IVF ಮೂಲಕ ಮಗು ಹೊಂದಲು ವಿಚ್ಛೇದಿತ ಏಕಾಂಗಿ ಮಹಿಳೆಗೆ ಚೀನಾ ಅವಕಾಶ
ಶಿಶು ಫಲವತ್ತತೆ ಪ್ರಮಾಣ ಏರಿಕೆ ಮಾಡಲು ಡ್ರ್ಯಾಗನ್ ಸರ್ಕಾರ ಹಲವು ಕ್ರಮ
Team Udayavani, Apr 30, 2023, 8:16 AM IST
ಬೀಜಿಂಗ್: ದೇಶದಲ್ಲಿ ಯುವಕರ ಸಂಖ್ಯೆ, ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಈ ಹಿಂದೆ, ವಿವಾಹಿತ ಮಹಿಳೆಯರಿಗೆ ಹೆರಿಗೆಗಾಗಿ ವೇತನ ಸಹಿತ ರಜೆಯ ಜತೆಗೆ ಮಗು ಭತ್ಯೆಯನ್ನು ನೀಡಲಾಗುತ್ತಿತ್ತು. ಫೆಬ್ರವರಿಯಿಂದ ಅವಿವಾಹಿತ ಮಹಿಳೆಯರಿಗೂ ಹೆರಿಗೆಗಾಗಿ ವೇತನ ಸಹಿತ ರಜೆ ಮತ್ತು ಭತ್ಯೆಗಳನ್ನು ನೀಡುತ್ತಿದೆ. ಪ್ರಸ್ತುತ ಈ ಕ್ರಮವನ್ನು ಸಿಚುವಾನ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದ್ದು, ದೇಶದಲ್ಲೆಡೆ ಇದರ ಅನುಷ್ಠಾನಕ್ಕೆ ಚೀನಾ ಯೋಜಿಸುತ್ತಿದೆ.
ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಚೀನಾ ಸರ್ಕಾರ, ವಿಚ್ಛೇದನ ಪಡೆದ ಏಕಾಂಗಿ ಮಹಿಳೆಯು ಇನ್-ವಿಟ್ರೋ ಫಲವತ್ತತೆ(ಐವಿಎಫ್) ಚಿಕಿತ್ಸೆ ಮೂಲಕ ಮಗು ಹೊಂದಲು ಅವಕಾಶ ಕಲ್ಪಿಸಿದೆ.
ಚೆನ್ ಲುಯೋಜಿನ್ ಎಂಬ 33 ವರ್ಷದ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಏಕಾಂಗಿಯಾಗಿ ನೆಲೆಸಿರುವ ಈಕೆಗೆ ಮಗು ಹೊಂದುವ ಬಯಕೆ. ಹಾಗಾಗಿ ಈಕೆ ಐವಿಎಫ್ ಚಿಕಿತ್ಸೆ ಮೂಲಕ ಗರ್ಭ ಧರಿಸಿದ್ದು, ಸದ್ಯ 10 ತಿಂಗಳ ಗರ್ಭಿಣಿಯಾಗಿದ್ದಾರೆ. ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಈಕೆ, ಸದ್ಯ ಮಗು ಹೊಂದುವ ಖುಷಿಯಲ್ಲಿದ್ದಾರೆ.
ಇದೇ ರೀತಿ ಶಿಶು ಫಲವತ್ತತೆ ಪ್ರಮಾಣ ಏರಿಕೆ ಮಾಡಲು ಚೀನಾ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ