ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ
Team Udayavani, Apr 20, 2022, 7:49 PM IST
ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ರದ್ದಾಗುವ ಅನುಮಾನವನ್ನು ಬುಧವಾರ ಪಂದ್ಯ ಆರಂಭಕ್ಕೆ ಒಂದು ಗಂಟೆ ಮೊದಲು ತೆಗೆದುಹಾಕಲಾಗಿದ್ದು, ಪಂದ್ಯವನ್ನು ಆಡಲಾಗುತ್ತಿದೆ. ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಡೆಲ್ಲಿ ಶಿಬಿರದಲ್ಲಿ ಆರನೇ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದರೂ ಪಂದ್ಯ ಮುಂದುವರಿಯುತ್ತದೆ ಎಂದು ಆಟದ ದಿನದಂದು ಬಿಸಿಸಿಐ ಖಚಿತಪಡಿಸಿತು.
ನ್ಯೂಜಿ ಲ್ಯಾಂಡ್ ಕ್ರಿಕೆಟಿಗ ಟಿಮ್ ಸೀಫರ್ಟ್ ಬೆಳಿಗ್ಗೆ ಪಾಸಿಟಿವ್ ಪರೀಕ್ಷೆಯು ಪಂದ್ಯದ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ ದೆಹಲಿ ತಂಡದ ಉಳಿದ ಸದಸ್ಯರು ಎರಡು ನೆಗೆಟಿವ್ ಪರೀಕ್ಷೆ ವರದಿ ಬಂದ ಬಳಿಕ ಪಂದ್ಯವನ್ನು ಮತ್ತೆ ಟ್ರ್ಯಾಕ್‌ಗೆ ತಂದರು.
“ಇಡೀ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಂದು 2 ಸುತ್ತಿನ COVID ಪರೀಕ್ಷೆಗೆ ಒಳಗಾಯಿತು. ಇಂದು ಬ್ರೆಬೋರ್ನ್ CCI ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯ ನಂ. 32, ಎರಡನೇ ಸುತ್ತಿನ COVID ಪರೀಕ್ಷೆಗಳು ಇಂದು ನಕಾರಾತ್ಮಕವಾಗಿ ಹಿಂತಿರುಗಿದ ನಂತರ ವೇಳಾಪಟ್ಟಿಯ ಪ್ರಕಾರ ಮುಂದುವರಿಯುತ್ತದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ
ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ
ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ
ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ
ವಿವಾದ ಹುಟ್ಟಿಸಿದ ಡೆಲ್ಲಿ ನಾಯಕ ಶ್ರೇಯಸ್ ಹೇಳಿಕೆ: ಗಂಗೂಲಿಗೆ ಸಂಕಷ್ಟಕ್ಕೆ ಸಿಲುಕಿದ ಅಯ್ಯರ್