
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 92 ರೂಪಾಯಿ ಇಳಿಕೆ; ಗೃಹ ಬಳಕೆ ಅಡುಗೆ ಅನಿಲ ಬೆಲೆ ಯಥಾಸ್ಥಿತಿ
ಮುಂಬೈಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,980 ರೂಪಾಯಿ
Team Udayavani, Apr 1, 2023, 12:20 PM IST

ನವದೆಹಲಿ: ಏಪ್ರಿಲ್ 1 ನೂತನ ಆರ್ಥಕ ವರ್ಷದ ಆರಂಭವಾಗಿದ್ದು, ಇಂದಿನಿಂದ ಹಲವು ಹೊಸ ನಿಯಮಗಳು ಜಾರಿಯಾಗಿವೆ. ಕಾರುಗಳ ದರ ದುಬಾರಿಯಾಗಲಿದೆ. ಔಷಧಗಳ ಬೆಲೆ ಇಳಿಕೆಯಾಗಲಿದ್ದು, ಹೊಸ ತೆರಿಗೆ ಪದ್ಧತಿ ಜಾರಿಯಾಗಲಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಸೋಮವಾರ (ಏ.1) ವಾಣಿಜ್ಯ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದೆ.
ಇದನ್ನೂ ಓದಿ:ಮಂಗಳೂರು: ವಾಹನಗಳಿಂದ ಕರ್ಕಶ ಹಾರನ್, ಟಿಂಟೆಡ್ ಗ್ಲಾಸ್ ತೆರವು
2023ರ ಏಪ್ರಿಲ್ 1ರಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 92 ರೂಪಾಯಿ ಇಳಿಕೆ ಮಾಡಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಿತ್ತು. ಇದೀಗ ಏಪ್ರಿಲ್ ನಲ್ಲಿ 92 ರೂಪಾಯಿ ಇಳಿಕೆ ಮಾಡಿದೆ. ಮಾರ್ಚ್ ನಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿತ್ತು.
ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,028 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,685.50 ರೂಪಾಯಿ. 14.2 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆ 902.50 ರೂಪಾಯಿ.
ಕೋಲ್ಕತಾದಲ್ಲಿ 19ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,132 ರೂಪಾಯಿ, ಮುಂಬೈಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,980 ರೂಪಾಯಿ ಹಾಗೂ ಚೆನ್ನೈಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,192.50 ರೂಪಾಯಿ.
ಗೃಹ ಬಳಕೆ ಸಿಲಿಂಡರ್ ಬೆಲೆ:
ದೆಹಲಿ-1,103 ರೂಪಾಯಿ, ಮುಂಬೈ 1,102.50 ರೂಪಾಯಿ, ಚೆನ್ನೈ-118.50 ರೂಪಾಯಿ, ಕೋಲ್ಕತಾ-1,129 ರೂಪಾಯಿ, ಪಾಟ್ನಾ-1201 ರೂಪಾಯಿ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LPG Cylinder; ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ…

ಆರ್ಥಿಕತೆ ಶೇ.7 ಪ್ರಗತಿ ನಿರೀಕ್ಷೆ: ಕಳೆದ ವಿತ್ತ ವರ್ಷದ ಕೊನೆಯಲ್ಲಿ ಶೇ.6.1ರಷ್ಟು ವೃದ್ಧಿ

ಆರಂಭಿಕ ವಹಿವಾಟಿನಲ್ಲಿ… ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 340 ಅಂಕ ಇಳಿಕೆ, ನಿಫ್ಟಿ ಕುಸಿತ

Foreign Fund: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 131 ಅಂಕ ಏರಿಕೆ, ನಿಫ್ಟಿಯೂ ಜಿಗಿತ

Stock Market; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ; 63,000 ಅಂಕಗಳ ದಾಖಲೆ ಮಟ್ಟ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
