Congress Guarantee: 200 ಯೂನಿಟ್‌ ಗಡಿ ದಾಟಿದರೆ ಪೂರ್ಣ ಶುಲ್ಕ


Team Udayavani, Jun 3, 2023, 7:06 AM IST

power lines

ಬೆಂಗಳೂರು: ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ “ಗೃಹಜ್ಯೋತಿ’ಯಲ್ಲಿ ಸರಕಾರ ನಿಗದಿತ ಶುಲ್ಕ ಮತ್ತು ವಿದ್ಯುತ್‌ ಬಳಕೆಗೆ ವಿಧಿಸಲಾಗುವ ತೆರಿಗೆ ಸಹಿತ ಬಹುತೇಕ ಎಲ್ಲ ಪ್ರಕಾರದ ಹೊರೆಯಿಂದ ಮುಕ್ತಗೊಳಿಸಲು ಸರಕಾರ ನಿರ್ಧರಿಸಿದೆ. ಆದರೆ 200 ಯೂನಿಟ್‌ ಗಡಿ ದಾಟಿದರೆ ಎಂದಿನಂತೆ ಪೂರ್ತಿ ಬಿಲ್‌ ಪಾವತಿಸಬೇಕಿದೆ.

ಉಚಿತ ವಿದ್ಯುತ್‌ ಗ್ಯಾರಂಟಿ ಆಗಸ್ಟ್‌ನಿಂದ ಜಾರಿಗೆ ಬರಲಿದೆ ಎಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಆದರೂ ಜನರಲ್ಲಿ ಹಲವು ಪ್ರಶ್ನೆಗಳು ಮೂಡಿದ್ದು, ಅವುಗಳಿಗೆ ಹಣಕಾಸು ಇಲಾಖೆ ಮತ್ತು ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಉತ್ತರಿಸಿದ್ದಾರೆ. ಅದರ ವಿವರ ಹೀಗಿದೆ.

 200 ಯೂನಿಟ್‌ ಗಡಿ ದಾಟಿದರೆ ಒಟ್ಟಾರೆ ಬಿಲ್‌ ಪಾವತಿಸಬೇಕೇ? ಮೇಲಿನ ವಿದ್ಯುತ್‌ ಬಳಕೆಗೆ ಬಿಲ್‌ ಪಾವತಿಸಿದರೆ ಸಾಕಾ?
– 200 ಯೂನಿಟ್‌ ದಾಟಿದರೆ ಎಂದಿನಂತೆ ಇಡೀ ವಿದ್ಯುತ್‌ ಬಿಲ್‌ ಪಾವತಿಸಬೇಕಾಗುತ್ತದೆ. ಉದಾಹರಣೆಗೆ 210 ಯೂನಿಟ್‌ ಬಳಸಿದ್ದರೆ, ಕೇವಲ 10 ಯೂನಿಟ್‌ ಬಿಲ್‌ ಕಟ್ಟುವಂತಿಲ್ಲ. ಒಟ್ಟಾರೆ 210 ಯೂನಿಟ್‌ ಬಿಲ್‌ ಕಟ್ಟಬೇಕಾಗುತ್ತದೆ.

 ವರ್ಷದ ಸರಾಸರಿ ಮೇಲೆ ಹೆಚ್ಚುವರಿ ಶೇ. 10ರಷ್ಟು ಬಳಕೆಗೆ ವಿನಾಯಿತಿ ಇದೆ. ಆ ಮಿತಿಯನ್ನೂ ಮೀರಿದರೆ ಹೇಗೆ?
– ಮಿತಿ ಎಷ್ಟು ಮೀರಿರುತ್ತಾರೋ ಅದಕ್ಕೆ ಮಾತ್ರ ಬಿಲ್‌ ಬರುತ್ತದೆ. ಉದಾಹರಣೆಗೆ 150 ಯೂನಿಟ್‌ ಸರಾಸರಿ ಬಳಕೆ ಅಂದುಕೊಂಡರೆ, ಶೇ. 10 ಹೆಚ್ಚುವರಿಯೂ ಸೇರಿ 165 ಯೂನಿಟ್‌ ಆಗುತ್ತದೆ. ಗ್ರಾಹಕ ಬಳಕೆ ಪ್ರಮಾಣ 180 ಯೂನಿಟ್‌ ಆದರೆ ಮಿತಿಯನ್ನು ದಾಟಿದ, ಅಂದರೆ 15 ಯೂನಿಟ್‌ಗೆ ಮಾತ್ರ ಬಿಲ್‌ ಬರುತ್ತದೆ.

 ನಿಗದಿತ ಶುಲ್ಕ ಮತ್ತು ಬಳಕೆ ಶುಲ್ಕದ ಮೇಲಿನ ತೆರಿಗೆ ಹೇಗೆ?
– ವಿದ್ಯುತ್‌ ಬಳಕೆ ಶುಲ್ಕ ಮತ್ತು ನಿಗದಿತ ಶುಲ್ಕ ಹಾಗೂ ತೆರಿಗೆ ಮೂರನ್ನೂ ಸರಕಾರವೇ ಭರಿಸಲಿದೆ. ಗ್ರಾಹಕರ ಮೇಲೆ ಯಾವುದೇ ಹೊರೆ ಇರುವುದಿಲ್ಲ.

 ಎಷ್ಟು ಗ್ರಾಹಕರು ಈ ಯೋಜನೆ ವ್ಯಾಪ್ತಿಗೆ ಬರಬಹುದು?
– ಸುಮಾರು ಎರಡು ಕೋಟಿಗೂ ಅಧಿಕ ಗೃಹ ಬಳಕೆದಾರರಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿಯೂ ಸೇರಿದೆ. ಅವರಲ್ಲಿ ಶೇ. 90ಕ್ಕೂ ಅಧಿಕ ಗ್ರಾಹಕರು ಇದರ ಫ‌ಲಾನುಭವಿಗಳಾಗಲಿದ್ದಾರೆ.

ಟಾಪ್ ನ್ಯೂಸ್

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Kapu ಮೂಳೂರು: ಕ್ಯಾಂಟೀನ್‌ ಮಾಲಕ ಆತ್ಮಹತ್ಯೆ

Untitled-1

Missing Case ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ

Mangaluru ವಿದೇಶಿ ಮಹಿಳೆಯ ಹೆಸರಲ್ಲಿ 8.42 ಲ.ರೂ. ವಂಚನೆ

Mangaluru ವಿದೇಶಿ ಮಹಿಳೆಯ ಹೆಸರಲ್ಲಿ 8.42 ಲ.ರೂ. ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

karnataka bund

Cauvery: ನಾಳೆ ಕರ್ನಾಟಕ ಬಂದ್‌- ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವೂ ಸ್ಥಗಿತ ಸಾಧ್ಯತೆ

bosaraju 1

ಬರ ನಿರ್ವಹಣೆಗೆ ಅಂತರ್ಜಲ ಸುಧಾರಣೆಯೇ ಪರಿಹಾರ: ಬೋಸರಾಜು

lok adalat

Karnataka: ಪುನರ್‌ವಿಂಗಡಣೆ: ಆಕ್ಷೇಪಣೆಗಳಿಗೆ “ಅದಾಲತ್‌”

dr g param

IT-BT ಸಹಭಾಗಿತ್ವದಲ್ಲಿ ಸೈಬರ್‌ ಕೇಂದ್ರ: ಪರಮೇಶ್ವರ್‌

karnataka govt logo

Karnataka: ಒಂದೇ ದಿನ 26,000 ಆಸ್ತಿ ನೋಂದಣಿ- ಸರಕಾರಕ್ಕೆ 311 ಕೋಟಿ ರೂ. ಆದಾಯ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

Mangaluru ಕೋಸ್ಟ್‌ಗಾರ್ಡ್‌ನಿಂದ ವೈದ್ಯಕೀಯ ತುರ್ತು ನೆರವು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

City Bus ನಿರ್ವಾಹಕನಿಗೆ ಹಲ್ಲೆ; ಹೊಡೆದಾಟ ಓರ್ವನಿಗೆ ಗಾಯ, ಎರಡು ಪ್ರಕರಣ ದಾಖಲು

CONTI

ಇನ್ನು ಏಳಲ್ಲ ,ಎಂಟು ಖಂಡ!- 375 ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡ ವಿಜ್ಞಾನಿಗಳಿಂದ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Ullal ರಿಕ್ಷಾ ಟೆಂಪೋ ಚಾಲಕನ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.