ಬರು ಸದಸ್ಯರಿದ್ದಾರೆ. ಪಾಲಿಕೆಗೆ ಚುನಾವಣೆ ನಡೆದು 17 ತಿಂಗಳ ನಂತರ ಮಹಾಪೌರ ಹಾಗೂ ಉಪಮಹಾಪೌರರ ಚುನಾವಣೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ
ಮುಸ್ಲಿಂ ಬೃಹತ್ ಸಮಾವೇಶ ಮಾಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಈ ದೇಶ ಯಾರೋ ಒಬ್ಬರ, ಅದಾನಿ ಸ್ವತ್ತಲ್ಲ : ಬೆಳಗಾವಿಯಲ್ಲಿ ರಾಹುಲ್ ಗಾಂಧಿ
ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ?: ಖರ್ಗೆ ತಿರುಗೇಟು
ಉರಿಗೌಡ,ನಂಜೇಗೌಡ ಚಿತ್ರದ ವಿರುದ್ಧ ಹೋರಾಟಕ್ಕೆ ನಿರ್ಮಲಾನಂದ ಸ್ವಾಮೀಜಿ ಮುಂದಾಳತ್ವ ವಹಿಸಲಿ