
ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
Team Udayavani, Mar 30, 2023, 1:29 PM IST

ಬಳ್ಳಾರಿ: ಕುಡುಕ ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಕೊಲೆಮಾಡಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ನೆರೆಯ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ರಮೇಶ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದ ಭೂಪ.
ಹೊಸಪೇಟೆ ಮೂಲದ ರಮೇಶ್ ಕಳೆದ 8 ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯ ಆಶಾ ವನಜಾ ಅವರನ್ನು ಮದುವೆಯಾಗಿದ್ದನು. ಗಂಡ ರಮೇಶನ ಮದ್ಯ ಸೇವನೆ ದಿನೇದಿನೆ ಹೆಚ್ಚಿದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ಆಶಾ ವನಜಾ, ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿದ್ದರು. ತವರು ಮನೆಗೆ ಸೇರಿದ್ದರು.
ಒಂದು ವರ್ಷದಿಂದ ಗಂಡನ ಮನೆಗೆ ಬಾರದೆ, ಗಂಡನೊಂದಿಗೆ ಸಂಸಾರ ಮಾಡಲು ಒಲ್ಲೆ ಎಂದ ಪತ್ನಿಯ ಮೇಲೆ ಕುಪಿತಗೊಂಡ ಪತಿ ರಮೇಶ್, ಮಚ್ಚು ಹಿಡಿದು ತವರು ಮನೆಗೆ ಬಂದು ಕೊಲೆಮಾಡಲು ಮುಂದಾಗಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಳೀಯರು, ಮಚ್ಚು ಕಸಿದುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ. ಗಂಡ ರಮೇಶನನ್ನು ಮಚ್ಚು ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
