
ವಾವ್! ಏನು ರುಚಿ ಅಂತೀರಾ ಈ ಕಟ್ಲೆಟ್….ಸುಲಭ ವಿಧಾನ ಇಲ್ಲಿದೆ…
ಈ ರೀತಿ ಹಾಗಲಕಾಯಿ ಕಟ್ಲೆಟ್ ಮಾಡಿದ್ರೆ ಎಲ್ಲರೂ ಇಷ್ಟ ಪಟ್ಟು ತಿಂತಾರೆ....
ಶ್ರೀರಾಮ್ ನಾಯಕ್, Nov 25, 2022, 5:45 PM IST

ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಒಂದು ತರಕಾರಿಯೆಂದರೆ ಅದು ಹಾಗಲಕಾಯಿ. ಆರೋಗ್ಯದ ದೃಷ್ಟಿಯಲ್ಲಿ ಈ ತರಕಾರಿ ಉತ್ತಮ ಯಾಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹಾಗೂ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಮಾತ್ರವಲ್ಲದೇ ಹಾಗಲಕಾಯಿ ಸೇವನೆಯಿಂದ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.ಹಾಗಲಕಾಯಿಯಿಂದ ಸಾಕಷ್ಟು ರುಚಿಯಾದ ಅಡುಗೆಯನ್ನು ಮಾಡುತ್ತಾರೆ. ಉದಾಃ ಪಲ್ಯ,ಗೊಜ್ಜು, ಸಾಂಬಾರ್,ಚಟ್ನಿ,ಕಿಸ್ಮುರಿ,ಚಿಪ್ಸ್.. ಹೀಗೆ ಪಟ್ಟಿ ಬಳೆಯುತ್ತ ಹೋಗುತ್ತದೆ.ಆದರೆ ನೀವು ಹಾಗಲಕಾಯಿಯ ಕಟ್ಲೆಟ್ ಮಾಡಿ ತಿಂದಿದ್ದೀರಾ..ಹಾಗಿದ್ದರೆ ಅತಿ ಕಡಿಮೆ ಸಮಯದಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು.ಈ ರೆಸಿಪಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ….
ಬೇಕಾಗುವ ಸಾಮಗ್ರಿಗಳು
ಹಾಗಲಕಾಯಿ-1, ಬೇಯಿಸಿದ ಆಲೂಗಡ್ಡೆ (ಬಟಾಟೆ)-2 , ತುರಿದ ಕ್ಯಾರೆಟ್-ಅರ್ಧ ಕಪ್, ಬೇಯಿಸಿದ ಹಸಿ ಬಟಾಣಿ-5ಚಮಚ, ಅಮ್ಚೂರ್ ಪುಡಿ-1ಟೀ ಸ್ಪೂನ್, ಖಾರದ ಪುಡಿ-1ಚಮಚ, ಧನಿಯಾ ಪುಡಿ-ಅರ್ಧ ಚಮಚ, ಹಸಿಮೆಣಸು-2. ಬಾಂಬೆ ರವೆ-ಸ್ವಲ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಹಾಗಲಕಾಯಿ ತಿರುಳು ತೆಗೆದು ತುರಿದುಕೊಳ್ಳಿ. ತದನಂತರ ಒಂದು ಬೌಲ್‌ಗೆ ಹಾಗಲಕಾಯಿಯ ತುರಿ ಮತ್ತು ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಮತ್ತೊಂದು ಪಾತ್ರೆಗೆ ಬೇಯಿಸಿದ ಬಟಾಟೆ, ತುರಿದಿಟ್ಟ ಕ್ಯಾರೆಟ್, ಬೇಯಿಸಿದ ಹಸಿ ಬಟಾಣಿ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ತುರಿದಿಟ್ಟ ಹಾಗಲಕಾಯಿ, ಧನಿಯಾ ಪುಡಿ, ಅಮ್ಚೂರ್ ಪುಡಿ, ಖಾರದ ಪುಡಿ, ಹಸಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿ. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆ ಕಟ್ಟಿ, ತುಸು ಒತ್ತಿ ಚಪ್ಪಟೆ ಮಾಡಿ ರವೆಯಲ್ಲಿ ಹೊರಳಿಸಿ ತೆಗೆಯಿರಿ. ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಎಣ್ಣೆ ಸವರಿ ಕಾದ ನಂತರ 4ರಿಂದ 5 ಕಟ್ಲೆಟ್ ಗಳನ್ನಿಟ್ಟು ಎರಡೂ ಬದಿ ಹುರಿಯಿರಿ ನೀವು ಇದನ್ನು ಎಣ್ಣೆಯಲ್ಲಿಯೂ ಸಹ ಕರಿದು ತೆಗೆಯಬಹುದು). ಟೊಮೆಟೋ ಸಾಸ್ ಜೊತೆಗೆ ಬಿಸಿ ಬಿಸಿಯಾದ ಹಾಗಲಕಾಯಿ ಕಟ್ಲೆಟ್ ಸವಿಯಿರಿ.
ಸೂಚನೆ: ಕಟ್ಲೆಟ್ ಕೋಟಿಂಗ್ ಗೆ ರವೆ ಬದಲಿಗೆ ಬ್ರೆಡ್ ಕ್ರಂಬ್ಸ್ ಸಹ ಬಳಸಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

38 ವರ್ಷಗಳ ನಂತರ,ನಾನು ಚಿತ್ರದ ಮುಖ್ಯ ಪೋಸ್ಟರ್ನಲ್ಲಿದ್ದೇನೆ: ಅನುಪಮ್ ಖೇರ್ ಸಂಭ್ರಮ

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ: ನಿತ್ಯ ಸಂಜೀವಿನಿ ಈ ಎಳನೀರು…

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್ ರೆಸಿಪಿ…
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
