ವಲಸೆ ನೀತಿಗೆ ಒಪ್ಪಿಗೆ; ಸಂಸತ್‌ಗೆ ರವಾನೆ
Team Udayavani, Jan 22, 2021, 6:30 AM IST
ವಾಷಿಂಗ್ಟನ್: ಚುನಾವಣ ಪ್ರಚಾರದ ವೇಳೆ ಪ್ರಸ್ತಾವಿಸಿದ್ದಂತೆ ವಲಸೆ ನೀತಿಯನ್ನು ಸಮಗ್ರವಾಗಿ ಬದಲಿಸಲು ಜೋ ಬೈಡೆನ್ ಮುಂದಾಗಿದ್ದಾರೆ.
ಅಧಿಕಾರದ ಮೊದಲ ದಿನವೇ “ಅಮೆರಿಕ ಪೌರತ್ವ ಕಾಯ್ದೆ 2021’ಯ ಬಗ್ಗೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ್ದಾರೆ. ಜತೆಗೆ ಅದನ್ನು ಅನುಮೋದಿಸಲು ಸಂಸತ್‌ಗೆ ಕಳುಹಿಸಿಕೊಟ್ಟಿದ್ದಾರೆ. ಸೂಕ್ತ ದಾಖಲೆ ಹೊಂದಿಲ್ಲದ ವಲಸಿಗರು, ಎಚ್-1 ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿ ಅಲ್ಲಿನ ಪೌರತ್ವ ಹೊಂದುವವರಿಗೆ ಈ ಕಾಯ್ದೆ ನೆರವಾಗಲಿದೆ. ಅದರಲ್ಲಿ ನಿಗದಿತ ದೇಶಕ್ಕೆ ಇಂತಿಷ್ಟೇ ಸಂಖ್ಯೆಯಲ್ಲಿ ಗ್ರೀನ್ ಕಾರ್ಡ್ ನೀಡುವ ಮಿತಿ ತೆಗೆದು ಹಾಕಲು ಸಲಹೆ ಮಾಡಲಾಗಿದೆ. ಇದರಿಂದಾಗಿ ದಶಕಗಳ ಕಾಲ ಅಮೆರಿಕದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರದ ಉದ್ಯೋಗಿಗಳಿಗೆ ಪೌರತ್ವ ಪಡೆಯಲು ಕಾಯುತ್ತಿದ್ದವರಿಗೆ ನೆರವಾಗಲಿದೆ. ಟ್ರಂಪ್ ಸರಕಾರದ ಅವಧಿಯಲ್ಲಿ ಎಚ್-1ಬಿ ವೀಸಾ ಹೊಂದಿದವರ ಸಂಗಾತಿಗಳಿಗೆ ಕೆಲಸ ಮಾಡುವ ಅಧಿಕಾರ ಇಲ್ಲ. ಹೊಸ ನೀತಿಯಲ್ಲಿ ಅದನ್ನು ಮತ್ತೆ ಜಾರಿ ಗೊಳಿಸಲು ಸಲಹೆ ಮಾಡಲಾಗಿದೆ.
ಹೊಸ ಕಾಯ್ದೆಯಲ್ಲಿ ಯಾವುದೇ ದಾಖಲೆಗಳನ್ನು ಹೊಂದಿ ಲ್ಲದೆ ಇರುವರಿಗೆ ಪೌರತ್ವ ನೀಡುವ ಉದ್ದೇಶ ಹೊಂದಲಾಗಿದೆ. ಆಂಗ್ಲ ಭಾಷೆಯ ಮೇಲಿನ ಹಿಡಿತ, ಅರ್ಜಿದಾರರ ಮಾಹಿತಿ ಖಚಿತಪಡಿಸುವಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು. ಇತರ ಜತೆಗೆ ಗ್ರೀನ್ ಕಾರ್ಡ್ ಪಡೆದುಕೊಂಡು ಮೂರು ವರ್ಷ ಪೂರ್ತಿಯಾಗಿರಬೇಕು. ಮೂರು ವರ್ಷಗಳ ಗಡುವನ್ನು ಜ.1ಕ್ಕೆ ಮಿತಿಗೊಳಿಸಲಾಗಿದೆ.
ಭಾಷಣ ಬರೆದದ್ದು ವಿನಯ ರೆಡ್ಡಿ: ಬೈಡೆನ್ ಮಾಡಿದ ಪ್ರಭಾವ ಶಾಲಿ ಭಾಷಣ ಬರೆದದ್ದು ತೆಲಂಗಾಣ ಮೂಲದ ವಿನಯ ರೆಡ್ಡಿ. ಆದಕ್ಕಾಗಿ ಅವರು ಆಯ್ಕೆ ಮಾಡಿದ ವಿಷಯ, ಅದನ್ನು ಪ್ರಸ್ತುತಪಡಿಸಿದ ಶೈಲಿಗೆ ಭಾರೀ ಹೊಗಳಿಕೆ ವ್ಯಕ್ತವಾಗುತ್ತಿದೆ.
ಚುನಾವಣೆಯ ಸಮಯದಲ್ಲಿ ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಅವರ ಭಾಷಣ ರಚನೆಕಾರರಾಗಿದ್ದ ಭಾರತೀಯ ಮೂಲದ ವಿನಯ ರೆಡ್ಡಿ ಈಗ ಶ್ವೇತ ಭವನದ ಭಾಷಣ ರಚನೆ ತಂಡದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿನಯ್ ರೆಡ್ಡಿ ಹುಟ್ಟಿ ಬೆಳೆದದ್ದು ಅಮೆರಿಕದಲ್ಲೇ ಆದರೂ ಅವರ ಕುಟುಂಬದ ಮೂಲವಿರುವುದು ತೆಲಂಗಾಣದ ಪೋತಿರೆಡ್ಡಿ ಪೇಟ ಎಂಬ ಪುಟ್ಟ ಗ್ರಾಮದಲ್ಲಿ.
ಟ್ರಂಪ್ ಜತೆಗೆ ಮಾತಾಡುವೆ
ಶ್ವೇತ ಭವನದಿಂದ ನಿರ್ಗಮಿಸುವ ಮೊದಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೃತ್ಪೂರ್ವಕ ಸಲಹೆಗಳನ್ನು ನೀಡಿದ್ದಾರೆ ಎಂದು ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಇದೊಂದು ಖಾಸಗಿ ವಿಚಾರವಾಗಿರುವ ಅಂಶವಾದ್ದರಿಂದ ಅದನ್ನು ಬಹಿರಂಗವಾಗಿ ಮಾತನಾಡುವು ದಿಲ್ಲ. ನಿಕಟ ಪೂರ್ವ ಅಧ್ಯಕ್ಷರ ಜತೆಗೆ ಮಾತನಾಡುವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!
ಪ್ರಪಾತಕ್ಕುರುಳಿದ ಟೈಗರ್ ವುಡ್ಸ್ ಕಾರು: ಗಂಭೀರ ಗಾಯಗೊಂಡ ಪ್ರಸಿದ್ಧ ಗಾಲ್ಫರ್
ಭಾರತ-ಚೀನ ನಡುವೆ 5.63 ಲಕ್ಷ ಕೋಟಿ ರೂ. ಮೊತ್ತದ ವಹಿವಾಟು
‘ಉಗ್ರವಾದ’ ಮನುಕುಲಕ್ಕೆ ಗಂಭೀರ ಬೆದರಿಕೆ: ಜೈಶಂಕರ್
MUST WATCH
ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ
ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ
ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1
ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani
ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?
ಹೊಸ ಸೇರ್ಪಡೆ
ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?
ದಚ್ಚು ಮಾತಿಗೆ ಜಗ್ಗೇಶ್ ಮನಸ್ಸು ಹಗುರ…ದರ್ಶನ್ ಗೆ ಧನ್ಯವಾದ ಹೇಳಿದ ನವರಸ ನಾಯಕ