ಶನಿವಾರ ಇನ್ನಷ್ಟು ಮಾಹಿತಿ ಬಹಿರಂಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
Team Udayavani, Mar 26, 2021, 10:30 PM IST
ಬೆಂಗಳೂರು : ವೀಡಿಯೋದಲ್ಲಿರುವುದು ನಾನಲ್ಲ, ಗ್ರಾಫಿಕ್ಸ್ ಮಾಡಲಾಗಿದೆ ಎಂದು ಯುವತಿಯೇ ಹೇಳಿದ್ದಾಳೆ. ಜತೆಗೆ ಈ ವಿಷಯದಲ್ಲಿ ನಾನು ಯಾರ ಹೆಸರನ್ನು ವೈಯಕ್ತಿಕವಾಗಿ ಹೇಳುವುದಿಲ್ಲ. ಜತೆಗೆ ನಾಳೆ (ಶನಿವಾರ) ಸಂಜೆ ಇನ್ನಷ್ಟು ಮಾಹಿತಿಯನ್ನು ಮಾಧ್ಯಮ ಮತ್ತು ರಾಜ್ಯದ ಜನರ ಮುಂದೆ ಹಂಚಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಎಫ್ಐಆರ್ ಹಾಗೂ ಯುವತಿಯ ಆಡಿಯೋ ಬಿಡುಗಡೆ (ವೈರಲ್) ಬಗ್ಗೆ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ನನ್ನ ಹಳೆಯ ಗೆಳೆಯ. ಅವರು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯಬೇಕು. ನನ್ನಂತೆ ರಾಜೀನಾಮೆ ಕೊಡಬಾರದು ಎಂದು ಟಾಂಗ್ ನೀಡಿದರು.
ಇದನ್ನೂ ಓದಿ :ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ : HDK
ರಾಜ್ಯದಲ್ಲಿ ಹೋರಾಟ ಮಾಡಬೇಕು. ನನ್ನ ಬಗ್ಗೆ ಡಿ.ಕೆ.ಶಿವಕುಮಾರ್ ಸಾಕಷ್ಟು ಮಾತನ್ನಾಡಿದ್ದಾರೆ. ಈಗ ಅದೆಲ್ಲ ಅಗತ್ಯವಿಲ್ಲ. ನಾನು ದೈವಭಕ್ತ, ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂದರು.
ನಾನು ನಿರಪರಾಧಿ, ಈ ಪ್ರಕರಣದಿಂದ ಹೊರಗೆ ಬರುತ್ತೇನೆ, ನನ್ನ ವಿರುದ್ಧ ಎಫ್ಐಆರ್ ಹಾಕಲಿ, 302 ಹಾಕಲಿ. ಎಫ್ಐಆರ್ ದಾಖಲಾದ ತತ್‌ಕ್ಷಣ ನಾನು ಅಪರಾಧಿ ಅಲ್ಲ. ಮೊದಲು ಎಫ್ಐಆರ್ ತನಿಖೆ ಆಗಬೇಕು. ಅನಂತರ ನಾನು ಕೊಟ್ಟಿರುವ ದೂರಿನ ಆಧಾರದ ಎಫ್ಐಆರ್ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥನಾಗಿದ್ದರೇ ಸ್ವತಃ ನಾನೇ ಶರಣಾಗುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಪಿಎಸ್ಐ ನೇಮಕಾತಿ ಅಕ್ರಮ : ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯ