
ಕಾರುಗಳ ಢಿಕ್ಕಿ: ಚಾಲಕರಿಗೆ ಗಾಯ
Team Udayavani, Jun 5, 2023, 5:20 AM IST

ಬಂಟ್ವಾಳ: ಸಜೀಪ ಮೂಡ ಗ್ರಾಮದ ಬೇಂಕ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಮೀಪ ರವಿವಾರ ಎರಡು ಕಾರುಗಳ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿದ್ದು, ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಚಾಲಕರಾದ ಆದರ್ಶ ಮತ್ತು ಸಂಕಪ್ಪ ಅವರು ಗಾಯಗೊಂಡವರು. ಮುಡಿಪು ಕಡೆಯಿಂದ ಮತ್ತು ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಕಾರುಗಳು ಪರಸ್ಪರ ಢಿಕ್ಕಿಯಾಗಿವೆ. ಎರಡೂ ಕಾರಿನಲ್ಲಿ ಚಾಲಕರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Panaji: ರಾಜ್ಯದೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ; ಪಟಾಕಿ ಖರೀದಿ ಭಾರಿ ಇಳಿಕೆ

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ಫ್ಲಡ್ ಲೈಟ್, ಛಾವಣಿ ಎಲ್ಲವೂ ಶಿವಮಯ

Missing Case; ಹುಣಸೂರು: ಕೆಲಸಕ್ಕೆ ಹೋಗಿದ್ದ ಗೃಹಿಣಿ ನಾಪತ್ತೆ

Waste disposal: ರಾ.ಹೆದ್ದಾರಿ ಬದಿ ಕಸ ಎಸೆಯುತ್ತಿದ್ದ ವಾಹನ ತಡೆದು ದಂಡ ವಿಧಿಸಿದ ಪಂಚಾಯತ್

ಗೆಲುವಿನ ಹಾದಿಯಲ್ಲಿ ‘13’ ಸಿನಿಮಾ