
ಸದ್ಯ ಬೌಲಿಂಗ್ ಮಾಡಲ್ಲ ಬೆನ್ ಸ್ಟೋಕ್ಸ್
Team Udayavani, Mar 29, 2023, 7:06 AM IST

ಈ ಬಾರಿ ಚೆನ್ನೈ ತಂಡದ ಪಾಲಾಗಿರುವ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಆರಂಭಿಕ ಹಂತದ ಪಂದ್ಯಗಳಲ್ಲಿ ಕೇವಲ ತಜ್ಞ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಎಡಗಾಲಿನ ನೋವಿನ ಕಾರಣ ಅವರು ಬೌಲಿಂಗ್ ಮಾಡುವುದಿಲ್ಲ ಎಂದು ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಹೇಳಿದ್ದಾರೆ.
ಕಳೆದ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಬೆನ್ ಸ್ಟೋಕ್ಸ್ ಕೇವಲ 9 ಓವರ್ ಎಸೆದಿದ್ದರು. ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ಅಂತಿಮ ದಿನ ಅಷ್ಟೇನೂ ಫಿಟ್ ಇರಲಿಲ್ಲ. ನನಗೆ ತಿಳಿದ ಪ್ರಕಾರ ಸ್ಟೋಕ್ಸ್ ಆರಂಭದಲ್ಲಿ ಕೇವಲ ತಜ್ಞ ಬ್ಯಾಟರ್ ಪಾತ್ರವನ್ನು ವಹಿಸಲಿದ್ದಾರೆ. ಬೌಲಿಂಗ್ ಮಾಡಬಲ್ಲರೇ, ಮಾಡುವುದಾದರೆ ಯಾವಾಗ ಎಂದು ಕಾದು ನೋಡಬೇಕಿದೆ. ನಿನ್ನೆ ಸಣ್ಣ ಮಟ್ಟದ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಆದರೆ ಎಡ ಮೊಣಕಾಲಿನ ನೋವಿಗೆ ಅವರು ದಿನವೂ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದಾರೆ. ಚೆನ್ನೈ ಮತ್ತು ಇಸಿಬಿ ಫಿಸಿಯೋಗಳು ಸ್ಟೋಕ್ಸ್ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದಾಗಿ ಹಸ್ಸಿ ಹೇಳಿದರು.
ಟಾಪ್ ನ್ಯೂಸ್
